ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಸಜೀವ ದಹನ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂದೂ ಯುವಕನೊಬ್ಬನನ್ನು ಜೀವಂತವಾಗಿ ಸುಡಲಾಗಿದೆ. ಚಂಚಲ್ ಚಂದ್ರ ಭೌಮಿಕ್ ಎಂಬಾತ ಮೃತಪಟ್ಟ ಯುವಕನಾಗಿದ್ದು, ಈತ ಕೊಮಿಲ್ಲಾ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದ ನಿವಾಸಿಯಾಗಿದ್ದನು. ಈ ಘಟನೆಯು ಜನೇವರಿ ೨೩ರ ಶುಕ್ರವಾರ ರಾತ್ರಿ ನಡೆದಿದೆ. ಬಾಂಗ್ಲಾದೇಶದ ಪತ್ರಕರ್ತ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಅವರು ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಮೂಲಕ ಈ ಘಟನೆಯ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.

೧. ಚಂಚಲ್ ಭೌಮಿಕ್ ಕಳೆದ ೬ ವರ್ಷಗಳಿಂದ ನರಸಿಂಗಡಿಯಲ್ಲಿ ರುಬಲ್ ಮಿಯಾ ಎಂಬುವವರ ಗ್ಯಾರೇಜನಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಅಲ್ಲಿಯೇ ವಾಸವಾಗಿದ್ದನು. ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಜನವರಿ ೨೩ರ ರಾತ್ರಿ ಕೆಲಸ ಮುಗಿಸಿ ಚಂಚಲ್ ಗ್ಯಾರೇಜನಲ್ಲಿಯೇ ಮಲಗಿದ್ದನು. ಸಮೀಪದ ಸಿಸಿಟಿವಿಯಲ್ಲಿ ತಡರಾತ್ರಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಗ್ಯಾರೇಜ್ ಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ. ಬೆಂಕಿ ಹಚ್ಚಿದ ನಂತರ ಆ ವ್ಯಕ್ತಿ ಬಹಳ ಹೊತ್ತು ಅಲ್ಲಿಯೇ ನಿಂತಿದ್ದನು. ಚಂಚಲ್ ಸಾವನ್ನಪ್ಪಿದ್ದಾನೆ ಎಂದು ಖಚಿತಪಡಿಸಿಕೊಂಡ ನಂತರವೇ ಆತ ಅಲ್ಲಿಂದ ತೆರಳಿರುವುದು ವಿಡಿಯೋದಿಂದ ಸ್ಪಷ್ಟವಾಗಿದೆ.

೨. ಚಂಚಲ್ ಭೌಮಿಕ್ ತಂದೆಯ ಮರಣದ ನಂತರ ಅವನ ಮನೆಯ ಸಂಪೂರ್ಣ ಜವಾಬ್ದಾರಿ ಆತನ ಮೇಲಿತ್ತು. ಚಂಚಲ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಆತನ ಒಬ್ಬ ಸಹೋದರ ದಿವ್ಯಾಂಗನಾಗಿದ್ದಾನೆ. ಚಂಚಲ್ ಕುಟುಂಬದವರು ಕೂಡ ಇದು ಕೊಲೆ ಎಂದು ಆರೋಪಿಸಿದ್ದಾರೆ. ಹೆಸರು ಹೇಳಲಿಚ್ಛಿಸದ ಕೆಲವು ಸ್ಥಳೀಯರು ಧಾರ್ಮಿಕ ಕಾರಣಗಳಿಂದಲೇ ಚಂಚಲ್ ನನ್ನು ಹತ್ಯೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಮಾಜದಲ್ಲಿ ಭೀತಿಯ ವಾತಾವರಣ

ಈ ಘಟನೆಯಿಂದ ಬಾಂಗ್ಲಾದೇಶದಲ್ಲಿನ ಹಿಂದೂ ಸಂಘಟನೆಗಳು ಮತ್ತು ಸಾಮಾನ್ಯ ಹಿಂದೂಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಹಿಂದೆ ಮೆಮನಸಿಂಗ್ ನಲ್ಲಿ ದೀಪು ಚಂದ್ರ ದಾಸ್ ಅವರನ್ನು ಜೀವಂತವಾಗಿ ಸುಟ್ಟು ಹತ್ಯೆ ಮಾಡಲಾಗಿತ್ತು. ಅದರ ನಂತರ ಶರಿಯತಪುರದಲ್ಲಿ ಖೋಕನ್ ಚಂದ್ರ ದಾಸ್ ಅವರನ್ನು ಕೊಲ್ಲಲಾಯಿತು ಮತ್ತು ಈಗ ನರಸಿಂಗದಿಯಲ್ಲಿ ಚಂಚಲ್ ಚಂದ್ರ ಭೌಮಿಕ್ ಅವರನ್ನು ಜೀವಂತವಾಗಿ ಸುಡಲಾಗಿದೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿ ಹಿಂದೂಗಳು ಸರ್ವನಾಶವಾಗುವವರೆಗೆ ಅವರ ಹತ್ಯಾಸರಣಿಯು ನಿಲ್ಲುವುದಿಲ್ಲ ಮತ್ತು ಅದನ್ನು ತಡೆಯಲು ಯಾರೂ ಪ್ರಯತ್ನಿಸುವುದಿಲ್ಲ ಎಂಬುದು ಹಿಂದೂಗಳಿಗೆ ಲಜ್ಜಾಸ್ಪದ ವಿಷಯ!
  • ಹಿಂದೂ ಬಹುಸಂಖ್ಯಾತ ಭಾರತವೇ ಬಾಂಗ್ಲಾದೇಶದ ಹಿಂದೂಗಳ ಹತ್ಯಾಸರಣಿಯ ಬಗ್ಗೆ ಗಮನಕೊಡದ ಮೇಲೆ, ಇನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎಂದಾದರೂ ಗಮನ ಹರಿಸುವುದೇ?