ಶ್ರೀರಾಮಮಂದಿರದಲ್ಲಿ ಮುಸಲ್ಮಾನನೊಬ್ಬ ನಮಾಜ್ ಮಾಡಿದ ಘಟನೆಗೆ ಮುಸಲ್ಮಾನ ಪಕ್ಷಕಾರ ಇಕ್ಬಾಲ್ ಅನ್ಸಾರಿ ಪ್ರತಿಕ್ರಿಯೆ

ಅಯೋಧ್ಯಾ (ಉತ್ತರ ಪ್ರದೇಶ) – ಜಮ್ಮು-ಕಾಶ್ಮೀರದ ಅಬೂ ಅಹ್ಮದ್ ಶೇಖ್ ಎಂಬಾತನು ಶ್ರೀರಾಮಮಂದಿರದೊಳಗೆ ನುಗ್ಗಿ ನಮಾಜ್ ಪಠಿಸಿ, ‘ಅಲ್ಲಾಹೂ ಅಕ್ಬರ್’ (ಅಲ್ಲಾನೇ ಶ್ರೇಷ್ಠ) ಎಂದು ಘೋಷಣೆಗಳನ್ನು ಕೂಗಿದನು. ಈ ಘಟನೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಶ್ರೀರಾಮಜನ್ಮಭೂಮಿ ಪ್ರಕರಣದ ಮುಸಲ್ಮಾನ ಪಕ್ಷದ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ ಅವರು ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮಂದಿರದ ಪ್ರಾರ್ಥನೆಯಲ್ಲಿ ಯಾವುದೇ ಅಡೆತಡೆ ಅಥವಾ ಹಸ್ತಕ್ಷೇಪ ಮಾಡುವುದು ಕಾನೂನುಬಾಹಿರವಾಗಿದೆ. ಆ ಕಾಶ್ಮೀರಿ ಯುವಕ ಅಲ್ಲಿಗೆ ಹೇಗೆ ಮತ್ತು ಎಲ್ಲಿಂದ ಬಂದನು ? ರಾಮಮಂದಿರದಲ್ಲಿ ನಮಾಜ್ ಮಾಡುವ ದುರಾಲೋಚನೆ ಅವನಿಗೆ ಏಕೆ ಬಂದಿತು?? ಈ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಅಯೋಧ್ಯೆಯು ಒಂದು ಧಾರ್ಮಿಕ ನಗರವಾಗಿದ್ದು, ಎಲ್ಲಾ ಧರ್ಮದವರಿಗೂ ಶ್ರದ್ಧೆಯ ಕೇಂದ್ರವಾಗಿದೆ ಎಂದು ಅನ್ಸಾರಿ ಹೇಳಿದರು. (ಇದು ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ ! ಕನಿಷ್ಠ ಉತ್ತರಪ್ರದೇಶದ ಹಿಂದುತ್ವನಿಷ್ಠ ರಾಜಕೀಯ ನಾಯಕರಾದರೂ ಅನ್ಸಾರಿ ಅವರ ಈ ನಿರಾಧಾರ ಹೇಳಿಕೆಯನ್ನು ಖಂಡಿಸಬೇಕು ! – ಸಂಪಾದಕರು) ಹಿಂದೂ, ಮುಸಲ್ಮಾನ, ಸಿಖ್, ಕ್ರಿಶ್ಚಿಯನ ಹೀಗೆ ಎಲ್ಲರೂ ಇಲ್ಲಿ ಸೋದರಭಾವದಿಂದ ಬದುಕುತ್ತಿದ್ದಾರೆ. ಪ್ರತಿ ಧರ್ಮದವರಿಗೂ ಪ್ರತ್ಯೇಕ ಪೂಜಾ ಸ್ಥಳಗಳಿವೆ. ರಾಮಮಂದಿರ ನಿರ್ಮಾಣವಾಗಿದೆ ಮತ್ತು ಮುಸಲ್ಮಾನರು ಸೇರಿದಂತೆ ಇಡೀ ದೇಶದ ಜನರು ಮಂದಿರವನ್ನು ಗೌರವಿಸಿದ್ದಾರೆ ಎಂದು ಅವರು ತಿಳಿಸಿದರು.
ಶ್ರೀರಾಮಮಂದಿರದಲ್ಲಿ ನಡೆದ ಘಟನೆಯು ಅತ್ಯಂತ ಖಂಡನೀಯ ಮತ್ತು ದುರದೃಷ್ಟಕರ ! – ಭಾಜಪ

ಇಂತಹ ಸುದ್ದಿಗಳು ಕೇಳಿಬರುವುದು ಅತ್ಯಂತ ಖಂಡನೀಯ ಹಾಗೂ ದುರದೃಷ್ಟಕರ. ಸ್ಥಳೀಯ ಆಡಳಿತ ಮತ್ತು ರಾಜ್ಯ ಸರಕಾರವು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳಲಿವೆ ಎಂಬ ವಿಶ್ವಾಸವನ್ನು ಭಾಜಪದ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ ಪಾಸ್ವಾನ ವ್ಯಕ್ತಪಡಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ