
ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ಮೀಸಲಿಡಲಾಗಿದೆ. ರಫೇಲ್ ಯುದ್ಧ ವಿಮಾನ ಖರೀದಿ, ಜಲಾಂತರ್ಗಾಮಿ ನೌಕೆಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳಂತಹ ಪ್ರಮುಖ ಯೋಜನೆಗಳ ಪ್ರಸ್ತಾವನೆಗಳು ರಕ್ಷಣಾ ಸಚಿವಾಲಯದ ಮುಂದೆ ಬಾಕಿ ಇವೆ. ರಕ್ಷಣಾ ಬಜೆಟ್‌ನಲ್ಲಿ ಒಟ್ಟು ಶೇಕಡಾ 8 ರಷ್ಟು ಹೆಚ್ಚಳ ಮಾಡಲಾಗಿದೆ. ರಕ್ಷಣಾ ಸಚಿವಾಲಯಕ್ಕೆ 7 ಲಕ್ಷದ 84 ಸಾವಿರ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಸಂರಕ್ಷಣಾ ಪಡೆಗಳ ಆಧುನೀಕರಣಕ್ಕಾಗಿ 21 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗುವುದು.
Union Finance Minister Nirmala Sitharaman presents Union Budget 2026-27 with a focus on 'People-Centric Development.' 🇮🇳
Key Highlights:
🔹 Tax structure remains unchanged🔹 ₹7.84 Lakh Cr allocated for Defense 🛡️
🔹 7 New High-Speed Rail routes 🚄
🔹 3 Ayurvedic ‘AIIMS’ to… pic.twitter.com/VdltwAwJwk
— Sanatan Prabhat (@SanatanPrabhat) February 1, 2026
ತೆಂಗಿನ ಬೆಳೆ ಹೆಚ್ಚಿಸಲು ಪ್ರೋತ್ಸಾಹಕ ಯೋಜನೆ ಪ್ರಸ್ತಾವನೆ
ತೆಂಗಿನ ಬೆಳೆಯ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು, ವಿವಿಧ ಪದ್ಧತಿಗಳ ಮೂಲಕ ಇಳುವರಿ ಹೆಚ್ಚಿಸಲು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ‘ತೆಂಗು ಪ್ರೋತ್ಸಾಹಕ ಯೋಜನೆ’ಯನ್ನು ತರಲಾಗುವುದು. ಇದರಲ್ಲಿ ಪ್ರಮುಖ ತೆಂಗು ಬೆಳೆಗಾರ ರಾಜ್ಯಗಳಲ್ಲಿ ಹಾನಿಗೊಳಗಾದ ಮರಗಳ ಬದಲಿಗೆ ಹೊಸ ತಳಿಗಳನ್ನು ನೆಡುವುದನ್ನು ಒಳಗೊಂಡಿದೆ. ವರ್ಷ 2030 ರ ಹೊತ್ತಿಗೆ ಭಾರತವನ್ನು ಕಚ್ಚಾ ಗೋಡಂಬಿ ಮತ್ತು ತೆಂಗಿನ ಉತ್ಪಾದನೆಯಲ್ಲಿ ಹಾಗೂ ಸಂಸ್ಕರಣೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಭಾರತೀಯ ಗೋಡಂಬಿ ಹಾಗೂ ಭಾರತೀಯ ‘ಕೋಕೋ’ವನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್‌ಗಳಾಗಿ ಪರಿವರ್ತಿಸಲು ಭಾರತೀಯ ಗೋಡಂಬಿ ಮತ್ತು ಕೋಕೋಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಪ್ರಸ್ತಾಪಿಸಲಾಗಿದೆ.
ತೆರಿಗೆ ರಚನೆಯಲ್ಲಿ ಬದಲಾವಣೆ ಇಲ್ಲ!
ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದ್ದರಿಂದ ತೆರಿಗೆ ವ್ಯವಸ್ಥೆಯು ‘ಯಥಾಸ್ಥಿತಿ’ಯಲ್ಲೇ ಇರಲಿದೆ. ತೆರಿಗೆ ವ್ಯವಸ್ಥೆ ಹೇಗಿದೆ ಎಂದು ತಿಳಿದುಕೊಳ್ಳಿ!
(ಇದರ ಪ್ರಕಾರ 12 ಲಕ್ಷ ರೂಪಾಯಿಗಳವರೆಗೆ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಯು ಆದಾಯ ತೆರಿಗೆ ಪಾವತಿಸಬೇಕಿಲ್ಲ. ಕಾರಣ ಈ ತೆರಿಗೆದಾರರಿಗೆ ಅವರ ಆದಾಯಕ್ಕೆ ಅನುಗುಣವಾಗಿ ಎಷ್ಟು ತೆರಿಗೆ ವಿಧಿಸಲಾಗುತ್ತದೆಯೋ, ಅಷ್ಟೇ ಮೊತ್ತದ ವಿನಾಯಿತಿಯನ್ನು (ರಿಬೇಟ್) ಸರ್ಕಾರ ನೀಡಲಿದೆ. ಆದಾಗ್ಯೂ, 12 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಪೂರ್ಣ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.)
ಅಗ್ಗದ ವಸ್ತುಗಳು
- ವೀಳ್ಯದೆಲೆ/ತಂಬಾಕು
- ಬೂಟುಗಳು
- ಬಟ್ಟೆಗಳ ರಫ್ತು
- ಸಿ.ಎನ್.ಜಿ. (CNG)
- ವಿದೇಶಿ ಪ್ರವಾಸ
- ಚರ್ಮದ ರಫ್ತು
- ಬಯೋಗ್ಯಾಸ್
- ಓವನ್ (‘ಓವನ್’ ಅಥವಾ ಸಂಬಂಧಿತ ವಸ್ತುಗಳು)
- ಬ್ಯಾಟರಿ
- 7 ಗಂಭೀರ ಕಾಯಿಲೆಗಳ ಔಷಧಿಗಳು
- ಮಧುಮೇಹದ ಔಷಧಿಗಳು
- ಮೀನುಗಾರರಿಗೆ ರಫ್ತು ಅಗ್ಗ
- ವಿದೇಶದಲ್ಲಿ ಶಿಕ್ಷಣ ಪಡೆಯುವುದು
- ದುಬಾರಿ ವಸ್ತುಗಳು
- ಮದ್ಯ
- ಸಿಗರೇಟ್
- ಖನಿಜಗಳು
- ಸ್ಕ್ರ್ಯಾಪ್ (ಗುಜರಿ/ರದ್ದಿ)
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ