ಹೈದರಾಬಾದ್ ಇನಾಮೆ ಮತ್ತು ನಗದು ಅನುದಾನಗಳ ಸುಧಾರಣಾ ಮಸೂದೆ ಅಂಗೀಕಾರ!

ನಾಗಪೂರ, ಡಿಸೆಂಬರ್ ೧೧ (ಸುದ್ದಿ) – ಮರಾಠವಾಡದ ೭೬ ತಾಲ್ಲೂಕುಗಳಲ್ಲಿನ ೭೦,೦೦೦ ಮನೆಗಳಿಗೆ ಮಾಲೀಕತ್ವದ ಹಕ್ಕನ್ನು ನೀಡುವ ಬಗ್ಗೆ ಮಹತ್ವದ್ದೆಂದು ಪರಿಗಣಿಸಲಾದ ‘ಹೈದರಾಬಾದ್ ಇನಾಮೆ ಮತ್ತು ನಗದು ಅನುದಾನಗಳ ರದ್ದುಪಡಿಸುವಿಕೆ (ಸುಧಾರಣಾ) ಮಸೂದೆ ೨೦೨೫’ ಡಿಸೆಂಬರ್ ೧೧ ರಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಕಂದಾಯ ಸಚಿವರಾದ ಚಂದ್ರಶೇಖರ ಬಾವನಕುಳೆ ಅವರು ಈ ಮಸೂದೆಯನ್ನು ಮಂಡಿಸಿದ್ದರು.
೭ ಲಕ್ಷ ೪೩ ಸಾವಿರ ಹೆಕ್ಟೇರ್ ಭೂಮಿಯ ಮೇಲೆ ನೆಲೆಸಿದ್ದ ನಿಜಾಮಶಾಹಿ ಕಾಲದ ಮನೆಗಳನ್ನು ‘ಮದತಮಾಸ ಭೂಮಿ’ ಎಂದು ಕರೆಯಲಾಗುತ್ತಿತ್ತು. ಇಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ತಮ್ಮ ಮನೆಗಳನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಅಡೆ-ತಡೆಗಳು ಎದುರಾಗುತ್ತಿದ್ದವು. ೪೦೦ ವರ್ಷಗಳಷ್ಟು ಹಳೆಯ ಕಾಗದಪತ್ರಗಳು, ಪುರಾವೆಗಳನ್ನು ಒದಗಿಸುವುದು ಇಲ್ಲಿನ ನಿವಾಸಿಗಳಿಗೆ ಕಷ್ಟವಾಗಿತ್ತು. ಸದನವು ಈ ಮಸೂದೆಗೆ ಅನುಮೋದನೆ ನೀಡಿದ್ದರಿಂದ ಜನರಿಗೀಗ ಮನೆಯ ಮಾಲೀಕತ್ವ ಸಿಗುವ ದಾರಿ ಸುಗಮವಾಗಿದೆ ಎಂದು ಕಂದಾಯ ಸಚಿವ ಬಾವನಕುಳೆ ಹೇಳಿದರು. ರಾಜ್ಯದ ವಿವಿಧ ವಿಭಾಗಗಳಲ್ಲಿ ಭೂಮಿಗೆ ಸಂಬಂಧಿಸಿ ಇಂತಹದ್ದೇ ವಿವಿಧ ಸಮಸ್ಯೆಗಳಿವೆ. ಆ ಕುರಿತು ಕಾನೂನಿನಲ್ಲಿ ಸೂಕ್ತ ಸುಧಾರಣೆಗಳನ್ನು ಮಾಡಿ ಜನರಿಗೆ ಪರಿಹಾರ ನೀಡುತ್ತೇವೆ ಎಂದು ಬಾವನಕುಳೆ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!