ಸಿಡ್ನಿ (ಆಸ್ಟ್ರೇಲಿಯಾ) ಇಲ್ಲಿಯ ಭಯೋತ್ಪಾದಕ ದಾಳಿ ಪ್ರಕರಣ

ಕ್ಯಾನ್ಬೆರಾ (ಆಸ್ಟ್ರೇಲಿಯಾ)– ಸಿಡ್ನಿಯಲ್ಲಿ ನಡೆದ ದಾಳಿಯು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂದ ಪ್ರೇರಿತವಾದಂತೆ ಕಂಡುಬರುತ್ತಿದೆ. ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತವು ಸುಮಾರು ಒಂದು ದಶಕದ ಹಿಂದೆ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಡೀ ಜಗತ್ತು ಈ ದ್ವೇಷಪೂರಿತ ಮತ್ತು ಕಟ್ಟರವಾದಿ ಸಿದ್ಧಾಂತವನ್ನು ಎದುರಿಸುತ್ತಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರತಿಕ್ರಿಯಿಸಿದ್ದಾರೆ.
ಅವರು ಮಾತು ಮುಂದುವರೆಸುತ್ತಾ, “ದಾಳಿ ಮಾಡಿದವರಲ್ಲಿ ಒಬ್ಬನನ್ನು 2019 ರಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು; ಆದರೆ ಆ ಸಮಯದಲ್ಲಿ ಅವನನ್ನು ‘ಅಪಾಯಕಾರಿ’ ಎಂದು ವರ್ಗೀಕರಿಸಿರಲಿಲ್ಲ ಮತ್ತು ಅವನ ಮೇಲೆ ನಿರಂತರ ನಿಗಾ ಇಟ್ಟಿರಲಿಲ್ಲ. ಅದರ ನಂತರ ಅವನು ಹೆಚ್ಚು ಕಟ್ಟರ ಆಗಿದ್ದನೇ? ಎಂಬ ಬಗ್ಗೆ ಈಗ ತನಿಖೆ ನಡೆಸುವ ಅಗತ್ಯವಿದೆ. ನಾವು ಯಹುದಿ ವಿರೋಧಿ ದ್ವೇಷದ ನಿರ್ಮೂಲನೆಗಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇದು ಬಹಳ ಹಳೆಯ ಸಮಸ್ಯೆಯಾಗಿದೆ,” ಎಂದು ಹೇಳಿದರು.
ಪಾಕಿಸ್ತಾನ ಶೇ. 100 ರಷ್ಟು ಭಯೋತ್ಪಾದಕ ದೇಶ! – ಗೀರ್ಟ್ ವಿಲ್ಡರ್ಸ್

ಆಸ್ಟ್ರೇಲಿಯಾದಲ್ಲಿ ನಡೆದ ಭಯೋತ್ಪಾದಕ ಘಟನೆಯ ಬಗ್ಗೆ ಜಗತ್ತಿನಾದ್ಯಂತ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನೆದರ್ಲ್ಯಾಂಡ್ಸ್‌ನ ‘ಪಾರ್ಟಿ ಫಾರ್ ಫ್ರೀಡಂ’ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗೀರ್ಟ್ ವಿಲ್ಡರ್ಸ್ ಅವರು, “ಪಾಕಿಸ್ತಾನವು ಶರಿಯತ್ ಕಾನೂನಿನಂತೆ ನಡೆಯುವ ಅತ್ಯಂತ ಅಪಾಯಕಾರಿ ಮತ್ತು ಹಿಂದುಳಿದ ದೇಶವಾಗಿದೆ. ಈ ದಾಳಿಯ ಮೂಲಕ ಅದು ಮತ್ತೊಮ್ಮೆ ಜಗತ್ತಿಗೆ ಇದನ್ನು ನೆನಪಿಸಿಕೊಟ್ಟಿದೆ. ಕುಖ್ಯಾತ ಅಲ್ ಖೈದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲೇ ಅವಿತಿದ್ದನು. ಪಾಕಿಸ್ತಾನವು 100 ಕ್ಕೆ ನೂರರಷ್ಟು ಭಯೋತ್ಪಾದಕ ದೇಶವಾಗಿದೆ. ಇದು ಖಂಡಿತವಾಗಿಯೂ ಒಂದು ನೀಚ ದೇಶವಾಗಿದೆ. ನನಗೆ ಪಾಕಿಸ್ತಾನಿ ಮೌಲ್ವಿಗಳಿಂದ (ಇಸ್ಲಾಮಿಕ್ ಧಾರ್ಮಿಕ ಮುಖಂಡರಿಂದ) ಹಲವು ಬಾರಿ ಬೆದರಿಕೆಗಳು ಬಂದಿವೆ,” ಎಂದು ಹೇಳಿದ್ದಾರೆ.
Pakistan is 100% terror state.
A dangerous sharia shithole.
Osama Bin Laden lived there for many years.
The #bondibeach terrorists are from Pakistan.
I got many fatwas to kill me from Pakistani mullahs.
We all should boycott and isolate #Pakistan! https://t.co/omhpOYj3fU
— Geert Wilders (@geertwilderspvv) December 15, 2025
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!