ತಿರುಪರಂಕುಂದ್ರಮ್ (ತಮಿಳುನಾಡು) ದೇವಸ್ಥಾನದ ಮರದ ಮೇಲೆ ಇಸ್ಲಾಮಿ ಧ್ವಜ ಹಾರಿಸಿದ ಮುಸ್ಲಿಮರು!

ಹಿಂದೂಗಳು ಕ್ರಮಕೈಗೋಳ್ಳಲು ಒತ್ತಾಯಿಸಿದನಂತರ ಉಚ್ಚ ನ್ಯಾಯಾಲಯದಿಂದ ಪೊಲೀಸ್ ಆಡಳಿತದಿಂದ ಕ್ರಮಕ್ಕೆ ಆದೇಶ

ಮಧುರೈ (ತಮಿಳುನಾಡು) – ಜಿಲ್ಲೆಯ ತಿರುಪರಂಕುಂದ್ರಮ್ ಬೆಟ್ಟವು ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ದೇವಸ್ಥಾನಕ್ಕೆ ಸೇರಿದ ಭೂಮಿಯಲ್ಲಿರುವ ಮರವೊಂದರ ಮೇಲೆ ಮುಸ್ಲಿಮರು ತಮ್ಮ ದರ್ಗಾದ ಉತ್ಸವದ ನಿಮಿತ್ತ ಇಸ್ಲಾಮಿಕ್ ಧ್ವಜವನ್ನು ಹಾರಿಸಿದ್ದರು. ಬೆಟ್ಟದ ಮೇಲೆ ಅಕ್ರಮ ನಿಯಂತ್ರಣ ಹೊಂದಿರುವ ‘ಸಿಕಂದರ್ ಬದುಷಾ ದರ್ಗಾ’ದ ‘ಸಂದನಕೂಡು ಧ್ವಜ’ ಹಾರಿಸುವ ಉತ್ಸವ ಇದಾಗಿತ್ತು. ಈ ಘಟನೆಯು ಡಿಸೆಂಬರ್ 21, 2025 ರಂದು ನಡೆದಿತ್ತು. ಧ್ವಜ ಹಾರಿಸಿದ ಸ್ಥಳವು ದೇವಸ್ಥಾನದ ಭೂಮಿಯಾಗಿದ್ದರಿಂದ ಹಿಂದೂಗಳು ಆಕ್ರೋಶಗೊಂಡು ಇದರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

1. ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಡಳಿತಕ್ಕೆ ಆದೇಶ ನೀಡಿತು.

2. ಇದರ ನಂತರ ದೇವಸ್ಥಾನದ ಆಡಳಿತ ಮಂಡಳಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿತು. ಪ್ರಕರಣ ದಾಖಲಾದ ನಂತರ ಕಂದಾಯ ಇಲಾಖೆ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಮರದ ಮೇಲಿದ್ದ ಧ್ವಜವನ್ನು ತೆರವುಗೊಳಿಸಿದವು.

‘ಸಮ್ಮತಿಯಿಲ್ಲದೆ ಧ್ವಜ ತೆರವುಗೊಳಿಸಿದ ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ!’ (ಅಂತೆ) – ದರ್ಗಾ ಆಡಳಿತ ಮಂಡಳಿ

ಹಿಂದೂ ದೇವಸ್ಥಾನದ ಭೂಮಿಯಲ್ಲಿ ಧ್ವಜ ಹಾರಿಸುವಾಗ ಮುಸ್ಲಿಮರು ಯಾರ ಅನುಮತಿ ಪಡೆದಿದ್ದರು? ಈಗ ಅವರಿಗೆ ಹೀಗೆ ಮಾತನಾಡುವ ಹಕ್ಕಿದೆಯೇ?

ಅತಿಕ್ರಮಣಕಾರರನ್ನು ಮಟ್ಟಹಾಕಲು ತಿರುಪ್ಪರಂಕುಂದ್ರಮ್ ನ ಹಿಂದೂಗಳು ಅಕ್ರಮ ದರ್ಗಾವನ್ನು ತೆರವುಗೊಳಿಸುವವರೆಗೂ ಹೋರಾಟ ಮುಂದುವರಿಸುವುದು ಅತ್ಯಗತ್ಯ!

ಈ ಕ್ರಮದಿಂದಾಗಿ ದರ್ಗಾ ಆಡಳಿತ ಮಂಡಳಿಯು ಕೆರಳಿದೆ. ತಿರುಪ್ಪರಂಕುಂದ್ರಮ್ ಸಿಕಂದರ್ ಬದುಷಾ ದರ್ಗಾ ಆಡಳಿತವು ಸರಕಾರದ ಈ ಕ್ರಮವನ್ನು ‘ಏಕಪಕ್ಷೀಯ’ ಎಂದು ಕರೆದಿದ್ದು, ಸಹಾಯಕ ಪೊಲೀಸ್ ಕಮಿಷನರ್‌ಗೆ ದೂರು ನೀಡಿದೆ. “ನಮ್ಮ ಸಮ್ಮತಿಯಿಲ್ಲದೆ ಧ್ವಜವನ್ನು ತೆಗೆಯಲಾಗಿದೆ, ಆದ್ದರಿಂದ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ದರ್ಗಾ ಆಡಳಿತವು ವಾದಿಸುತ್ತಿದೆ.

ಸಂಪಾದಕೀಯ ನಿಲುವು

ಹಿಂದೂಗಳು ಜಾಗೃತರು, ಸಂಘಟಿತರು ಮತ್ತು ತತ್ಪರರಾಗಿದ್ದರೆ, ತಮಿಳುನಾಡಿನಂತಹ ಹಿಂದೂ ವಿರೋಧಿ ದ್ರಮುಕ ಸರಕಾರದ ಪೊಲೀಸರನ್ನೂ ಮಣಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ!