‘ಸನಾತನ ರಾಷ್ಟ್ರ ನೇಪಾಳ’ ಸಂವಾದದಲ್ಲಿ ಹಿಂದುತ್ವವಾದಿಗಳ ಘರ್ಜನೆ

ನವದೆಹಲಿ, ೧೪ ಡಿಸೆಂಬರ್ (ವಾರ್ತೆ) – ಹಿಂದೂ ರಾಷ್ಟ್ರವಾಗಿದ್ದ ನೇಪಾಳ ಜಾತ್ಯಾತೀತ ವಾಗಿದ್ದರೂ ಸಹ ಅಲ್ಲಿನ ಜನರು ನಿರ್ಧರಿಸಿದರೆ, ನೇಪಾಳದ ಜೊತೆಗೆ ಭಾರತವೂ ಕೂಡ ಹಿಂದೂ ರಾಷ್ಟ್ರವಾಗುತ್ತದೆ ಎಂದು ‘ಸನಾತನ ರಾಷ್ಟ್ರ ನೇಪಾಳ’ ಸಂವಾದದಲ್ಲಿ ಸಹಭಾಗಿಯಾದ ನೇಪಾಳದ ಹಿಂದುತ್ವವಾದಿಗಳು ವಿಶ್ವಾಸ ವ್ಯಕ್ತಪಡಿಸಿದರು. ‘ಸನಾತನ ರಾಷ್ಟ್ರ ನೇಪಾಳ’ ಎಂಬ ಚರ್ಚಾ ಗೋಷ್ಠಿಯ ಸೂತ್ರ ಸಂಚಾಲನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಅವರು ಮಾಡಿದರು. ಈ ಚರ್ಚಾ ಗೋಷ್ಠಿಯಲ್ಲಿ ನೇಪಾಳದ ಹಿರಿಯ ಹಿಂದುತ್ವವಾದಿ ನಾಯಕ ಶ್ರೀ. ಶಂಕರ ಖರಾಲ, ನೇಪಾಳದ ‘ಟುಡೇಸ್ ಯೂತ್ ಏಷ್ಯಾ’ದ ಶ್ರೀ. ಸಂತೋಷ ಶಹಾ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ಭಾಗವಹಿಸಿದ್ದರು.
ನೇಪಾಳದ ಆತ್ಮ ಹಿಂದೂ ಆಗಿರುವುದರಿಂದ ಅದು ಹಿಂದೂ ರಾಷ್ಟ್ರವೇ ಆಗಿದೆ! – ಶಂಕರ ಖರಾಲ, ಹಿರಿಯ ಹಿಂದುತ್ವವಾದಿ
ನೇಪಾಳ ಈಗಲೂ ಹಿಂದೂ ರಾಷ್ಟ್ರವೇ ಆಗಿದೆ. ನೇಪಾಳದ ಆತ್ಮ ಹಿಂದೂ ಆಗಿದೆ. ನೇಪಾಳದಲ್ಲಿ ಇಂದಿಗೂ ಹಿಂದೂ ರಾಜಪ್ರಭುತ್ವವಿದೆ. ನೇಪಾಳ ಹಿಂದೂ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನ ನಡೆಸುತ್ತಿದೆ. ಅಲ್ಲಿನ ಪರ್ವತ ಪ್ರದೇಶಗಳಲ್ಲಿ ಮತಾಂತರ ನಡೆಯುತ್ತಿದೆ. ಹಿಂದೂ ರಾಷ್ಟ್ರವಾಗುವವರೆಗೆ ನೇಪಾಳದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ‘ಝೇನ್ ಝೀ’ ಆಂದೋಲನವಾಯಿತು; ಆದರೆ ಅದರ ನಂತರ ವ್ಯವಸ್ಥೆಯಲ್ಲಿ ನಿರೀಕ್ಷಿತ ಬದಲಾವಣೆಯಾಗಿಲ್ಲ.
ನೇಪಾಳದಲ್ಲಿ ಹಿಂದೂಗಳ ಮತಾಂತರಕ್ಕಾಗಿ ಕೋಟ್ಯಂತರ ರೂಪಾಯಿ ನಿಧಿ ಸಿಗುತ್ತದೆ ! – ಸಂತೋಷ ಶಹಾ
ನಮ್ಮಲ್ಲಿ ‘ಜಾತ್ಯಾತೀತ ಎಂಬ ಸಂಜ್ಞೆ ಇಲ್ಲ. ಯಾವುದೇ ಧರ್ಮವು ಜಾತ್ಯಾತೀತವಲ್ಲ. ಭಾರತಕ್ಕೆ ಹೋಲಿಸಿದರೆ ನೇಪಾಳದಲ್ಲಿ ಜನಸಂಖ್ಯೆ, ಗಾತ್ರ ತುಂಬ ಅಲ್ಪವಾಗಿದ್ದರೂ, ಅಲ್ಲಿ ಮತಾಂತರಕ್ಕಾಗಿ 200 ಕೋಟಿ ಡಾಲರ್ ಹಣ ಬರುತ್ತದೆ. ಇದರಿಂದ ಎಷ್ಟು ದೊಡ್ಡ ಷಡ್ಯಂತ್ರ ರಚಿಸಲಾಗುತ್ತಿದೆ ಎಂಬುದು ತಿಳಿದುಬರುತ್ತದೆ. ಪಶುಪತಿನಾಥರ ಕೃಪೆಯಿಂದ, ಸೀತಾ ಮಾತೆಯ ಭೂಮಿಯಾಗಿರುವುದರಿಂದ ಪರ್ವತೀಯ ಪ್ರದೇಶ ಹೊರತುಪಡಿಸಿ, ಇತರ ಕಡೆಗಳಲ್ಲಿ ಹೆಚ್ಚಿನ ಮತಾಂತರವಾಗಿಲ್ಲ.
ನೇಪಾಳದಲ್ಲಿ ಸನಾತನ ಪರಂಪರೆಯ ಉಚ್ಚ ಅಭಿವ್ಯಕ್ತಿ! – ಸದ್ಗುರು ಡಾ. ಚಾರುದತ್ತ ಪಿಂಗಳೆ
ನೇಪಾಳದಲ್ಲಿ ಸನಾತನ ಪರಂಪರೆಯ ಉಚ್ಚ ಅಭಿವ್ಯಕ್ತಿ ಇದೆ. ಅವರು ಈಗಲೂ ಹಿಂದೂ ಕಾಲಗಣನೆಗೆ ಬದ್ಧರಾಗಿದ್ದಾರೆ. ಇಂಗ್ಲಿಷ್ ದಿನದರ್ಶಿಕೆಯ ವಿಚಾರ ಮಾಡುವುದಿಲ್ಲ. ಭಾರತದ ಸ್ಥಿತಿಯ ವಿಚಾರ ಮಾಡುವಾಗ ಮಹಾಭಾರತದ ಕಾಲಕ್ಕೆ ಹೋಗಿ ಅರ್ಜುನನ ಸ್ಥಿತಿಯ ವಿಚಾರ ಮಾಡಬೇಕಾಗುತ್ತದೆ. ಅರ್ಜುನನು ಯುದ್ಧದಲ್ಲಿ ತನ್ನ ಎಲ್ಲ ಸಂಬಂಧಿಕರನ್ನು ನೋಡಿ ಭ್ರಮಿತನಾದ. ಅವರು ತನ್ನವರೇ ಎಂದು ಅವನಿಗೆ ಅನಿಸುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅಂತಹುದೇ ಸ್ಥಿತಿ ಆಯಿತು. ೧೯೪೬ ರಲ್ಲಿ ನಮ್ಮವರೇ ಅಧಿಕಾರಕ್ಕೆ ಬಂದರು ಎಂದು ಭಾರತೀಯರು ಭ್ರಮಿತಗೊಂಡರು ಆದರೆ ಅವರಿಗಾಗಬಹುದಾದ ಅಪಾಯದ ಅರಿವಾಗಲಿಲ್ಲ. ಭಾರತ ಮತ್ತು ನೇಪಾಳ ಜಾಗರೂಕರಾಗಿದ್ದರೆ ಮತ್ತೆ ಎರಡೂ ಕಡೆಗಳಲ್ಲಿ ಹಿಂದೂ ಧ್ವಜ ಹಾರುತ್ತದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”