ಕರ್ಣಾವತಿ (ಗುಜರಾತ್) ಇಲ್ಲಿಯ ಪ್ರಾಚೀನ ದೇವಸ್ಥಾನಗಳನ್ನು ಕೆಡವಿ ಮುಸ್ಲಿಂ ಬಿಲ್ಡರ್‌ನಿಂದ ಕಟ್ಟಡ ನಿರ್ಮಾಣ! Karnavati Muslim Flats

  • ಕಟ್ಟಡದ ಎಲ್ಲಾ ಫ್ಲ್ಯಾಟ್‌ಗಳು ಮುಸ್ಲಿಮರ ಮಾಲೀಕತ್ವದಲ್ಲಿ!

  • ಮುಖ್ಯಮಂತ್ರಿಗಳಿಂದ ತನಿಖೆಗೆ ಆದೇಶ

ಕರ್ಣಾವತಿ (ಗುಜರಾತ್) – ಇಲ್ಲಿನ ದಾನಿಲಿಮಡಾ ವಾರ್ಡ್‌ನ ಮೇವಾತಿ ಗಾವ್‌ಕುವಾ ಎದುರಿಗಿದ್ದ ಪ್ರಾಚೀನ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಈ ಪ್ರಾಚೀನ ದೇವಸ್ಥಾನಗಳ ಜಾಗದಲ್ಲಿ ಮುಸ್ಲಿಂ ಬಿಲ್ಡರ್ ಒಬ್ಬರು ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಟ್ಟಡದ ಫ್ಲ್ಯಾಟ್‌ಗಳಲ್ಲಿ ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಈ ಫ್ಲ್ಯಾಟ್‌ಗಳ ಮುಂಭಾಗದಲ್ಲಿ ಮಾಂಸಾಹಾರಿ ಆಹಾರದ ಅಂಗಡಿಗಳೂ ಇವೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಹಿಂದೂ ನಾಗರಿಕರು ಈ ಬಗ್ಗೆ ಕರ್ಣಾವತಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿದ್ದಾರೆ; ಆದರೆ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ನಂತರ ಮುಖ್ಯಮಂತ್ರಿಗಳಿಗೆ ದೂರು ನೀಡಿದಾಗ, ಅವರು ತನಿಖೆಗೆ ಆದೇಶಿಸಿದ್ದಾರೆ.

ಅಶಾಂತ ಪ್ರದೇಶದಲ್ಲಿ ನಿರ್ಮಾಣಕ್ಕೆ ಅನುಮತಿ ನೀಡಿದ ಆರೋಪ

ಸ್ಥಳೀಯ ನಾಗರಿಕರ ಆರೋಪದಂತೆ, ಈ ಪ್ರದೇಶವು ‘ಅಶಾಂತ ಪ್ರದೇಶ ಕಾಯ್ದೆ’ಯ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದರೂ ಸಹ, ಪ್ರಾಚೀನ ದೇವಸ್ಥಾನದ ಜಾಗದಲ್ಲಿ ಮುಸ್ಲಿಮರಿಗಾಗಿ ಫ್ಲ್ಯಾಟ್‌ಗಳನ್ನು ನಿರ್ಮಿಸಲು ಅನುಮತಿ ನೀಡಲಾಯಿತು. ಇಲ್ಲಿ ಎರಡು ಪ್ರಾಚೀನ ದೇವಸ್ಥಾನಗಳನ್ನು ಕೆಡವಿ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಇನ್ನೂ ಒಂದು ದೇವಸ್ಥಾನವಿದ್ದು, ಅದರ ಮೇಲೆ ನಿರ್ಮಿಸಲಾದ ಕಟ್ಟಡದಲ್ಲಿ ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ.

ಮುಖ್ಯಮಂತ್ರಿಗಳಿಂದ ತನಿಖೆಗೆ ಆದೇಶ

ಈ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಗಾಂಧಿನಗರದಲ್ಲಿ ದೂರು ದಾಖಲಿಸಲಾಯಿತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರಕರಣದ ಗಂಭೀರತೆಯನ್ನು ಗಮನಿಸಿ ತನಿಖೆಗೆ ಆದೇಶಿಸಿದ್ದಾರೆ. “ಸರಕಾರವು ತಕ್ಷಣವೇ ಕ್ರಮ ಕೈಗೊಳ್ಳಲಿದೆ ಮತ್ತು ಅಕ್ರಮ ನಿರ್ಮಾಣವನ್ನು ತೆರವುಗೊಳಿಸಿ ದೇವಸ್ಥಾನವನ್ನು ಮುಕ್ತಗೊಳಿಸಲಿದೆ” ಎಂದು ಅವರು ಸ್ಥಳೀಯ ಹಿಂದೂ ನಾಗರಿಕರಿಗೆ ಭರವಸೆ ನೀಡಿದ್ದಾರೆ.

2016ರ ಅನುಮತಿಯ ಬಗ್ಗೆ ಪ್ರಶ್ನೆಗಳು

2016 ರಲ್ಲಿ ಮಹಾನಗರ ಪಾಲಿಕೆಯು ಪ್ರಾಚೀನ ಶ್ರೀ ಜೋಗಣಿ ಮಾತಾ ದೇವಸ್ಥಾನದ ಮೇಲ್ಭಾಗದಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಲು ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ಸಾಕಿರ್ ಅಹ್ಮದ್ ಎಂಬ ಬಿಲ್ಡರ್ ಕಟ್ಟಡದ ನಕ್ಷೆಯನ್ನು ಪಾಲಿಕೆಗೆ ಸಲ್ಲಿಸಿದ್ದರು ಮತ್ತು ಪಾಲಿಕೆಯು ಅದಕ್ಕೆ ಅನುಮೋದನೆ ನೀಡಿತ್ತು. ಆ ಸಮಯದಲ್ಲಿಯೂ ಸ್ಥಳೀಯ ಹಿಂದೂ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು; ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. (ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯ! – ಸಂಪಾದಕರು)

ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟ!

ಅಕ್ರಮವಾಗಿ ನಿರ್ಮಿಸಲಾದ ಈ ಕಟ್ಟಡದ ಹೆಸರು ‘ಕಬೀರ್ ಹೈಟ್ಸ್’ ಎಂದು ಹೇಳಲಾಗಿದೆ. ಈ ಕಟ್ಟಡದ ಎಲ್ಲಾ ಫ್ಲ್ಯಾಟ್‌ಗಳಲ್ಲಿ ಮುಸ್ಲಿಂ ಕುಟುಂಬಗಳೇ ವಾಸಿಸುತ್ತಿವೆ. ಸಾರ್ವಜನಿಕರ ಭಾವನೆಗಳನ್ನು ಗೌರವಿಸಿ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದು ಸ್ಥಳೀಯ ನಾಗರಿಕರೊಬ್ಬರು ತಿಳಿಸಿದ್ದಾರೆ. ದೇವಸ್ಥಾನದ ಮೇಲೆ ನಿರ್ಮಿಸಲಾದ ಈ ಅಕ್ರಮ ಕಟ್ಟಡದ ವಿರುದ್ಧ ನಾವು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಪದೇ ಪದೇ ದೂರುಗಳು ಮತ್ತು ಮನವಿಗಳನ್ನು ನೀಡಿದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ.

ಸಂಪಾದಕೀಯ ನಿಲುವು

ಗುಜರಾತ್‌ನಲ್ಲಿ ಹಲವು ವರ್ಷಗಳಿಂದ ಭಾಜಪ ಸರಕಾರವಿದ್ದರೂ, ಆಡಳಿತ ವ್ಯವಸ್ಥೆಯು ಇಂದಿಗೂ ಹಿಂದೂ ವಿರೋಧಿ ಧೋರಣೆಯನ್ನು ಹೇಗೆ ಅನುಸರಿಸುತ್ತಿದೆ? ಇದು ಹಿಂದೂಗಳ ನಿರೀಕ್ಷೆಯಲ್ಲ!