ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ಪತಿಯಿಂದ ಬಿಹಾರದ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ

ಡೆಹರಾಡೂನ್ (ಉತ್ತರಾಖಂಡ) – ನೀವು ವೃದ್ಧಾಪ್ಯದಲ್ಲಿ ಮದುವೆಯಾಗಲಿದ್ದೀರಾ? ನಿಮಗೆ ಮದುವೆಯಾಗಬೇಕೆಂದಿದ್ದರೆ, ಬಿಹಾರದಿಂದ ಹುಡುಗಿಯರನ್ನು ತರೋಣ. ಅಲ್ಲಿ ೨೦ ರಿಂದ ೨೫ ಸಾವಿರ ರೂಪಾಯಿಗಳಲ್ಲಿ ಹುಡುಗಿಯರು ಸಿಗುತ್ತಾರೆ, ಎಂದು ಉತ್ತರಾಖಂಡದ ಭಾಜಪ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಅವರ ಪತಿ ಗಿರಿಧಾರಿ ಲಾಲ್ ಸಾಹು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ. ಗಿರಿಧಾರಿ ಲಾಲ್ ಸಾಹು ಅವರು ಯುವಕರೊಂದಿಗೆ ಸಂವಹನ ನಡೆಸುತ್ತಿದ್ದರು. ಆ ಸಮಯದಲ್ಲಿ ಒಬ್ಬ ಯುವಕನೊಂದಿಗೆ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ಸಾಹು ಅವರ ಈ ಹೇಳಿಕೆಯಿಂದಾಗಿ ಉತ್ತರಾಖಂಡ ಮತ್ತು ಬಿಹಾರ ರಾಜ್ಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, ಬಿಹಾರ ರಾಜ್ಯ ಮಹಿಳಾ ಆಯೋಗವು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾಹು ಅವರಿಗೆ ನೋಟಿಸ್ ಜಾರಿ ಮಾಡಿದೆ. ಭಾಜಪ ಕೂಡ ಅವರ ಹೇಳಿಕೆಯನ್ನು ಖಂಡಿಸಿದೆ. ಸಾಹು ಅವರಿಗೂ ಭಾಜಪಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭಾಜಪ ನಾಯಕರು ಹೇಳಿದ್ದಾರೆ.
ಟೀಕೆಗಳು ವ್ಯಕ್ತವಾದ ನಂತರ ಸಾಹು ಅವರು ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದು, ಗೆಳೆಯನ ಮದುವೆಯ ವಿಷಯವಾಗಿ ನಾನು ಹಾಗೆ ಹೇಳಿದ್ದೆ. ನನ್ನ ಪತ್ನಿಯ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ಈ ವಿಡಿಯೋವನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಮಾತುಗಳಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ, ನಾನು ಕೈಮುಗಿದು ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇಂತಹ ಹೇಳಿಕೆ ನೀಡುವವರನ್ನು ಜೈಲಿಗಟ್ಟಬೇಕು ! |
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case