
ಮುಂಬಯಿ, ಜನವರಿ 9 (ವಾರ್ತೆ) – ಶಿರ್ಡಿಯ ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಪ್ರಸಾದಾಲಯದ ಅಡುಗೆಯವರು ರಾಷ್ಟ್ರಪತಿ ಭವನದ ಸಿಬ್ಬಂದಿಗಳಿಗೆ ಮಹಾರಾಷ್ಟ್ರದ ವಿಶೇಷ ಖಾದ್ಯಗಳನ್ನು ತಯಾರಿಸುವ ತರಬೇತಿಯನ್ನು ನೀಡುತ್ತಿದ್ದಾರೆ. 2023 ರಿಂದ 2025 ರವರೆಗೆ ಸತತ ಮೂರು ವರ್ಷಗಳ ಕಾಲ ಶ್ರೀ ಸಾಯಿ ಪ್ರಸಾದಾಲಯದ ಇಬ್ಬರು ಬಾಣಸಿಗರು ವರ್ಷದ ಕೆಲವು ದಿನಗಳ ಕಾಲ ತರಬೇತಿ ನೀಡಲು ರಾಷ್ಟ್ರಪತಿ ಭವನಕ್ಕೆ ಹೋಗುತ್ತಿದ್ದಾರೆ.
ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಜುಲೈ 2023 ರಲ್ಲಿ ಶ್ರೀ ಸಾಯಿಬಾಬಾ ಸಮಾಧಿಯ ದರ್ಶನಕ್ಕಾಗಿ ಶಿರ್ಡಿಗೆ ಆಗಮಿಸಿದ್ದರು. ಆಗ ಅವರು ಶ್ರೀ ಸಾಯಿ ಪ್ರಸಾದಾಲಯದ ಭೋಜನ ಪ್ರಸಾದವನ್ನು ಸ್ವೀಕರಿಸಿದ್ದರು. ಅವರಿಗೆ ಆ ಭೋಜನ ಬಹಳ ಇಷ್ಟವಾಗಿತ್ತು. ಇದರ ಫಲವಾಗಿ, ಆಗಸ್ಟ್ 2023 ರಲ್ಲಿ ರವೀಂದ್ರ ವಹಾಡ್ನೆ ಮತ್ತು ಪ್ರಹ್ಲಾದ್ ಕರ್ಡಿಲೆ ಎಂಬ ಇಬ್ಬರು ಬಾಣಸಿಗರನ್ನು ರಾಷ್ಟ್ರಪತಿ ಭವನದ ಅಡುಗೆಯವರಿಗೆ ತರಬೇತಿ ನೀಡಲು 26 ದಿನಗಳ ಕಾಲ ಕಳುಹಿಸಲಾಗಿತ್ತು. ತದನಂತರ ನವೆಂಬರ್ 2024 ರಲ್ಲಿ 18 ದಿನಗಳು, ಹಾಗೂ ಜನವರಿ 2025 ರಲ್ಲಿ 23 ದಿನಗಳ ಕಾಲ ರಾಷ್ಟ್ರಪತಿ ಭವನದಲ್ಲಿ ಮಹಾರಾಷ್ಟ್ರದ ಖಾದ್ಯಗಳನ್ನು ತಯಾರಿಸುವ ತರಬೇತಿ ನೀಡಲು ಶ್ರೀ ಸಾಯಿ ಪ್ರಸಾದಾಲಯದ ಅಡುಗೆಯವರನ್ನು ಆಮಂತ್ರಿಸಲಾಗಿತ್ತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ