ಅಕ್ರಮವಾಗಿ ವರ್ಗಾವಣೆ ಮಾಡಲಾದ ಭೂಮಿಯನ್ನು ಮೂಲ ಆದಿವಾಸಿ ಕುಟುಂಬಗಳಿಗೆ ಹಿಂತಿರುಗಿಸಬೇಕು! Jamia Islamia Tehsildar Court Order

ಅಕ್ಕಲಕುವಾ (ನಂದೂರ್ಬಾರ್) ತಹಶೀಲ್ದಾರ್ ನ್ಯಾಯಾಲಯದಿಂದ ‘ಜಾಮಿಯಾ ಇಸ್ಲಾಮಿಯಾ’ ಶಿಕ್ಷಣ ಸಂಸ್ಥೆಗೆ ಆದೇಶ!

ಅಕ್ಕಲಕುವಾ (ನಂದೂರ್ಬಾರ್) – ಅಕ್ರಮವಾಗಿ ಭೂಮಿ ವರ್ಗಾವಣೆ ಮಾಡಿಕೊಂಡಿದ್ದ ‘ಜಾಮಿಯಾ ಇಸ್ಲಾಮಿಯಾ ಇಶಾತುಲ್ ಉಲೂಮ್ ಟ್ರಸ್ಟ್’ ಶಿಕ್ಷಣ ಸಂಸ್ಥೆಯು ಆ ಭೂಮಿಯನ್ನು ಮೂಲ ಆದಿವಾಸಿ ಕುಟುಂಬಗಳಿಗೆ ಹಿಂತಿರುಗಿಸಬೇಕೆಂದು ಇಲ್ಲಿನ ತಹಶೀಲ್ದಾರ್ ನ್ಯಾಯಾಲಯ ತೀರ್ಪು ನೀಡಿದೆ. ಇದೇ ಸಂಸ್ಥೆಯಲ್ಲಿ ಯೆಮೆನ್ ದೇಶದ ಕುಟುಂಬವೊಂದು ಅಕ್ರಮವಾಗಿ ನೆಲೆಸಿದ್ದಕ್ಕಾಗಿ ಬಂಧಿಸಲಾಗಿತ್ತು ಮತ್ತು ಸಂಸ್ಥೆಯ ಸಂಚಾಲಕರ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿತ್ತು. ಆ ಕುಟುಂಬವು ಅಕ್ಕಲಕುವಾದಿಂದ ಭಾರತ ಸರಕಾರದ ನಿವಾಸಿಗಳೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. (ಜಾರಿ ನಿರ್ದೇಶನಾಲಯ) ದಾಳಿ ನಡೆಸಿತ್ತು. ನ್ಯಾಯವಾದಿ ಸುನಿಲ್ ವಸಾವೆ ಅವರು ಮೌಜೆ ಪಿಂಪ್ರಿಪಾಡಾದ ಕೃಷಿ ಭೂಮಿಗಾಗಿ ಅಕ್ಕಲಕುವಾ ತಹಶೀಲ್ದಾರರ ಬಳಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಈ ಆದೇಶದ ವಿರುದ್ಧ ಛತ್ರಪತಿ ಸಂಭಾಜಿನಗರದ ಕಂದಾಯ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಜಾಮಿಯಾ ಇಸ್ಲಾಮಿಯಾ ಇಶಾತುಲ್ ಉಲೂಮ್ ಟ್ರಸ್ಟ್ ಹೊಂದಿದೆ. ಸಂಬಂಧಿತ ಸಂಸ್ಥೆಯ ಮುಖ್ಯಸ್ಥ ಗುಲಾಮ್ ವಸ್ತಾನ್ವಿ ಅವರು ಕಳೆದ ವರ್ಷ ನಿಧನರಾಗಿದ್ದಾರೆ. ಆದಿವಾಸಿ ಬಾಂಧವರ ಪರವಾಗಿ ಬಂದಿರುವ ಈ ತೀರ್ಪಿನ ನಂತರ, ಜಾಮಿಯಾ ಸಂಸ್ಥೆಯು ಇದೇ ರೀತಿಯಲ್ಲಿ ಇನ್ನೂ ಅನೇಕ ಭೂಮಿಗಳನ್ನು ಕಬಳಿಸಿರುವುದು ಬೆಳಕಿಗೆ ಬರುತ್ತಿದೆ.

ಸಂಪಾದಕೀಯ ನಿಲುವು

ಕೇವಲ ಭೂಮಿ ವರ್ಗಾವಣೆಯಷ್ಟೇ ಸಾಲದು, ಈ ಕೃತ್ಯ ಎಸಗಿದ ಸಂಸ್ಥೆಯ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!