ಬ್ರಿಟಿಷ್ ಸಂಸದ ಬಾಬ್ ಬ್ಲ್ಯಾಕ್ಮನ್ ಹೇಳಿಕೆ

ಜೈಪುರ (ರಾಜಸ್ಥಾನ) – ಇಡೀ ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿರಬೇಕು ಎಂದು ಬ್ರಿಟನ್ ಸಂಸದ ಬಾಬ್ ಬ್ಲ್ಯಾಕ್ಮನ್ ಹೇಳಿಕೆ ನೀಡಿದ್ದಾರೆ. ಇಲ್ಲಿನ ಕಾನ್ಸ್ಟಿಟ್ಯೂಷನಲ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
೧೯೯೨ ರಲ್ಲೇ ೩೭೦ ನೇ ವಿಧಿಯನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದರು
ಬ್ಲ್ಯಾಕ್ ಮನ್ ಅವರು ಮಾತನಾಡಿ, ‘೧೯೯೨ ರಲ್ಲೇ ನಾನು ೩೭೦ ನೇ ವಿಧಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದೆ. ಆಗ ಕಾಶ್ಮೀರಿ ಹಿಂದೂಗಳು ತಮ್ಮ ಧರ್ಮ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳಲು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಆಗ ಬ್ರಿಟನ್ ನಲ್ಲಿ ಈ ಅನ್ಯಾಯದ ವಿರುದ್ಧ ಜನಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿತ್ತು’ ಎಂದು ಸ್ಮರಿಸಿದರು.
ಭಯೋತ್ಪಾದನೆ ಮತ್ತು ಪಾಕಿಸ್ತಾನದ ವಿರುದ್ಧ ಖಂಡನೆ
ಜಮ್ಮು-ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಗಳನ್ನು ನಾವು ನಿರಂತರವಾಗಿ ಖಂಡಿಸುತ್ತಿರುವುದಾಗಿ ಬ್ಲ್ಯಾಕ್ ಮನ್ ಹೇಳಿದರು. ಜಮ್ಮು-ಕಾಶ್ಮೀರದ ಕೆಲವು ಭಾಗಗಳ ಮೇಲೆ ಪಾಕಿಸ್ತಾನ ಹೊಂದಿರುವ ಅಕ್ರಮ ನಿಯಂತ್ರಣದ ಬಗ್ಗೆಯೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಡೀ ಜಮ್ಮು-ಕಾಶ್ಮೀರವು ಭಾರತ ಸರಕಾರದ ಆಡಳಿತದಡಿ ಬರಬೇಕು ಎಂಬುದೇ ತಮ್ಮ ನಿಲುವಾಗಿದೆ ಎಂದು ಅವರು ಹೇಳಿದರು.
ಬ್ರಿಟನ್ ಭಾರತದ ಬೆನ್ನಿಗೆ ನಿಲ್ಲಲಿ !
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೬ ಜನರು ಸಾವನ್ನಪ್ಪಿದ ಘಟನೆಯನ್ನು ಬ್ಲ್ಯಾಕ್ ಮನ್ ತೀವ್ರವಾಗಿ ಖಂಡಿಸಿದ್ದರು. ನಿರಪರಾಧಿ ನಾಗರಿಕರ ಸಾವಿನ ಬಗ್ಗೆ ಅವರು ದುಃಖ ವ್ಯಕ್ತಪಡಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ದೃಢವಾಗಿ ನಿಲ್ಲುವಂತೆ ಬ್ರಿಟನ್ ಸರಕಾರಕ್ಕೆ ಕರೆ ನೀಡಿದರು.
ಪಾಕಿಸ್ತಾನ ಒಂದು ‘ವಿಫಲ ರಾಷ್ಟ್ರ’
ಈ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಬ್ಲ್ಯಾಕ್ ಮನ್ ಅವರು ಪಾಕಿಸ್ತಾನವನ್ನು ‘ವಿಫಲ ರಾಷ್ಟ್ರ’ ಎಂದು ಕರೆದಿದ್ದರು ಮತ್ತು ಅಲ್ಲಿನ ಸೇನಾ-ರಾಜಕೀಯ ಸಮೀಕರಣಗಳನ್ನು ಪ್ರಶ್ನಿಸಿದ್ದರು. ಪಾಕಿಸ್ತಾನದಿಂದ ಭಾರತದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಸಮುದಾಯವು ಭಾರತದೊಂದಿಗೆ ಒಗ್ಗಟ್ಟಾಗಿ ನಿಲ್ಲುವ ಅವಶ್ಯಕತೆಯಿದೆ ಎಂದು ಕೂಡ ಬ್ಲ್ಯಾಕ್ ಮನ್ ಒತ್ತಿ ಹೇಳಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ