ಇಂಡಿಗೋ ಪ್ರಕರಣ; ದೆಹಲಿ ಉಚ್ಛ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಛೀಮಾರಿ

ನವ ದೆಹಲಿ – ಇಂಡಿಗೋ ಏರ್‌ಲೈನ್ಸ್ ನ ವಿಮಾನಗಳು ರದ್ದಾದಾಗ ಸರಕಾರವು ಏನು ಮಾಡಿತು? ವಿಮಾನಗಳ ಟಿಕೆಟ್‌ಗಳ ಬೆಲೆಗಳು ೪-೫ ಸಾವಿರ ರೂಪಾಯಿಯಿಂದ ೩೦,೦೦೦ ರೂಪಾಯಿಗಳವರೆಗೆ ಹೇಗೆ ಏರಿದವು? ಇತರ ಏರ್‌ಲೈನ್ಸ್‌ಗಳು ಇದರ ಲಾಭವನ್ನು ಹೇಗೆ ಪಡೆದುಕೊಂಡವು? ನೀವು ಏನು ಕ್ರಮ ಕೈಗೊಂಡಿದ್ದೀರಿ? ನಿಮ್ಮಿಂದಲೇ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ, ಎಂದು ದೆಹಲಿ ಉಚ್ಛ ನ್ಯಾಯಾಲಯವು ಇಂಡಿಗೋ ಪ್ರಕರಣದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಇಂಡಿಗೋ ಬಿಕ್ಕಟ್ಟಿನ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ವಿಮಾನ ರದ್ದಾದ ಅಥವಾ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಜನರಿಗೆ ಪರಿಹಾರ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಇದರ ವಿಚಾರಣೆ ಮಾಡುವಾಗ ನ್ಯಾಯಾಲಯ ಈ ಟೀಕೆಗಳನ್ನು ಮಾಡಿತು.
ಇಂತಹ ಘಟನೆಗಳು ಮತ್ತೆ ಆಗದಂತೆ ಸರಕಾರ ಖಚಿತಪಡಿಸಿಕೊಳ್ಳಬೇಕು!
ಇದು ಕೇವಲ ವೈಯಕ್ತಿಕ ಪ್ರಯಾಣಿಕರ ಸಮಸ್ಯೆಯಲ್ಲ, ಬದಲಿಗೆ ಇದರಿಂದ ಆರ್ಥಿಕ ನಷ್ಟವೂ ಆಗಿದೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಮತ್ತೆ ಸೃಷ್ಟಿಯಾಗದಂತೆ ಸರಕಾರವು ಖಚಿತಪಡಿಸಿಕೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿದೆ.
ಸಂಪಾದಕೀಯ ನಿಲುವುಈ ಪ್ರಕರಣದಲ್ಲಿ ವಿಮಾನಯಾನ ಸಂಸ್ಥೆಗಳ ಟಿಕೆಟ್ ದರಗಳಿಗಾಗಿ ನಿಯಮಾವಳಿಗಳನ್ನು ಜಾರಿಗೊಳಿಸುವಂತೆ ನ್ಯಾಯಾಲಯವು ಆದೇಶ ನೀಡಬೇಕೆಂದು ಜನಸಾಮಾನ್ಯರಿಗೆ ಅನ್ನಿಸುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!