ನಟ ರಣವೀರ್ ಸಿಂಹ ಅವರಿಂದಾದ ‘ಕಾಂತಾರ’ ಚಿತ್ರದ ಶ್ರೀ ಚಾಮುಂಡೇಶ್ವರಿಯ ಅವಹೇಳನೆಯ ಕುರಿತು ನಟ ರಿಷಬ್ ಶೆಟ್ಟಿ ಹೇಳಿಕೆ

ನವದೆಹಲಿ – ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ರಣವೀರ್ ಸಿಂಹ ಅವರು ‘ಕಾಂತಾರ’ ಚಿತ್ರದ ಶ್ರೀ ಚಾಮುಂಡೇಶ್ವರಿಯ ದೃಶ್ಯವನ್ನು ಉಲ್ಲೇಖಿಸಿ ಅವಹೇಳನಕಾರಿ ಮಾತನಾಡಿದ್ದರು. ಅವರು ದೈವವನ್ನು ‘ಭೂತ’ ಎಂದು ಕರೆದಿದ್ದರು. ಈ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಸಿಂಹ ಅವರು ಕ್ಷಮೆಯನ್ನೂ ಕೇಳಿದ್ದರು. ಈ ಕುರಿತು ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರು ಈಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರ ಹೆಸರನ್ನೂ ಎತ್ತದೆ ಅವರು, “ಇಂತಹ ಘಟನೆಗಳು ನನಗೆ ಅಸಮಾಧಾನ ತರುತ್ತವೆ. ಸಿನಿಮಾದ ಬಹುಪಾಲು ಭಾಗ ನಟನೆ ಮತ್ತು ಕಥೆಯ ಮೇಲೆ ಆಧಾರಿತವಾಗಿದ್ದರೂ, ದೈವಿ ಅಂಶವು ಅತ್ಯಂತ ಸೂಕ್ಷ್ಮ ಮತ್ತು ಪವಿತ್ರವಾದುದು. ನಾನು ಹೋದಲ್ಲೆಲ್ಲಾ ಜನರಲ್ಲಿ ವಿನಂತಿಸುವುದೇನೆಂದರೆ, ಇಂತಹ ದೈವಿ ರೂಪಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಡಿ ಅಥವಾ ಅದರ ಬಗ್ಗೆ ಹಾಸ್ಯ ಮಾಡಬೇಡಿ. ಇದು ಭಾವನಾತ್ಮಕವಾಗಿ ನಮ್ಮೊಂದಿಗೆ ಆಳವಾಗಿ ಬೆಸೆದುಕೊಂಡಿದೆ”, ಎಂದು ಹೇಳಿದರು.
ಸಂಪಾದಕೀಯ ನಿಲುವುಸರಕಾರವು ಈ ವಿಷಯದಲ್ಲಿ ಕಠಿಣ ಕಾನೂನನ್ನು ಜಾರಿಗೆ ತರುವುದು ಅತ್ಯಗತ್ಯವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!