ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಮಹಿಳೆಯ ಹಿಜಾಬ್ ತೆಗೆಸಿದಕ್ಕಾಗಿ ಕುಖ್ಯಾತ ಪಾಕಿಸ್ತಾನಿ ಗೂಂಡಾನಿಂದ ಬೆದರಿಕೆ Nitish Kumar Life Threat

ಕ್ಷಮೆಯಾಚಿಸಿ, ನಂತರ ಎಚ್ಚರಿಕೆ ನೀಡಿಲ್ಲ ಎಂದು ಹೇಳಬೇಡಿ!

ನವ ದೆಹಲಿ – ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ಪ್ರಶಸ್ತಿ ನೀಡುವಾಗ, ಆಕೆ ಧರಿಸಿದ್ದ ಹಿಜಾಬ್ ತೆಗೆಯಲು ಪ್ರಯತ್ನಿಸಿದರು. ಈ ಘಟನೆಯ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈಗ ಪಾಕಿಸ್ತಾನದ ಕುಖ್ಯಾತ ಗೂಂಡಾ ಶಹಜಾದ್ ಭಟ್ಟಿ ಎಂಬವನು ವಿಡಿಯೋ ಬಿಡುಗಡೆ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ. ಆತ, ಮುಖ್ಯಮಂತ್ರಿಗಳು ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ನಂತರ ನಮಗೆ ಎಚ್ಚರಿಕೆ ನೀಡಿರಲಿಲ್ಲ ಎಂದು ಹೇಳಬೇಡಿ ಎಂದು ಹೇಳಿದ್ದಾನೆ.

ಭಟ್ಟಿ ತನ್ನ ವಿಡಿಯೋದಲ್ಲಿ, “ಬಿಹಾರದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಉನ್ನತ ಪದವಿಯಲ್ಲಿರುವ ವ್ಯಕ್ತಿಯೊಬ್ಬರು ಮುಸ್ಲಿಂ ಮಹಿಳೆಯ ಜೊತೆ ಈ ರೀತಿ ವರ್ತಿಸುತ್ತಾರೆ. ನಂತರ ಶಹಜಾದ್ ಭಟ್ಟಿ ಇದನ್ನು ಮಾಡಿದ, ಅದನ್ನು ಮಾಡಿದ ಎಂದು ನನ್ನ ಮೇಲೆ ಆರೋಪ ಹೊರಿಸಲಾಗುತ್ತದೆ. ಆ ವ್ಯಕ್ತಿಗೆ (ನಿತೀಶ್ ಕುಮಾರ್) ಇನ್ನು ಕೂಡ ಸಮಯವಿದೆ, ಅವರು ಆ ಮಹಿಳೆಯ ಕ್ಷಮೆ ಕೇಳಬೇಕು. ಇಂದು ಕ್ಷಮೆ ಕೇಳದಿದ್ದರೆ, ಸಂಬಂಧಪಟ್ಟ ಸಂಸ್ಥೆಗಳು ಇದರ ವಿರುದ್ಧ ಕ್ರಮ ಕೈಗೊಳ್ಳಲಿ. ನಂತರ ಎಚ್ಚರಿಕೆ ನೀಡಿರಲಿಲ್ಲ ಎಂದು ಹೇಳಬೇಡಿ,” ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಪಾಕಿಸ್ತಾನಿ ಗೂಂಡಾನಿಗೆ ಭಾರತದ ಮುಖ್ಯಮಂತ್ರಿಯೊಬ್ಬರಿಗೆ ಬೆದರಿಕೆ ಹಾಕುವ ಧೈರ್ಯ ಬಂದಿದ್ದಾದರೂ ಹೇಗೆ? ಈ ವಿಷಯವಾಗಿ ಭಾರತವು ಪಾಕಿಸ್ತಾನದ ರಾಯಭಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕು! ಹಾಗೆಯೇ ಈ ಗೂಂಡಾನನ್ನು ಭಾರತದ ವಶಕ್ಕೆ ನೀಡುವಂತೆ ಸೂಚಿಸಬೇಕು!