‘ನಮ್ಮನ್ನು ಗುಲಾಮರನ್ನಾಗಿ ಮಾಡಿ ಬ್ರಾಹ್ಮಣರು ಹಿಂದೂ ಧರ್ಮವನ್ನು ನಿರ್ಮಿಸಿದರು!’ Anti Hindu Justice B.G. Kolse-Patil

ಸೂಫಿ ಸಮಾವೇಶದಲ್ಲಿ ನಿವೃತ್ತ ನ್ಯಾಯಾಧೀಶ ಬಿ.ಜಿ. ಕೋಳಸೆ-ಪಾಟೀಲರಿಂದ ಬ್ರಾಹ್ಮಣ-ದ್ವೇಷ!

ಬೆಂಗಳೂರು (ಕರ್ನಾಟಕ) – ಹಿಂದೂ ಎಂಬುದು ಬ್ರಾಹ್ಮಣರ ಧರ್ಮ. ಹೊರಗಿನವರು ನೀಡಿದ ಬೈಗುಳವೆ ಹಿಂದೂ. ಈ ಶಬ್ದದ ಅರ್ಥವನ್ನು ಯಾರೂ ಹೇಳುತ್ತಿಲ್ಲ. ಬ್ರಾಹ್ಮಣರು ತಮ್ಮ ಬುದ್ಧಿಯ ಬಲದಿಂದ ನಮ್ಮೆಲ್ಲರನ್ನು ಗುಲಾಮರನ್ನಾಗಿ ಮಾಡಿದರು. ಎಲ್ಲ ಸಂತರು ಮತ್ತು ಮೌಲ್ವಿಗಳು ಇದನ್ನೇ ಹೇಳುವ ಕೆಲಸ ಮಾಡಬೇಕು. ಹಿಂದೂವಿನ ಅರ್ಥವನ್ನು ವಿವರಿಸಲು ಇನ್ನೂ ಸಮಯವಿದೆ ಎಂದು ನಿವೃತ್ತ ನ್ಯಾಯಾಧೀಶ ಬಿ.ಜಿ. ಕೋಳಸೆ ಪಾಟೀಲರು ಹೇಳಿಕೆ ನೀಡಿದರು. ಅವರು ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದ ಸೂಫಿ ಸಂತ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

‘ಸರ್ವಜ್ಞಾನಿ’ ಕೋಳಸೆ-ಪಾಟೀಲರ ಸಂಘ ಮತ್ತು ಬ್ರಾಹ್ಮಣ ದ್ವೇಷದ ಹೇಳಿಕೆಗಳು!

‘ಎಲ್ಲಾ ಗಲಭೆಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಹೊಣೆ!’

೧. ಸಿಖ್ಖರು ಸೇರಿದಂತೆ ಎಲ್ಲಾ ಗಲಭೆಗಳ ಮೂಲ ಕಾರಣ ಆರ್‌ಎಸ್‌ಎಸ್ ಆಗಿದೆ. ಅವರ ಒಬ್ಬ ನಾಯಕ ಇಂದಿರಾ ಗಾಂಧಿಯವರನ್ನು ‘ದುರ್ಗಾ’ ಎಂದು ಸಂಬೋಧಿಸುತ್ತಿದ್ದನು. (ಇದು ವದಂತಿ ಎಂದು ಅದೇ ನಾಯಕರು ಸ್ಪಷ್ಟೀಕರಣ ನೀಡಿದ್ದಾರೆ, ಆದರೆ ಕೋಳಸೆ ಪಾಟೀಲರು ಇದನ್ನು ಯಾಕೆ ಮರೆಮಾಚುತ್ತಿದ್ದಾರೆ? ಇದರಿಂದ ಅವರ ಸುಳ್ಳು ಮನಸ್ಥಿತಿ ಸ್ಪಷ್ಟವಾಗುತ್ತದೆ! – ಸಂಪಾದಕರು) ಸಂಘವೇ ಈ ಗಲಭೆಗಳನ್ನು ಪ್ರಾರಂಭಿಸಿತು; ಆದರೆ ಈ ಎಲ್ಲದರ ಆರೋಪ ಕಾಂಗ್ರೆಸ್ ಮೇಲೆ ಬರುವುದು ಸಂಪೂರ್ಣ ತಪ್ಪು. (೧೯೮೪ ರ ದೆಹಲಿಯಲ್ಲಿನ ಸಿಖ್-ವಿರೋಧಿ ಗಲಭೆಯನ್ನು ಯಾರು ಮಾಡಿದರು ಎಂಬುದು ಜಗತ್ತಿಗೆ ತಿಳಿದಿರುವಾಗ, ಕೋಳಸೆ-ಪಾಟೀಲರು ಬಹಿರಂಗವಾಗಿ ಸುಳ್ಳು ಹೇಳುತ್ತಿದ್ದಾರೆ! – ಸಂಪಾದಕರು) ಆದ್ದರಿಂದ ಎಲ್ಲರೂ ಇತಿಹಾಸವನ್ನು ಓದಬೇಕು.

೨. ‘ನಮಗೆಲ್ಲರಿಗೂ ಆಗುತ್ತಿರುವ ದುಃಖ ಮತ್ತು ವೇದನೆಗಳಿಗೆ ಸಂಘವೇ ಹೊಣೆ’ ಎಂದು ನಾನು ೧೯೭೬ ರಿಂದಲೇ ಹೇಳುತ್ತಾ ಬಂದಿದ್ದೇನೆ; ಆದರೆ ಯಾರಿಗೂ ಸಂಘದ ವಿರುದ್ಧ ಮಾತನಾಡಲು ಧೈರ್ಯವಿಲ್ಲ. ಕಳೆದ ೧೦ ರಿಂದ ೧೨ ವರ್ಷಗಳಿಂದ ಅವರು ಅಧಿಕಾರ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಕೂಡ ಅವರು ಅಧಿಕಾರ ನಡೆಸಿದ್ದಾರೆ. ಸಂವಿಧಾನದ ಬಲದಿಂದ ಅಧಿಕಾರಕ್ಕೆ ಬಂದಿರುವ ಜನರು ಇಂದು ಅದೇ ಸಂವಿಧಾನವನ್ನು ತುಳಿದು ಹಾಕುವ ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಈ ಜನರು ದೇಶಕ್ಕಾಗಿ ಯಾವುದೇ ಉತ್ತಮ ಕೆಲಸ ಮಾಡಿಲ್ಲ. (ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ನವರೇ ದೇಶವನ್ನು ವಿಭಜಿಸಿದರು ಎಂಬುದನ್ನು ಹೇಗೆ ಮರೆಯಲು ಸಾಧ್ಯ? – ಸಂಪಾದಕರು)

‘ಸಂಘ ಮತ್ತು ಬ್ರಾಹ್ಮಣರ ವಿರುದ್ಧ ಧೈರ್ಯದಿಂದ ಮಾತನಾಡಿ!’ – ಮುಸಲ್ಮಾನರಿಗೆ ಕರೆ

ನಿಮಗೆ ಬೇಕಿದ್ದರೆ ಬ್ರಾಹ್ಮಣವಾದದ ಇತಿಹಾಸವನ್ನು ನೋಡಿ ತಿಳಿದುಕೊಳ್ಳಿ. ಸಂತರು ಮತ್ತು ಸೂಫಿಗಳು ಇದರ ಬಗ್ಗೆ ತಿಳಿದು ಮಾತನಾಡಬೇಕು. ನೀವು ಧೈರ್ಯದಿಂದ ಮಾತನಾಡದಿದ್ದರೆ, ಅವರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಅವರು ದೇಶದಲ್ಲಿ ಕೇವಲ ೧% ಇದ್ದಾರೆ. ನೀವು (ಮುಸಲ್ಮಾನರು) ಸಂಘ ಮತ್ತು ಬ್ರಾಹ್ಮಣರ ವಿರುದ್ಧ ಮಾತನಾಡಲು ಹೆದರಬೇಡಿ. ಇಂದು ನಾವೆಲ್ಲರೂ ಒಗ್ಗಟ್ಟಾಗಿ ಎಲ್ಲರೊಂದಿಗೆ ಬೆರೆಯಬೇಕು. ಈ ಹಿಂದೆ ಮುಸಲ್ಮಾನರು ದೇಶದ ಮೇಲೆ ಆಡಳಿತ ನಡೆಸಿದ್ದರು. ಆದ್ದರಿಂದ ಮುಸಲ್ಮಾನರು ಎಲ್ಲರೊಂದಿಗೆ ಸಮನ್ವಯ ಸಾಧಿಸಬೇಕು. ಎಲ್ಲರನ್ನು ಜೊತೆಗೆ ತೆಗೆದುಕೊಂಡು ರಾಜಕಾರಣ ಮಾಡಬೇಕು. ಈ ರಾಜಕಾರಣ ಹಿಂದೂಗಳ ವಿರುದ್ಧ ಅಲ್ಲ, ಕೇವಲ ಸಂಘ ಮತ್ತು ಬ್ರಾಹ್ಮಣರ ವಿರುದ್ಧ ಮಾಡಬೇಕು. (ಗಲಭೆಗಳ ಸಮಯದಲ್ಲಿ ಮತಾಂಧ ಮುಸಲ್ಮಾನರು ಸಂಘ ಮತ್ತು ಬ್ರಾಹ್ಮಣರ ಮೇಲಲ್ಲ, ಪ್ರತಿಯೊಬ್ಬ ಹಿಂದೂ ಮೇಲೂ ಆಕ್ರಮಣ ಮಾಡುತ್ತಾರೆ ಎಂಬುದನ್ನು ಕೋಳಸೆ-ಪಾಟೀಲರು ಹೇಳುತ್ತಿಲ್ಲ ಯಾಕೆ? – ಸಂಪಾದಕರು).

ಸಂಪಾದಕೀಯ ನಿಲುವು

  • ಕಾಮಾಲೆ ಬಂದವರಿಗೆ ಎಲ್ಲವೂ ಹಳದಿಯಾಗಿ ಕಾಣುವಂತೆ, ಪ್ರಗತಿಪರರಿಗೆ (ಅಧೋಗಾಮಿ) ಬ್ರಾಹ್ಮಣ-ದ್ವೇಷದ ಕಾಮಾಲೆ ಬಂದಿರುವುದರಿಂದ, ಅವರು ಈ ರೀತಿ ವಿಷ ಕಾರುತ್ತಿದ್ದಾರೆ. ನಿವೃತ್ತ ನ್ಯಾಯಾಧೀಶ ಕೋಳಸೆ-ಪಾಟೀಲರು ಇಂತವರಲ್ಲೊಬ್ಬರು! ಸಮಾಜದಲ್ಲಿ ವಿಷ ಕಾರುವುದೇ ಇಂತಹವರ ಜೀವನವಾಗಿದೆ. ಇಂತಹ ಕಲುಷಿತ ವಿಚಾರದ ಆಧಾರದ ಮೇಲೆಯೇ ಅವರು ವೈಚಾರಿಕ ಮಾಲಿನ್ಯ ಹರಡುತ್ತಿದ್ದಾರೆ!
  • ಸೂಫಿ ಸಮಾವೇಶದಲ್ಲಿ ಇಸ್ಲಾಂನ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡಲು ಕೋಳಸೆ-ಪಾಟೀಲರಿಗೆ ಧೈರ್ಯ ಏಕೆ ಸಾಲುತ್ತಿಲ್ಲ? ಹಾಗೆ ಮಾಡಿದರೆ ಸ್ಥಳದಲ್ಲೇ ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ಆಗಬಹುದೆಂಬ ಭಯ ಅವರಿಗಿದೆಯೇ?