ರಾಮಪುರದ (ಉತ್ತರಪ್ರದೇಶ)  ಕಾನ್ವೆಂಟ್ ಶಾಲೆಯ ಕ್ರೈಸ್ತ ಪ್ರಾಂಶುಪಾಲನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – Rampur Principal Joseph POSCO Case

  • ಶಾಲೆಗೆ ನುಗ್ಗಿ ಪ್ರಾಚಾರ್ಯ ಜೋಸೆಫ್‌ಗೆ ತಕ್ಕ ಶಾಸ್ತಿ ನೀಡಿದ ಪಾಲಕರು

  • ಪೊಲೀಸರಿಂದ ಪೋಕ್ಸೋ ಕಾಯ್ದೆಯಡಿ ಜೋಸೆಫ್ ಬಂಧನ

ರಾಮಪುರ (ಉತ್ತರಪ್ರದೇಶ) – ಇಲ್ಲಿನ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ‘ಸೇಂಟ್ ಫ್ರಾನ್ಸಿಸ್’ ಶಾಲೆಯ ಜೋಸೆಫ್ ಎಂಬ ಹೆಸರಿನ ಕ್ರೈಸ್ತ ಪ್ರಾಂಶುಪಾಲನಿಗೆ ಆಕ್ರೋಶಗೊಂಡ ಜನಸಮೂಹವು  ಥಳಿಸಿದೆ . ಶಿಕ್ಷೆ ನೀಡುವ ನೆಪದಲ್ಲಿ ಈತನು ವಿದ್ಯಾರ್ಥಿನಿಯರನ್ನು ಅಯೋಗ್ಯ ಪದ್ಧತಿಯಲ್ಲಿ ಸ್ಪರ್ಶಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯರು ಇದನ್ನು ವಿರೋಧಿಸಿದಾಗ, ಈತನು ಅವರನ್ನು ಥಳಿಸುತ್ತಿದ್ದನು ಮತ್ತು ಬೆದರಿಕೆ ಹಾಕುತ್ತಿದ್ದನು. ಈತನ ಕೃತ್ಯಗಳಿಂದ ಬೇಸತ್ತ ಅನೇಕ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಈ ವಿಷಯವು ಕುಟುಂಬದವರಿಗೆ ತಿಳಿದಾಗ, ಅವರು ಶಾಲೆಗೆ ಧಾವಿಸಿ ಆರೋಪಿ ಜೋಸೆಫ್‌ಗೆ ಸರಿಯಾಗಿ ಥಳಿಸಿದ್ದಾರೆ. ಈ ಘಟನೆಯು ಕುಂಟಖೇಡಾ ಗ್ರಾಮದಲ್ಲಿ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಶಾಲೆಗೆ ಧಾವಿಸಿ, ಜೋಸೆಫ್‌ ನನ್ನು ಜನರ ಹಿಡಿತದಿಂದ ಬಿಡಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಜೋಸೆಫ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

೧. ಸೇಂಟ್ ಫ್ರಾನ್ಸಿಸ್ ಶಾಲೆಯ ಪ್ರಾಂಶುಪಾಲ ಅರಿಶೇರಿಲ್ ಜೋಸೆಫ್, ವಿದ್ಯಾರ್ಥಿನಿಯರಿಗೆ ಶಿಕ್ಷೆ ನೀಡುವ ನೆಪದಲ್ಲಿ ಕೋಣೆಯಲ್ಲಿ ಕೂಡಿಹಾಕಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪಾಲಕರು ತಿಳಿಸಿದ್ದಾರೆ. ವಿದ್ಯಾರ್ಥಿನಿಯರು ಈ ಬಗ್ಗೆ ದೂರು ನೀಡಿದ ನಂತರ, ಕಳೆದ ವಾರ ಪಾಲಕರು ದೂರು ನೀಡಲು ಶಾಲೆಗೆ ಹೋದಾಗ ಜೋಸೆಫ್ ಕ್ಷಮೆಯಾಚಿಸಿದ್ದನು.

೨. ತದನಂತರವೂ  ಆತನು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದನು. ಭಯದಿಂದಾಗಿ ಅನೇಕ ಹುಡುಗಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಫೆಬ್ರವರಿ ೧೪ ರಂದು ಪ್ರಾಚಾರ್ಯ ಜೋಸೆಫ್ ಕೆಲವು ಹುಡುಗಿಯರನ್ನು ಅಯೋಗ್ಯ ರೀತಿಯಲ್ಲಿ ಸ್ಪರ್ಶಿಸಿದ್ದನು. ಸಂತ್ರಸ್ತ ವಿದ್ಯಾರ್ಥಿನಿಯರು ಮನೆಗೆ ಹೋಗಿ ಈ ಬಗ್ಗೆ ಎಲ್ಲವನ್ನೂ ತಿಳಿಸಿದ್ದರು.

೩. ಫೆಬ್ರವರಿ ೧೬ ರಂದು ದೊಡ್ಡ ಸಂಖ್ಯೆಯಲ್ಲಿ ಪಾಲಕರು ಶಾಲೆಗೆ ತಲುಪಿದರು. ಅಲ್ಲಿ ಜೋಸೆಫ್ ಅವರೊಂದಿಗೆ ಉದ್ಧಟತನದಿಂದ ವರ್ತಿಸಲು ಪ್ರಾರಂಭಿಸಿದನು, ಇದರಿಂದ ಪಾಲಕರ ತಾಳ್ಮೆ ತಪ್ಪಿ ಜೋಸೆಫ್‌ಗೆ ಸರಿಯಾಗಿ ಥಳಿಸಿದರು.

೪. ಅರಿಶೇರಿಲ್ ಜೋಸೆಫ್ ಮೂಲತಃ ಕೇರಳದವನಾಗಿದ್ದಾನೆ. ವರ್ಷ ೨೦೨೦ ರಲ್ಲಿ ಆತನನ್ನು ಈ ಶಾಲೆಗೆ ನೇಮಿಸಲಾಗಿತ್ತು ಮತ್ತು ಅಂದಿನಿಂದ ಆತನು ಅಲ್ಲಿಯೇ ವಾಸಿಸುತ್ತಿದ್ದಾನೆ. ಜೋಸೆಫ್ ಮದ್ಯದ ಅಮಲಿನಲ್ಲಿ ಶಾಲೆಯಲ್ಲಿ ಕೆಲಸ ಮಾಡುತ್ತಾನೆ ಎಂದು ಪಾಲಕರು ಆರೋಪಿಸಿದ್ದಾರೆ. ಆತನು ಮದ್ಯಪಾನ ಮಾಡಿಯೇ ತರಗತಿಗಳಲ್ಲಿ ಓಡಾಡುತ್ತಿದ್ದನು.

ಸಂಪಾದಕೀಯ ನಿಲುವು

ದೇಶದ ಎಲ್ಲಾ ಕಾನ್ವೆಂಟ್ ಶಾಲೆಗಳಿಗೆ ನಿಯಮಾವಳಿಗಳನ್ನು ರೂಪಿಸಬೇಕು. ಅಲ್ಲದೆ ಅವುಗಳ ತಪಾಸಣೆ ನಡೆಸಿ, ಅಲ್ಲಿ ಹಿಂದೂ ಆಡಳಿತಾಧಿಕಾರಿಯನ್ನು ನೇಮಿಸುವ ಮೂಲಕ ಶಾಲೆಯ ಮೇಲೆ ನಿಗಾ ಇಡಬೇಕು!