ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರ ಸ್ಪಷ್ಟೋಕ್ತಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ದೇವಸ್ಥಾನಗಳಿಂದ ಬರುವ ಆದಾಯವನ್ನು ಜನಕಲ್ಯಾಣಕ್ಕಾಗಿ ಬಳಸಬೇಕು ಮತ್ತು ಅದರ ನಿಯಂತ್ರಣವು ಸರಕಾರದ ಬದಲಿಗೆ ಜವಾಬ್ದಾರಿಯುತ ಭಕ್ತರ ಬಳಿ ಇರಬೇಕು. ದೇಶದ ಪ್ರಮುಖ ದೇವಸ್ಥಾನಗಳ ನಿರ್ವಹಣೆ ಮತ್ತು ಅವುಗಳ ಆದಾಯದ ಜನಕಲ್ಯಾಣ ಬಳಕೆಯು ಪಾರದರ್ಶಕವಾಗಿರಬೇಕು, ಹಾಗೆಯೇ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆಯಬೇಕು. ಪ್ರಶ್ನೆಯೆಂದರೆ, ದೇವಸ್ಥಾನಗಳನ್ನು ಯಾರು ನಿರ್ವಹಿಸುತ್ತಾರೆ? ಅಲ್ಲಿ ನಿಯಮಿತ ಪೂಜೆ-ಪುನಸ್ಕಾರಗಳು ನಡೆಯುವಂತೆ ಯಾರು ಕಾಳಜಿ ವಹಿಸುತ್ತಾರೆ? ಸಿಖ್ ಸಮಾಜವು ಗುರುದ್ವಾರಗಳ ನಿರ್ವಹಣೆಯನ್ನು ಅತ್ಯಂತ ಉತ್ತಮವಾಗಿ ಮಾಡುತ್ತದೆ. ದೇಶದ ಧರ್ಮಾಚಾರ್ಯರು ಈ ಬಗ್ಗೆ ಚಿಂತನಶೀಲರಾಗಬೇಕು ಮತ್ತು ಸಮಾಜವು ಇದರ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘವು ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ಫಲಿತಾಂಶಗಳು ಗೋಚರಿಸಲಿವೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು ಸಂಘದ ೧೦೦ನೇ ವರ್ಷದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದರು.
ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು ಮಂಡಿಸಿದ ಅಂಶಗಳು
೧. ಸಂಘವು ಸರಕಾರವನ್ನು ನಡೆಸುತ್ತದೆ ಎಂಬುದು ತಪ್ಪು ಕಲ್ಪನೆ!
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರಕಾರವನ್ನು ನಡೆಸುತ್ತದೆ ಎಂಬುದು ತಪ್ಪು ಕಲ್ಪನೆ. ನಮ್ಮ ಬಳಿ ಅಂತಹ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ. ಸರಕಾರವನ್ನು ನಡೆಸುವುದು ಅತ್ಯಂತ ಕಠಿಣ ಕೆಲಸವಾಗಿದೆ. ಆದ್ದರಿಂದ ನಾವು ನಮ್ಮ ಕಾರ್ಯವನ್ನು ಮಾಡುತ್ತೇವೆ; ಆದರೆ ಸಲಹೆಗಳನ್ನು ನೀಡಬಹುದು. ಸರಕಾರವನ್ನು ವಿರೋಧಿಸುವವರು ನಮ್ಮನ್ನೂ ಟೀಕಿಸುತ್ತಾರೆ; ಆದರೆ ಅಧಿಕಾರದಲ್ಲಿರುವ ಅನೇಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
೨. ಸಂಘದ ದೊಡ್ಡ ಸಮಸ್ಯೆ ಹಿಂದೂ ಸಮಾಜವೇ ಆಗಿದೆ!
ಏಕೆಂದರೆ ಸಮಾಜವನ್ನು ಜಾಗೃತಗೊಳಿಸಲು ದೊಡ್ಡ ಪ್ರಯತ್ನಗಳು ಬೇಕಾಗುತ್ತಿವೆ. ಹಿಂದೂ ಸಮಾಜದಲ್ಲಿ ಶಕ್ತಿಯಿದೆ; ಆದರೆ ಅದು ವಿಭಜಿಸಲ್ಪಟ್ಟಿದೆ ಮತ್ತು ಸ್ವಾರ್ಥದಲ್ಲಿ ಸಿಲುಕಿಕೊಂಡಿದೆ. ಸಮಾಜವು ಒಗ್ಗೂಡಿದರೆ ದೇಶವನ್ನು ಮುನ್ನಡೆಸಬಹುದು.
೩. ಸಂಘದಲ್ಲಿ ಯಾವುದೇ ವೈಯಕ್ತಿಕ ಲಾಭ ಸಿಗುವುದಿಲ್ಲ!
ಸಂಘದ ಕಾರ್ಯಪದ್ಧತಿಯು ಗಟ್ಟಿಯಾಗಿದೆ; ಏಕೆಂದರೆ ಸಂಘವು ದೇಶದ ಉನ್ನತಿಗಾಗಿ ಕಾರ್ಯಕರ್ತರ ಕೇವಲ ಸಮರ್ಪಣೆಯನ್ನು ನಿರೀಕ್ಷಿಸುತ್ತದೆ, ಬದಲಾಗಿ ಏನನ್ನೂ ನೀಡುವುದಿಲ್ಲ. ಸಂಘಕ್ಕೆ ಅವಕಾಶವಾದಿ ಜನರು ಬಂದರೂ ಅವರು ಹೆಚ್ಚು ಕಾಲ ಉಳಿಯುವುದಿಲ್ಲ; ಏಕೆಂದರೆ ಇಲ್ಲಿ ಅವರಿಗೆ ಯಾವುದೇ ವೈಯಕ್ತಿಕ ಲಾಭ ಸಿಗುವುದಿಲ್ಲ ಎಂಬುದು ಶೀಘ್ರದಲ್ಲೇ ಅವರಿಗೆ ಅರ್ಥವಾಗುತ್ತದೆ.
೪. ಹೊಸ ವಿಷಯಗಳಿಗೆ ವಿರೋಧವಿಲ್ಲ; ಆದರೆ ಪಾಶ್ಚಾತ್ಯೀಕರಣದ ಕುರುಡು ಅನುಕರಣೆ ಸರಿಯಲ್ಲ. ಆಧುನಿಕರಾಗಿರಿ; ಆದರೆ ನಿಮ್ಮ ಮೂಲ ಮತ್ತು ಸಂಸ್ಕೃತಿಯನ್ನು ಮರೆಯಬೇಡಿ.
೫. ಅವಿಭಕ್ತ ಕುಟುಂಬಗಳು ಈಗ ಕಡಿಮೆಯಾಗಿವೆ; ಆದರೆ ರಕ್ತಸಂಬಂಧಗಳ ಭಾವನೆ ಕಾಪಾಡಿಕೊಳ್ಳಬೇಕು. ಕನಿಷ್ಠ ವಾರಕ್ಕೊಮ್ಮೆ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತುಕೊಳ್ಳಬೇಕು. ಮಕ್ಕಳಿಗೆ ಮನೆ ಮತ್ತು ಶಾಲೆ ಎರಡರಿಂದಲೂ ಸಂಸ್ಕಾರ ದೊರೆಯುತ್ತದೆ.
೬. ಸಾಮಾಜಿಕ ಮಾಧ್ಯಮಗಳು ಒಂದು ತಂತ್ರಜ್ಞಾನವಾಗಿದೆ. ಅದರ ಮಾಲೀಕರಾಗಿರಿ, ಗುಲಾಮರಲ್ಲ. ‘ಸ್ಕ್ರೀನ್ ಟೈಮ್’ (ಬಳಕೆಯ ಸಮಯ) ನಿಗದಿಪಡಿಸಿ ಮತ್ತು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ.
೭. ರಾಜಕಾರಣವು ಸಮಾಜದಿಂದಲೇ ನಿರ್ಮಾಣವಾಗುತ್ತದೆ. ಸಮಾಜದಲ್ಲಿ ಸಾಮರಸ್ಯ ಮತ್ತು ತಿಳುವಳಿಕೆ ಇದ್ದರೆ, ನಾಯಕರೂ ಹಾಗೆಯೇ ಇರುತ್ತಾರೆ. ಸಮಾಜ ಜಾಗೃತವಾಗಿದ್ದರೆ ಪರಿಸ್ಥಿತಿ ಸುಧಾರಿಸುತ್ತದೆ.
ಅಮೆರಿಕದ ಆಮದು ಸುಂಕದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ!
ಇದು ಅಮೆರಿಕದ ಹಳೆಯ ಪದ್ಧತಿ. ಶಸ್ತ್ರಾಸ್ತ್ರ ಮತ್ತು ಆರ್ಥಿಕ ಶಕ್ತಿಯ ಬಲದಿಂದ ಭಾರತವನ್ನು ಬಗ್ಗಿಸಲು ಅಮೆರಿಕ ಬಯಸುತ್ತದೆ; ಆದರೆ ಭಾರತವು ಎಷ್ಟು ಸಶಕ್ತವಾಗಿದೆಯೆಂದರೆ, ನಾವು ಅಮೆರಿಕದ ಮುಂದೆ ಬಗ್ಗಿಲ್ಲ. ನಮ್ಮ ಜನತೆ ಸಿದ್ಧರಾಗಿದ್ದಾರೆ. ಆದ್ದರಿಂದ ಅಮೆರಿಕದ ಆಮದು ಸುಂಕದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ