ಶಾಲೆಗಳಲ್ಲಿ ಶ್ರೀಮದ್ಭಗವದ್ಗೀತೆಯನ್ನು ಸೇರಿಸಿ! – HD Kumaraswamy Bhagavad Gita

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ಬೇಡಿಕೆ !

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು – ಕೇಂದ್ರ ಲೋಹ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು, ಶಾಲಾ ಪಠ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯನ್ನು ಸೇರಿಸುವಂತೆ ವಿನಂತಿಸಿದ್ದಾರೆ. ‘ಗೀತೆಯ ಆಯ್ದ ಶ್ಲೋಕಗಳನ್ನು ಸೇರಿಸುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕತೆ, ವೈಚಾರಿಕ ಸ್ಪಷ್ಟತೆ ಮತ್ತು ಉತ್ತಮ ಚಾರಿತ್ರ್ಯ ನಿರ್ಮಾಣವಾಗಲಿದೆ’ ಎಂದು ಕುಮಾರಸ್ವಾಮಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರು ಮಾತು ಮುಂದುವರೆಸಿ, ‘ಭಾರತವು ಪ್ರಾಚೀನ ಕಾಲದಿಂದಲೂ ಸಂತರು, ಜ್ಞಾನ ಮತ್ತು ಉಳಿದುಕೊಂಡು ಬಂದಿರುವ ಸಂಸ್ಕೃತಿ ಮೌಲ್ಯಗಳ ನಾಡಾಗಿದೆ. ಸನಾತನ ಧರ್ಮವು ‘ವಸುಧೈವ ಕುಟುಂಬಕಂ’ ಎಂಬ ಸಾರ್ವತ್ರಿಕ ಆದರ್ಶದ ಪ್ರಕಾರ ನಡೆಯುತ್ತದೆ. ಭಗವಾನ್ ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆಯ ಶಾಶ್ವತ ಜ್ಞಾನವನ್ನು ಜಗತ್ತಿಗೆ ನೀಡಿದ್ದಾನೆ, ಇದರಲ್ಲಿ ನಿಷ್ಕಾಮ ಕರ್ಮ ಮತ್ತು ಕರ್ತವ್ಯವನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾ ಮನೋಭಾವದಿಂದ ಪಾಲಿಸುವುದು ಎಷ್ಟು ಮುಖ್ಯ ಎಂದು ತಿಳಿಸಲಾಗಿದೆ. ಈ ಮೌಲ್ಯಗಳು ಇಂದಿನ ಜಾಗತಿಕ ಪರಿಸರದಲ್ಲಿ ಮಹತ್ವದ ಅರ್ಥವನ್ನು ಹೊಂದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಶ್ರೀಕೃಷ್ಣ ಮಠದಲ್ಲಿ ಶ್ರೀಮದ್ಭಗವದ್ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಇದರಿಂದ ಸನಾತನ ಧರ್ಮದ ಮೂಲಭೂತ ತತ್ವಗಳ ಪ್ರಸಾರವಾಯಿತು. ಈ ಕಾರ್ಯಕ್ರಮದಿಂದ ಗೀತೆಯ ಪಠಣ ಮತ್ತು ಅದರಿಂದ ಸ್ಫೂರ್ತಿ ಪಡೆಯುವ ಅವಕಾಶ ಸಿಕ್ಕಿತು. ಸ್ಥಳೀಯ ನಾಯಕರು ಮತ್ತು ಪೋಷಕರು ಸಹ ಶಾಲೆಗಳಲ್ಲಿ ಗೀತೆಯ ಬೋಧನೆಗಳನ್ನು ಸೇರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮಕ್ಕಳಿಗೆ ಕೇವಲ ಹಾಡುಗಳ ಪರಿಚಯ ಮಾತ್ರವಲ್ಲದೆ, ರಾಮಾಯಣ ಮತ್ತು ಮಹಾಭಾರತಗಳ ಪರಿಚಯವೂ ಆಗುವುದು ಅಷ್ಟೇ ಮುಖ್ಯ’ ಎಂದು ಕುಮಾರಸ್ವಾಮಿ ಅವರು ಕೊನೆಯಲ್ಲಿ ಹೇಳಿದ್ದಾರೆ.