ರಾಮರಾಜ್ಯದ ಸ್ಥಾಪನೆಯ ಭಾರವನ್ನು ಸೂಕ್ಷ್ಮದಿಂದ ಎತ್ತಿಹಿಡಿಯುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ದೆಹಲಿಯಲ್ಲಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆರಂಭದಲ್ಲಿ ಆಗುವ ಸೂಕ್ಷ್ಮದಲ್ಲಿನ ಯುದ್ಧದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದಣಿವು ಮತ್ತು ದಿನವಿಡಿ ಮಲಗುವ ಪ್ರಮಾಣವು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗುವುದು !

ನಾನು ದೆಹಲಿಯಲ್ಲಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಬರುವ ಆಧ್ಯಾತ್ಮಿಕ ಸ್ತರದಲ್ಲಿನ ಅಡೆತಡೆಗಳನ್ನು ದೂರಗೊಳಿಸುವ ಪ್ರಯತ್ನವನ್ನು ಮಾಡಬಾರದೆಂದು ಕೆಟ್ಟ ಶಕ್ತಿಗಳು ನನ್ನ ದಣಿವು ಮತ್ತು ನಿದ್ರೆಯ ಪ್ರಮಾಣವನ್ನು ಬಹಳಷ್ಟು ಹೆಚ್ಚಿಸಿದವು. ಆಗ ಆದ ತೊಂದರೆ ಮತ್ತು ಬಂದ ಅನುಭೂತಿ ಕೆಳಗಿನಂತಿದೆ.


ಸಮುದ್ರಮಂಥನದ ಸಮಯದಲ್ಲಿ ಭಗವಂತನು ಕೂರ್ಮಾವತಾರವನ್ನು ತಾಳಿ ಮಂದಾರ ಪರ್ವತವನ್ನು ತನ್ನ ಮೇಲೆ ತೆಗೆದುಕೊಂಡಿದ್ದನು, ಹಾಗೆ ಪ್ರಸ್ತುತ ಕಾಲದಲ್ಲಿ ಭಗವಂತನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ’ ಈ ಅಂಶಾವತಾರದಲ್ಲಿ ರಾಮರಾಜ್ಯದ ಸ್ಥಾಪನೆಯ ಭಾರವನ್ನು ಸ್ವತಃ ಸೂಕ್ಷ್ಮದಿಂದ ಎತ್ತಿ ಹಿಡಿಯುತ್ತಿದ್ದಾರೆ !’ – ಸಂಪಾದಕರು

ಆದ ತೊಂದರೆ

೧. ಕಾರ್ಯಕ್ರಮದ ದಿನಾಂಕವು ಸಮೀಪ ಬಂದಂತೆ ನನ್ನ ದಣಿವು ತುಂಬಾ ಹೆಚ್ಚಾಗತೊಡಗಿತು. ಒಂದೊಂದು ಹೆಜ್ಜೆ ಇಡುವುದಕ್ಕೂ ಕಷ್ಟವೆನಿಸುತ್ತಿತ್ತು.

೨. ಊಟ ಮಾಡುವಾಗ, ಓದುವಾಗ ಒಮ್ಮಿಂದೊಮ್ಮೆಲೆ ತಡೆಯಲಾಗದ ನಿದ್ರೆ ಬಂದು ಎಲ್ಲವನ್ನು ನಿಲ್ಲಿಸಿ ಮಲಗಬೇಕಾಗುತ್ತಿತ್ತು.

೩. ೪-೫ ದಿನ ರಾತ್ರಿ ೯ ಗಂಟೆಗೆ ತಡೆಯಲಾರದ ನಿದ್ರೆ ಆವರಿಸಿತು. ಆ ಸಮಯದಲ್ಲಿ ಮಲಗಿದ ನಂತರ ನೇರವಾಗಿ ಬೆಳಗ್ಗೆ ೬ ಗಂಟೆಗೆ ಎದ್ದೆನು.

೪. ಈ ದಿನಗಳಲ್ಲಿ ೨೪ ಗಂಟೆಗಳಲ್ಲಿ ಸುಮಾರು ೧೩ ರಿಂದ ೧೪ ಗಂಟೆಗಳ ವರೆಗೆ ಮಲಗುವುದರಲ್ಲಿಯೇ ಸಮಯ ಹೋಗುತ್ತಿತ್ತು.

೫. ಈ ಕಾಲಾವಧಿಯಲ್ಲಿ ನನ್ನ ಪ್ರಾಣಶಕ್ತಿಯು ಶೇ. ೨೪ ರಷ್ಟಿತ್ತು. ಇತರ ಸಮಯದಲ್ಲಿ ಶೇ. ೨೭ ರಷ್ಟಿರುತ್ತದೆ, ಸಾಮಾನ್ಯ ವ್ಯಕ್ತಿಯಲ್ಲಿ ಶೇ. ೧೦೦ ರಷ್ಟಿರುತ್ತದೆ.

ಒಳ್ಳೆಯ ಅನುಭೂತಿ

ಕೋಣೆಯಲ್ಲಿ ನನ್ನ ಮಂಚದ ಎದುರಿಗೆ ದೇವರಕೋಣೆ ಇದೆ. ಆದ್ದರಿಂದ ಮಂಚದ ಮೇಲೆ ಮಲಗಿದಾಗ ದೇವರಕೋಣೆಯಲ್ಲಿ ಶ್ರೀರಾಮನ ಚಿತ್ರದ ಕಡೆಗೆ ಗಮನ ಹೋಗುತ್ತದೆ ಮತ್ತು ಭಾವಜಾಗೃತಿಯಾಗಿ ನನ್ನಿಂದ ತಾನಾಗಿಯೇ ನಮಸ್ಕಾರ ಮಾಡಲ್ಪಡುತ್ತಿತ್ತು ಮತ್ತು ರಾಮನಾಮ ಜಪವಾಗುತ್ತಿತ್ತು. ಈ ರೀತಿ ಕಳೆದ ೧-೨ ತಿಂಗಳುಗಳಿಂದ ಆಗುತ್ತಿದೆ. ಮಹೋತ್ಸವದ ಕಾರ್ಯಕ್ರಮದಲ್ಲಿ ಅಡೆತಡೆಗಳು ಬರಬಾರದೆಂದು ನಾನೇನು ವಿಶೇಷ ಸಾಧನೆ ಮಾಡದಿದ್ದರೂ, ‘ಭಗವಂತನ ಆಶೀರ್ವಾದದಿಂದ ಕಾರ್ಯಕ್ರಮವು ಚೆನ್ನಾಗಿ ನಡೆಯಲಿದೆ’, ಎಂದು ನನಗೆ ದೃಢ ನಂಬಿಕೆಯಿತ್ತು.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ