ಪೊಲೀಸರು ಸ್ಥಳದಿಂದ ಹೊರಹೋಗುವಂತೆ ಸೂಚಿಸಿದರೂ ಘಟನಾ ಸ್ಥಳದ ಸುತ್ತಮುತ್ತಲೇ ಸುಳಿದಾಡುತ್ತಿದ್ದ ಕಾರಣ ಸಂಶಯದ ಸುಳಿಗೆ

ನವದೆಹಲಿ – ಜನವರಿ 6ರ ರಾತ್ರಿ ದೆಹಲಿ ಮಹಾನಗರ ಪಾಲಿಕೆಯು ‘ಫೈಜ್-ಎ-ಇಲಾಹಿ’ ಮಸೀದಿಯ ಸಮೀಪವಿದ್ದ ಅತಿಕ್ರಮಣ ತೆರವುಗೊಳಿಸುತ್ತಿದ್ದಾಗ, ‘ಮಸೀದಿಯನ್ನು ಕೆಡವಲಾಗುತ್ತಿದೆ’ ಎಂಬ ವದಂತಿ ಹಬ್ಬಿಸಲಾಯಿತು. ಈ ವೇಳೆ ಪೊಲೀಸರ ಮೇಲೆ ನಡೆದ ಕಲ್ಲುತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾ ನದ್ವಿ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಘಟನೆಯ ಸಮಯದಲ್ಲಿ ಪೊಲೀಸರು ನದ್ವಿ ಅವರನ್ನು ಅಲ್ಲಿಂದ ಓಡಿಸಿದರೂ ಸಹ, ಅವರು ಘಟನಾ ಸ್ಥಳದ ಆಸುಪಾಸಿನಲ್ಲೇ ಸುಳಿದಾಡುತ್ತಿದ್ದರು. ಇದು ಪೊಲೀಸರ ಸಂಶಯಕ್ಕೆ ಕಾರಣವಾಗಿದೆ. ಕಲ್ಲುತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, 30 ಜನರನ್ನು ಗುರುತಿಸಿದ್ದಾರೆ. ಅವರ ಬಂಧನಕ್ಕಾಗಿ ಪೊಲೀಸರ ವಿವಿಧ ತಂಡಗಳು ಹಲವು ಭಾಗಗಳಲ್ಲಿ ದಾಳಿ ನಡೆಸುತ್ತಿವೆ.
ಸಂಪಾದಕೀಯ ನಿಲುವುಇಂತಹ ಹಿಂಸಾಚಾರಗಳಲ್ಲಿ ಮುಸ್ಲಿಂ ನಾಯಕರ ನೇರ ಅಥವಾ ಪರೋಕ್ಷ ಹಸ್ತಕ್ಷೇಪವಿರುವುದು ಈ ಹಿಂದಿನ ಹಲವು ಘಟನೆಗಳಲ್ಲಿ ಕಂಡುಬಂದಿದೆ. ಆದ್ದರಿಂದ, ಈ ಹಿಂಸಾಚಾರದಲ್ಲಿ ನದ್ವಿ ಅವರ ಪಾತ್ರವಿರುವುದು ಬೆಳಕಿಗೆ ಬಂದರೆ ಆಶ್ಚರ್ಯಪಡಬೇಕಿಲ್ಲ! |
|

ಕಲ್ಲುತೂರಾಟದ ಘಟನೆಯನ್ನು ಸಮರ್ಥಿಸಿಕೊಂಡ ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್ ಅವರು, “ಇಲ್ಲಿ 100 ವರ್ಷ ಹಳೆಯದಾದ ಮಸೀದಿ ಮತ್ತು ಅಂಗಡಿಗಳಿವೆ. ಅತಿಕ್ರಮಣದ ಹೆಸರಿನಲ್ಲಿ ದೌರ್ಜನ್ಯ ನಡೆದರೆ ಜನರು ಎಷ್ಟು ದಿನ ಸುಮ್ಮನಿರಲು ಸಾಧ್ಯ? ಒಂದು ವೇಳೆ ಇಂತಹದ್ದೇ ಕ್ರಮ ಎಲ್ಲೆಡೆ ನಡೆದಿದ್ದರೆ ಜನರು ತಾಳ್ಮೆಯಿಂದ ಇರುತ್ತಿದ್ದರು. ಇಂತಹ ವಿಷಯಗಳು ಜನರ ಭಾವನೆ ಮತ್ತು ನಂಬಿಕೆಗೆ ಸಂಬಂಧಿಸಿರುವುದರಿಂದ, ಅವರ ಧಾರ್ಮಿಕ ಸ್ಥಳಗಳ ವಿರುದ್ಧದ ಯಾವುದೇ ಕ್ರಮಕ್ಕೆ (ಆಕ್ಷನ್) ಪ್ರತಿಕ್ರಿಯೆ (ರಿಯಾಕ್ಷನ್) ಬಂದೇ ಬರುತ್ತದೆ. ಅತಿಕ್ರಮಣ ತೆರವುಗೊಳಿಸುವ ಹೆಸರಿನಲ್ಲಿ ದೌರ್ಜನ್ಯ ಎಸಗಲಾಗುತ್ತಿದೆ. ಒಂದು ವೇಳೆ ಅತಿಕ್ರಮಣ ನಡೆದಿದ್ದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇಂತಹ ಹಿಂಸಾಚಾರವನ್ನು ಬೆಂಬಲಿಸುವವರನ್ನೂ ಪೊಲೀಸರು ಜೈಲಿಗೆ ಹಾಕಬೇಕು! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”