ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಾಮ್ಯವಾದಿ ಮತ್ತು ಹಿಂದುಳಿದ ವರ್ಗದ ಕಾರ್ಯಕರ್ತರಿಂದ ಬ್ರಾಹ್ಮಣ ಮಹಿಳಾ ಪತ್ರಕರ್ತೆಯ ಮೇಲೆ ಹಲ್ಲೆ

​ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಹೊಸ ನಿಯಮಾವಳಿಯ ಬೆಂಬಲಾರ್ಥ ನಡೆದ ಪ್ರತಿಭಟನೆಯಲ್ಲಿ ನಡೆದ ಘಟನೆ!

​ನವ ದೆಹಲಿ – ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ವಲಯದಲ್ಲಿ ಫೆಬ್ರವರಿ ೧೩ ರಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಬೆಂಬಲಾರ್ಥ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗುಂಪೊಂದು ಮಹಿಳಾ ಪತ್ರಕರ್ತೆಯ ಮೇಲೆ ಆಕ್ರಮಣ ಮಾಡಿದೆ. ಈ ಪತ್ರಕರ್ತೆ ಬ್ರಾಹ್ಮಣ ಎಂಬ ಕಾರಣಕ್ಕೆ ಅವಳ ಮೇಲೆ ಹಲ್ಲೆ ನಡೆಸಲಾಗಿದೆ. ‘ಬ್ರೇಕಿಂಗ್ ಒಪಿನಿಯನ್’ ಎಂಬ ಯೂಟ್ಯೂಬ್ ವಾಹಿನಿಗೆ ಸಂಬಂಧಿಸಿದ ಪತ್ರಕರ್ತೆ ರುಚಿ ತಿವಾರಿ ಅವರು ವಿಶ್ವವಿದ್ಯಾನಿಲಯದ ಕಲಾ ವಿಭಾಗದ ಆವರಣದಲ್ಲಿ ಪ್ರತಿಭಟನೆಯ ವರದಿ ಮಾಡಲು ತಲುಪಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ಕಾರ್ಯಕರ್ತರು, ಹಾಗೂ ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಗಳಿಗೆ ಸೇರಿದ ಪ್ರತಿಭಟನಾಕಾರರು ತಿವಾರಿ ಅವರನ್ನು ಸುತ್ತುವರಿದು ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.

​ಈ ಪ್ರತಿಭಟನೆಯನ್ನು ‘ಭಾರತೀಯ ವಿದ್ಯಾರ್ಥಿ ಮಹಾಸಂಘ’, ‘ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ’ ಮತ್ತು ‘ಆಲ್ ಇಂಡಿಯಾ ಫೋರಂ ಫಾರ್ ಇಕ್ವಿಟಿ’ ಎಂಬ ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಗಳ ಪರವಾಗಿ ಆಯೋಜಿಸಲಾಗಿತ್ತು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ೨೦೨೬ ರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಪ್ರೋತ್ಸಾಹಿಸುವ ನಿಯಮಾವಳಿಯನ್ನು ಜಾರಿಗೆ ತರಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದರು. ಸುಪ್ರೀಂ ಕೋರ್ಟ್ ಸದ್ಯಕ್ಕೆ ಈ ನಿಯಮಾವಳಿಗೆ ತಡೆಯಾಜ್ಞೆ ನೀಡಿದೆ.

ಸಂಪಾದಕೀಯ ನಿಲುವು

ಒಂದೆಡೆ ಜಾತಿ ಪದ್ಧತಿಯನ್ನು ನಾಶಪಡಿಸುವ ಹರಟೆ ಹೊಡೆಯುವುದು ಮತ್ತು ಇನ್ನೊಂದೆಡೆ ಜಾತಿಯ ಹೆಸರಿನಲ್ಲಿ ಹಿಂಸಾಚಾರ ಮಾಡುವುದು, ಇದೇ ಸಾಮ್ಯವಾದಿ ಮತ್ತು ಅತಿರೇಕದ ಹಿಂದುಳಿದ ವರ್ಗದ ಕಾರ್ಯಕರ್ತರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ!