ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳ ಬಳಿ ಮತ್ತೆ ಮೊಬೈಲ್ ಫೋನ್‌ಗಳು ಪತ್ತೆ – Parappana Agrahara Jail

ಬೆಂಗಳೂರು – ರಾಜ್ಯದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳ ಬಳಿ ಮತ್ತೆ ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳು ಸಿಕ್ಕಿವೆ. ಡಿಸೆಂಬರ್ ೮ ರ ರಾತ್ರಿ ೮ ರಿಂದ ೮.೪೫ ರ ಸಮಯದಲ್ಲಿ ಕಾರಾಗೃಹದ ಕೆಲವು ಕೈದಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ೧೪ ಮೊಬೈಲ್, ೯ ಸಿಮ್ ಕಾರ್ಡ್‌ಗಳು, ೫ ಚಾರ್ಜರ್‌ಗಳು, ೨ ಇಯರ್‌ಫೋನ್‌ಗಳು ಮತ್ತು ೧೦ ಚೂಪಾದ ವಸ್ತುಗಳು ಸಿಕ್ಕಿವೆ. ಈ ಸಂಬಂಧ ಸಂಬಂಧಿಸಿದ ಕೈದಿಗಳು ಮತ್ತು ಅವರಿಗೆ ಸಹಕರಿಸಿದ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇಲ್ಲಿಯವರೆಗೆ ನಡೆದ ತಪಾಸಣೆಯಲ್ಲಿ ೬೭ ಮೊಬೈಲ್ ಫೋನ್‌ಗಳು, ೪೮ ಸಿಮ್ ಕಾರ್ಡ್‌ಗಳು, ೧೦ ಇಯರ್‌ಫೋನ್‌ಗಳು, ೧೪ ಚಾರ್ಜರ್‌ಗಳು, ೬೪ ಸಾವಿರ ೮೮೦ ರೂಪಾಯಿ ನಗದು ಹಣ ಮತ್ತು ೧೩ ಚೂಪಾದ ವಸ್ತುಗಳು ಸಿಕ್ಕಿವೆ. ಈ ಸಂಬಂಧ ೬ ಪ್ರಕರಣಗಳು ದಾಖಲಾಗಿವೆ ಎಂದು ಕಾರಾಗೃಹ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಪಾದಕೀಯ ನಿಲುವು

ಮೊದಲನೇ ಬಾರಿಗೆ ಮೊಬೈಲ್ ಫೋನ್ ಸಿಕ್ಕಾಗ ಕಟ್ಟುನಿಟ್ಟಿನ ವಿಚಾರಣೆ ನಡೆಸಿ ಎಲ್ಲ ಹೊಣೆಗಾರರಿಗೆ ಕಠಿಣ ಶಿಕ್ಷೆ ನೀಡಿದ್ದರೆ, ಈ ಘಟನೆ ಮತ್ತೆ ನಡೆಯುತ್ತಿರಲಿಲ್ಲ ! ಈಗಲೂ ಕಠಿಣ ಕ್ರಮ ಕೈಗೊಳ್ಳಲಾಗುವುದೇ ? ಇದೇ ಪ್ರಶ್ನೆ !