ವಿ.ದಾ. ಸಾವರಕರ ಪುಣ್ಯತಿಥಿ

ಕೋಟಿಕೋಟಿ ನಮನಗಳು

ವಿ.ದಾ. ಸಾವರಕರ ಪುಣ್ಯತಿಥಿ, ಫಾಲ್ಗುಣ ಶುಕ್ಲ ಷಷ್ಠಿ ,೨೩.೨.೨೦೨೬

ವೀರ ಸಾವರಕರ ಉವಾಚ

ಮಿಹಿರಗುಲನು ಭಾರತದ ಮೇಲೆ ಆಕ್ರಮಣ ಮಾಡಿದ ಒಬ್ಬ ಹೂಣ ರಾಜನಾಗಿದ್ದನು. ಅವನು ರುದ್ರದೇವನ ಉಪಾಸಕನಾಗಿದ್ದನು. ಅದಕ್ಕಾಗಿ ವೈದಿಕ ಧರ್ಮದ ರಾಜರಾಗಲಿ ಅಥವಾ ಜನಸಾಮಾನ್ಯರಾಗಲಿ ಅವನ ದಾಸ್ಯವನ್ನು ಒಪ್ಪಿಕೊಳ್ಳಲಿಲ್ಲ. ಅವನು ಸ್ವಧರ್ಮೀಯನಾಗಿದ್ದರೂ, ರಾಜಕೀಯವಾಗಿ ಅವನು ಪರಕೀಯನಾಗಿದ್ದನು. ಅದಕ್ಕಾಗಿಯೇ ಅವನನ್ನು ಭಾರತದ ಶತ್ರು ಎಂದು ಪರಿಗಣಿಸಲಾಯಿತು. ಅವನ ವಶದಲ್ಲಿದ್ದ ಭಾರತದ ಭೂಪ್ರದೇಶವನ್ನು ರಾಜಕೀಯವಾಗಿ ಮುಕ್ತಗೊಳಿಸಲು ಭಾರತೀಯರು ಅವನೊಂದಿಗೆ ಹೋರಾಡಿದರು ಮತ್ತು ಶತ್ರುತ್ವವನ್ನು ಬೆಳೆಸಿಕೊಂಡರು.

(ಸೌಜನ್ಯ : ಮರಾಠಿ ಭಾಷೆಯ ‘ಸಹಾ ಸೋನೇರಿ ಪಾನೆ’ ಗ್ರಂಥದ ‘ಮೂರನೇ ಸುವರ್ಣ ಪುಟ’ದಿಂದ)