೫ ರಾಜ್ಯಗಳು ಮತ್ತು ಕೇಂದ್ರಾಡಳಿತದಿಂದ ೧ ಕೋಟಿಗೂ ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿವೆ – SIR Voter List Revision

ನವದೆಹಲಿ – ವಿಶೇಷ ತೀವ್ರ ಪರಿಷ್ಕರಣೆಯ ನಂತರ ಬಂಗಾಳ, ರಾಜಸ್ಥಾನ, ಗೋವಾ, ಲಕ್ಷದ್ವೀಪ ಮತ್ತು ಪುದುಚೇರಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ. ೭.೬ ರಷ್ಟು ಇಳಿಕೆ ದಾಖಲಾಗಿದೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲು ೧೩ ಕೋಟಿ ೩೫ ಲಕ್ಷ ಮತದಾರರಿದ್ದರು, ಈಗ ಈ ಸಂಖ್ಯೆ ೧೨ ಕೋಟಿ ೩೩ ಲಕ್ಷಕ್ಕೆ ಇಳಿಕೆಯಾಗಿದೆ. ಅಂದರೆ ಸುಮಾರು ೧ ಕೋಟಿ ೨ ಲಕ್ಷ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಮುಂದೆ ಹಕ್ಕು ಪ್ರತಿಪಾದನೆ, ಆಕ್ಷೇಪಣೆ ಮತ್ತು ವಿಚಾರಣೆಯ ಪ್ರಕ್ರಿಯೆ ಆರಂಭವಾಗಲಿದೆ.

೧. ಬಂಗಾಳದಲ್ಲಿ ೫೮ ಲಕ್ಷ ೨೦ ಸಾವಿರದ ೮೯೮ ಮತದಾರರ ಹೆಸರುಗಳನ್ನು ತೆಗೆದುಹಾಕಲು ಗುರುತಿಸಲಾಗಿದೆ. ರಾಜಸ್ಥಾನದಲ್ಲಿ ೪೧ ಲಕ್ಷ ೮೫ ಸಾವಿರ ಮತ್ತು ಪುದುಚೇರಿಯಲ್ಲಿ ೮೫ ಸಾವಿರ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.

೨. ವಿಶೇಷ ತೀವ್ರ ಪರಿಷ್ಕರಣೆಯ ಎರಡನೇ ಹಂತವು ಫೆಬ್ರವರಿ ೨೦೨೬ ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ೧೪ ಫೆಬ್ರವರಿ ೨೦೨೬ ರಂದು ಪ್ರಕಟಿಸಲಾಗುವುದು.

೩. ರಾಜಸ್ಥಾನದ ಮುಖ್ಯ ಚುನಾವಣಾ ಅಧಿಕಾರಿ ನವೀನ್ ಮಹಾಜನ್ ಮಾತನಾಡಿ, “ಯಾವ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆಯೋ ಅವರಿಗೆ ಈಗ ಯಾವುದೇ ನೋಟಿಸ್ ನೀಡಲಾಗುವುದಿಲ್ಲ. ಅವರಿಗೆ ಆಕ್ಷೇಪಣೆ ಇದ್ದಲ್ಲಿ, ದಾಖಲೆಗಳನ್ನು ಸಲ್ಲಿಸಿ ಹಕ್ಕು ಪ್ರತಿಪಾದಿಸಬಹುದು. ಇದರಲ್ಲಿ ಕಾಯಂ ಆಗಿ ವಲಸೆ ಹೋದವರು, ಮೃತಪಟ್ಟವರು, ಅನುಪಸ್ಥಿತರಿರುವವರು ಮತ್ತು ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ,” ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದರೆ ಏನು ಮಾಡಬೇಕು?

ಚುನಾವಣಾ ಆಯೋಗವು ಮತದಾರರಿಗೆ, ಒಂದು ವೇಳೆ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟೊಗಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ‘ಫಾರ್ಮ್-೬’ ಭರ್ತಿ ಮಾಡುವ ಮೂಲಕ ಮತ್ತೆ ಹೆಸರು ನೋಂದಾಯಿಸಿಕೊಳ್ಳಬಹುದು. ಫಾರ್ಮ್-೬ ಬೂತ್ ಮಟ್ಟದ ಅಧಿಕಾರಿಗಳ ಬಳಿ (BLO), ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಅಥವಾ ಚುನಾವಣಾ ಕಚೇರಿಗಳಲ್ಲಿ ಲಭ್ಯವಿದೆ. ಅಲ್ಲದೆ, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೂ ಪಡೆಯಬಹುದು. ಇದಲ್ಲದೆ ತಹಸಿಲ, ಜಿಲ್ಲಾಧಿಕಾರಿ ಅಥವಾ ಚುನಾವಣೆ ಕಾರ್ಯಾಲಯದಿಂದಲೂ ಕೂಡ ಫಾರಂ ೬ ದೊರೆಯುತ್ತದೆ. ಫಾರಂ ಜೊತೆಗೆ ಗುರುತಿಗಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಪ್ರತಿ ಲಗತ್ತಿಸಬೇಕು.

ವಿಳಾಸದ ಪುರಾವೆಗಾಗಿ ರೇಷನ್ ಕಾರ್ಡ್, ವಿದ್ಯುತ್ ಬಿಲ್ ಅಥವಾ ಬ್ಯಾಂಕ್ ಪಾಸ್‌ಬುಕ್ ಪ್ರತಿ ನೀಡಬಹುದು. ವಯಸ್ಸಿನ ಪುರಾವೆಗಾಗಿ ಜನನ ಪ್ರಮಾಣ ಪತ್ರ ಅಥವಾ ೧೦ ನೇ ತರಗತಿಯ ಅಂಕಪಟ್ಟಿಯನ್ನು ಲಗತ್ತಿಸಬಹುದು. ಈ ಫಾರಂ ಸ್ಥಳೀಯ ಬೂತ್ ಲೆವೆಲ್ ಆಫೀಸರ್ ಬಳಿ ನೀಡಬಹುದು ಅಥವಾ ಚುನಾವಣೆ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಹತ್ತಿರದ ಚುನಾವಣಾ ಕಚೇರಿಗೂ ಸಲ್ಲಿಸಬಹುದು. ಪರಿಶೀಲನೆಯ ನಂತರ ಎಲ್ಲಾ ಮಾಹಿತಿ ಸರಿಯಾಗಿದ್ದರೆ, ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗುವುದು.