‘ಭಾರತದಿಂದ ಈಶಾನ್ಯ ಭಾರತವನ್ನು ಪ್ರತ್ಯೇಕಿಸುತ್ತೇವೆ !’

ಬಾಂಗ್ಲಾದೇಶ: ‘ನ್ಯಾಷನಲ್ ಸಿಟಿಜನ್ ಪಾರ್ಟಿ’ ನಾಯಕ ಹಸನತ್ ಅಬ್ದುಲ್ಲಾನ ಹಗಲುಗನಸಿನ ಹೇಳಿಕೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ‘ನ್ಯಾಷನಲ್ ಸಿಟಿಜನ್ ಪಾರ್ಟಿ’ ನಾಯಕ ಹಸನತ್ ಅಬ್ದುಲ್ಲಾ ಭಾರತದ ವಿರುದ್ಧ ತೀವ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾನೆ. ಶೇಖ್ ಹಸೀನಾ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾಗಿರುವ ಅಬ್ದುಲ್ಲಾ, ನೇರವಾಗಿ ಭಾರತವನ್ನು ವಿಭಜಿಸುವ ಬೆದರಿಕೆ ಹಾಕಿದ್ದಾನೆ.

ಶಹೀದ್ ಮಿನಾರ್ನಲ್ಲಿ ನಡೆದ ಸರ್ವಪಕ್ಷಗಳ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವನು, ಬಾಂಗ್ಲಾದೇಶವನ್ನು ಅಸ್ಥಿರಗೊಳಿಸಲು ಯಾವುದೇ ಪ್ರಯತ್ನ ನಡೆದರೆ, ಅದಕ್ಕೆ ಪ್ರತಿಯಾಗಿ ಭಾರತದ ‘ಸೆವೆನ್ ಸಿಸ್ಟರ್ಸ್’ (ಈಶಾನ್ಯ ಭಾರತದ ೭ ರಾಜ್ಯಗಳು) ಭಾಗವನ್ನು ಭಾರತದಿಂದ ಪ್ರತ್ಯೇಕಿಸಲಾಗುವುದು ಎಂದು ಹೇಳಿದ್ದಾನೆ.

ವಕ್ತಾರ ಶರೀಫ್ ಉಸ್ಮಾನ್ ಹಾದಿ ಮೇಲಿನ ಪ್ರಾಣಾಂತಿಕ ದಾಳಿಯನ್ನು ಖಂಡಿಸಲು ಇಂಕ್ವಿಲಾಬ್ ಮಂಚ್’ ಈ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಹಸನತ್ ಅಬ್ದುಲ್ಲಾ ಯಾರ ಹೆಸರನ್ನೂ ಹೇಳದೆ ಈ ಆರೋಪ ಮಾಡಿದ್ದಾನೆ:

೧. ಕೆಲವು ಶಕ್ತಿಗಳು ಗಡಿಯಾಚೆಯಿಂದ ಆಶ್ರಯ ಮತ್ತು ಸಹಾಯ ಪಡೆಯುತ್ತಾ ಬಾಂಗ್ಲಾದೇಶದಲ್ಲಿ ಅಸ್ಥಿರತೆ ಉಂಟುಮಾಡಲು ಮತ್ತು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಲು ಸಂಚು ರೂಪಿಸುತ್ತಿವೆ.

೨. ಉಸ್ಮಾನ್ ಹಾದಿ ಮೇಲಿನ ದಾಳಿಯಲ್ಲಿ ಭಾಗಿಯಾದವರಿಗೆ ಭಾರತದಿಂದ ಬೆಂಬಲ ಸಿಗುತ್ತಿದೆ.

೩. ಬಾಂಗ್ಲಾದೇಶದ ಸಾರ್ವಭೌಮತ್ವ, ಸಾಮರ್ಥ್ಯ, ಮತದಾನದ ಹಕ್ಕು ಮತ್ತು ಮಾನವ ಹಕ್ಕುಗಳನ್ನು ಗೌರವಿಸದ ಶಕ್ತಿಗಳಿಗೆ ಆಶ್ರಯ ನೀಡಿದರೆ ಬಾಂಗ್ಲಾದೇಶ ತಕ್ಕ ಪ್ರತ್ಯುತ್ತರ ನೀಡಲಿದೆ. ಬಾಂಗ್ಲಾದೇಶ ಅಸ್ಥಿರಗೊಳಿಸುವ ಗಂಭೀರ ಪರಿಣಾಮಗಳನ್ನು ಇಡೀ ಪ್ರದೇಶವೇ ಅನುಭವಿಸಬೇಕಾಗುತ್ತದೆ.

೪. ಬಾಂಗ್ಲಾದೇಶ ಅಸ್ಥಿರವಾದರೆ ಪ್ರತಿಭಟನೆಯ ಬೆಂಕಿ ಗಡಿಯಾಚೆಗೂ ಹರಡಲಿದೆ.

೫. ಯೂನಸ್ ನೇತೃತ್ವದ ಸರಕಾರವು ಭಾರತದ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕು. ಇನ್ನು ಮುಂದೆ ಭಾರತವನ್ನು ಕೇವಲ ನೆರೆರಾಷ್ಟ್ರವೆಂದು ನೋಡಬಾರದು.

‘ಬಾಂಗ್ಲಾದೇಶದಲ್ಲಿ ಭಾರತದ ಪ್ರಾಬಲ್ಯವನ್ನು ನಿರ್ಮಿಸಲು ಬಿಡುವುದಿಲ್ಲ!’ – ನಾಹಿದ್ ಇಸ್ಲಾಂ

ಸಭೆಯಲ್ಲಿ, ಪಕ್ಷದ ಸಂಚಾಲಕ ನಾಹಿದ್ ಇಸ್ಲಾಂ ಅವರು ಮಾತನಾಡಿ, ಯಾವುದೇ ವ್ಯಕ್ತಿ, ಸಂಸ್ಥೆ, ವೃತ್ತಿಪರ ಗುಂಪು ಅಥವಾ ಬುದ್ಧಿಜೀವಿಗಳ ಮೂಲಕ ಬಾಂಗ್ಲಾದೇಶದಲ್ಲಿ ಭಾರತದ ಪ್ರಾಬಲ್ಯವನ್ನು ನಿರ್ಮಿಸಲು ಬಿಡುವುದಿಲ್ಲ ಎಂದು ಹೇಳಿದರು. ಬಾಂಗ್ಲಾದೇಶದಲ್ಲಿ ದೆಹಲಿಯ ಸಿಂಹಾಸನವನ್ನು ಸುಡಲಾಗುವುದು ಎಂದು ಅವರು ಬೆದರಿಕೆ ಹಾಕಿದರು.

ಸಂಪಾದಕೀಯ ನಿಲುವು

  • ಭಾರತದಿಂದ ವಿಭಾಜಿತಗೊಂಡಿರುವ ಬಾಂಗ್ಲಾದೇಶದ ಸಣ್ಣಪುಟ್ಟ ನಾಯಕರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮನ್ನು ತಾವು ಹಾಸ್ಯಾಸ್ಪದವಾಗಿಸಿಕೊಳ್ಳುತ್ತಿದ್ದಾರೆ. ಭಾರತವು ಈಗ ನೇರ ಕ್ರಮ ಕೈಗೊಂಡು ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸಿ, ಭಾರತದೊಂದಿಗೆ ವಿಲೀನಗೊಳಿಸುವಂತಹ ಸ್ಥಿತಿ ನಿರ್ಮಾಣವಾಗಿದೆ!
  • ಡಿಸೆಂಬರ್ ೧೬, ೧೯೭೧ ರಂದು ಭಾರತದ ಕಾರಣದಿಂದಾಗಿಯೇ ಪಾಕಿಸ್ತಾನ ಶರಣಾಯಿತು ಮತ್ತು ಬಾಂಗ್ಲಾದೇಶದ ರಚನೆಯಾಯಿತು. ಆ ಸಮಯದಲ್ಲಿ ಭಾರತವು ಬಾಂಗ್ಲಾದೇಶವನ್ನು ರಚಿಸದೆ ಅದನ್ನು ಭಾರತಕ್ಕೆ ಮತ್ತೆ ಸೇರಿಸಿಕೊಳ್ಳಬಹುದಿತ್ತು. ಭಾರತ ಹಾಗೆ ಮಾಡಲಿಲ್ಲ ಎಂಬುದನ್ನು ನಾಹಿದ್ ಇಸ್ಲಾಂ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು!