ಉಜ್ಜಯಿನಿ (ಮಧ್ಯಪ್ರದೇಶ) ಇಲ್ಲಿನ ಶ್ರೀ ಮಹಾಕಾಳೇಶ್ವರ ಮಂದಿರದ ಬಳಿ ಕೇಸರಿ ವಸ್ತ್ರ ಧರಿಸಿ ಅಡ್ಡಾಡುತ್ತಿದ್ದ ಮುಸಲ್ಮಾನನಿಗೆ ಬಜರಂಗ ದಳದವರಿಂದ ಥಳಿತ. Muslim Men Disguise Hindu Saint

ಉಜ್ಜಯಿನಿ (ಮಧ್ಯಪ್ರದೇಶ) – ಹಿಂದೂಗಳಂತೆ ಉಡುಪು ಧರಿಸಿ, ಕೊರಳಲ್ಲಿ ತುಳಸಿ ಮಾಲೆ, ಹಣೆಯ ಮೇಲೆ ತಿಲಕ ಮತ್ತು ಕೇಸರಿ ವಸ್ತ್ರವನ್ನು ಧರಿಸಿ ಅಡ್ಡಾಡುತ್ತಿದ್ದ ಮುಸಲ್ಮಾನ ಯುವಕನನ್ನು ಬಜರಂಗ ದಳದ ಕಾರ್ಯಕರ್ತರು ಹಿಡಿದಿದ್ದಾರೆ. ವಿಶೇಷವೆಂದರೆ ಈತನು ಪ್ರಸಿದ್ಧ ಜ್ಯೋತಿರ್ಲಿಂಗ ಶ್ರೀ ಮಹಾಕಾಳೇಶ್ವರ ಮಂದಿರ ಸೇರಿದಂತೆ ಮಂಗಳನಾಥ ಮಂದಿರದ ಪರಿಸರದಲ್ಲೂ ಓಡಾಡುತ್ತಿದ್ದನು. ಬಜರಂಗ ದಳದ ಕಾರ್ಯಕರ್ತರು ಆತನನ್ನು ಹಿಡಿದು ವಿಚಾರಣೆ ನಡೆಸಿದರು ಮತ್ತು ಕೆಲವರು ಆತನನ್ನು ಥಳಿಸಿದ್ದಾರೆ.

೧. ಬಜರಂಗ ದಳದ ಜಿಲ್ಲಾ ಸಂಯೋಜಕ ರಿಷಭ ಕುಶ್ವಾಹ ಅವರು ಮಾಹಿತಿ ನೀಡಿ, ಯುವಕನೊಬ್ಬ ಹೋಟೆಲ್‌ ನಲ್ಲಿ ತಂಗಲು ಕೋಣೆ ಪಡೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು; ಆದರೆ ಆತನು ತನ್ನ ಗುರುತುಪತ್ರದ  ಬದಲು ಯುವತಿಯೊಬ್ಬಳ ಗುರುತುಪತ್ರದಲ್ಲಿ ಕೋಣೆಯನ್ನು ಕಾಯ್ದಿರಿಸುತ್ತಿದ್ದನು. ಮಾಹಿತಿ ಸಿಗುತ್ತಿದ್ದಂತೆಯೇ ಬಜರಂಗ ದಳದ ಕಾರ್ಯಕರ್ತರು ನಾನಾಖೇಡಾಕ್ಕೆ ತಲುಪಿದರು. ಅಲ್ಲಿ ಸಂಬಂಧಿತ ಯುವಕ ಪತ್ತೆಯಾದನು. ಆತನ ವೇಷಭೂಷಣ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಏಕೆಂದರೆ ಆತನು ಮುಸಲ್ಮಾನನಾಗಿದ್ದರೂ, ತನ್ನ ಗುರುತನ್ನು ಮರೆಮಾಚಲು ಕೇಸರಿ ವಸ್ತ್ರ ಧರಿಸಿದ್ದನು. ಕೊರಳಲ್ಲಿ ತುಳಸಿ ಮಾಲೆ ಮತ್ತು ಹಣೆಯ ಮೇಲೆ ತಿಲಕವನ್ನಿಟ್ಟುಕೊಂಡಿದ್ದನು.

೨. ಯುವಕನಿಗೆ ಹೆಸರು ಕೇಳಿದಾಗ ಆತನು ಹಿಂದೂ ಹೆಸರನ್ನು ಹೇಳಿದನು; ಆದರೆ ಆತನ ಬಳಿ ಇದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಆತನ ಹೆಸರು ಜಾಫರ್ ಎಂದು ಸ್ಪಷ್ಟವಾಯಿತು. ಜಾಫರ್ ಎಂಬಾತನು ದೆಹಲಿಯಿಂದ ಯುವತಿಯೊಬ್ಬಳನ್ನು ಉಜ್ಜಯಿನಿಗೆ ಕರೆದುಕೊಂಡು ಬಂದಿದ್ದನು ಎನ್ನಲಾಗಿದೆ. ಹೋಟೆಲ್‌ ನಲ್ಲಿ ಕೋಣೆ ಪಡೆಯಲು ಆತನು ತನ್ನ ಗುರುತುಪತ್ರದ ಬದಲು ಯುವತಿಯ ದಾಖಲೆಗಳನ್ನು ಬಳಸಿದ್ದನು.

೩. ಕಾರ್ಯಕರ್ತರು ತೀವ್ರ ವಿಚಾರಣೆ ನಡೆಸಿದಾಗ, ತಾನು ಆ ಯುವತಿಯೊಂದಿಗೆ ಮಹಾಶಿವರಾತ್ರಿಯ ನಿಮಿತ್ತ ಮಂಗಲನಾಥ ಮತ್ತು ಮಹಾಕಾಳ ಮಂದಿರದ ಪರಿಸರದಲ್ಲಿ ದಿನವಿಡೀ ಸುತ್ತಾಡುತ್ತಿದ್ದೆ ಮತ್ತು ಸಂಜೆ ಹೋಟೆಲ್‌ಗೆ ಹೋಗಿದ್ದೆ ಎಂದು ಹೇಳಿದ್ದಾನೆ.

೪. ಕೆಲವು ಕಾರ್ಯಕರ್ತರು ಜಾಫರ್‌ ನನ್ನು ಥಳಿಸಿದ್ದಾರೆ. ನಂತರ ಕಾರ್ಯಕರ್ತರು ಆತನನ್ನು ತಕ್ಷಣವೇ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದರು.

ಸಂಪಾದಕೀಯ ನಿಲುವು

ನಾಳೆ ಇಂತಹ ಮತಾಂಧರು ವಿಧ್ವಂಸಕ ಕೃತ್ಯ ಎಸಗಿದರೆ ಆಶ್ಚರ್ಯಪಡಬೇಕಿಲ್ಲ. ಇದಕ್ಕಾಗಿ ಮಂದಿರದ ಆವರಣ ಪ್ರವೇಶಿಸುವ ಮೊದಲು ಪ್ರತಿಯೊಬ್ಬರ ಆಧಾರ ಕಾರ್ಡ್, ಮತದಾನದ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು.