ಮನೆಯ ಬಾಗಿಲುಗಳಿಗೆ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಲಾಗಿತ್ತು!

ಢಾಕಾ (ಬಾಂಗ್ಲಾದೇಶ) – ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿಸೆಂಬರ್ 22ರಂದು ಮುಂಜಾನೆ 3:45ಕ್ಕೆ ಚಿತ್ತಗಾಂಗ್ ಜಿಲ್ಲೆಯ ಪಶ್ಚಿಮ ಸುಲ್ತಾನಪುರ ಗ್ರಾಮದಲ್ಲಿ ಕಟ್ಟರ್ ಪಂಥೀಯರು ಸುಖಾ ಶೀಲ್ ಮತ್ತು ಅನಿಲ್ ಶೀಲ್ ಎಂಬುವವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಎರಡೂ ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಹಚ್ಚಿದಾಗ ಕುಟುಂಬದ ಸದಸ್ಯರು ಮನೆಯ ಒಳಗಡೆಯೇ ಇದ್ದರು. ಬಾಗಿಲುಗಳಿಗೆ ಹೊರಗಿನಿಂದ ಚಿಲಕ ಹಾಕಿದ್ದರಿಂದ ಅವರು ಬಹಳ ಕಷ್ಟಪಟ್ಟು ಪ್ರಾಣ ಉಳಿಸಿಕೊಂಡು ಹೊರಬಂದರು. ಆದರೆ ಮನೆಯಲ್ಲಿದ್ದ ಪ್ರಾಣಿಗಳು ಬೆಂಕಿಯಲ್ಲಿ ಸಾವನ್ನಪ್ಪಿವೆ ಮತ್ತು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೂದಿಯಾಗಿವೆ. ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಘಟನೆಯ ನಂತರ ಪೊಲೀಸರು ಹಿಂದೂಗಳ ವಾಸಸ್ಥಳಗಳಲ್ಲಿ ಗಸ್ತನ್ನು ಹೆಚ್ಚಿಸಿದ್ದಾರೆ.
🚨 Attacks on Hindus in Bangladesh 🚨
Radical Islamists torched two Hindu homes – doors locked from outside before setting them ablaze.
Fanatics openly threaten: “Serious consequences if any act is committed against Islam!”
This mirrors the ethnic cleansing of Hindus from… pic.twitter.com/UnIvFCfnDS
— Sanatan Prabhat (@SanatanPrabhat) December 24, 2025
ಇಸ್ಲಾಂ ವಿರುದ್ಧವಾಗಿ ನಡೆದುಕೊಂಡರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ! – ಬೋರ್ಡ್ ಹಾಕುವ ಮೂಲಕ ಮತಾಂಧರಿಂದ ಹಿಂದೂಗಳಿಗೆ ಬೆದರಿಕೆ !

ಮನೆಗೆ ಬೆಂಕಿ ಹಚ್ಚಿದವರು ಪಕ್ಕದಲ್ಲೇ ಬೋರ್ಡ್ ಹಾಕಿದ್ದು ಅದರಲ್ಲಿ, “ಇಸ್ಲಾಂ ವಿರುದ್ಧದ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗುವುದನ್ನು ತಕ್ಷಣ ನಿಲ್ಲಿಸಿ. ಇಲ್ಲದಿದ್ದರೆ ಪರಿಣಾಮ ಎದುರಿಸಿ, ಈ ಭಾಗದ ಎಲ್ಲಾ ಹಿಂದೂಗಳ ಓಡಾಟದ ಮೇಲೆ ಕಣ್ಣಿಡಲಾಗಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ನಿಮ್ಮ ಮನೆ, ಆಸ್ತಿ ಮತ್ತು ವ್ಯವಹಾರಗಳನ್ನು ನಾಶ ಮಾಡಲಾಗುವುದು. ನಿಮ್ಮನ್ನು ಉಳಿಸಲು ಯಾರೂ ಬರುವುದಿಲ್ಲ. ನೀವು ಪ್ರತಿರೋಧ ತೋರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ”, ಎಂದು ಬರೆಯಲಾಗಿದೆ.(ಕಾಶ್ಮೀರದಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿ ಅಲ್ಲಿಂದ ಓಡಿಸಿದಂತೆ ಈಗ ಬಾಂಗ್ಲಾದೇಶದಲ್ಲಿ ಆಗುತ್ತಿದೆ. ವಿಶ್ವದ ಯಾವುದೇ ಮಾನವ ಹಕ್ಕುಗಳ ಸಂಘಟನೆ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಆಕ್ರೋಶದ ವಿಷಯ!)
ಸಂಪಾದಕೀಯ ನಿಲುವು
|
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid