ಗುಜರಾತ: ೧೭ ಲಕ್ಷಕ್ಕೂ ಹೆಚ್ಚು ಮತದಾರರು ಮೃತಪಟ್ಟಿರುವುದು ಪತ್ತೆ!

ಮತದಾರರ ಪಟ್ಟಿಯ ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆಯಿಂದ ಬಹಿರಂಗ

ಕರ್ಣಾವತಿ (ಗುಜರಾತ್) – ಗುಜರಾತ್ ರಾಜ್ಯದ ಮತದಾರರ ಪಟ್ಟಿಯಲ್ಲಿ ೧೭ ಲಕ್ಷಕ್ಕೂ ಹೆಚ್ಚು ಮೃತ ಮತದಾರರು ಸೇರಿದ್ದಾರೆ ಎಂದು ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆಯ ಮೂಲಕ ತಿಳಿದು ಬಂದಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದರು.

೧. ಪತ್ರಿಕಾ ಪ್ರಕಟಣೆಯ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ನೋಂದಾಯಿತ ೫ ಕೋಟಿಗೂ ಹೆಚ್ಚು ಮತದಾರರಿಗೆ ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆಯ ಅಡಿಯಲ್ಲಿ ಅರ್ಜಿಗಳನ್ನು ವಿತರಿಸಲಾಯಿತು. ರಾಜ್ಯದ ೩೩ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆಯು ಶೇಕಡಾ ೧೦೦% ರಷ್ಟು ಪೂರ್ಣಗೊಂಡಿದೆ. ಮತದಾರರಿಂದ ಭರ್ತಿಯಾಗಿ ಬಂದಿರುವ ಅರ್ಜಿಗಳನ್ನು ಕಂಪ್ಯೂಟರೀಕರಣಗೊಳಿಸುವ ಕೆಲಸ ನಡೆಯುತ್ತಿದೆ.

೨. ಗುಜರಾತಿನಲ್ಲಿ ೬ ಲಕ್ಷದ ೧೪ ಸಾವಿರಕ್ಕೂ ಹೆಚ್ಚು ಮತದಾರರು ತಮ್ಮ ವಿಳಾಸದಿಂದ ಕಾಣೆಯಾಗಿರುವುದು ಪತ್ತೆಯಾಗಿದೆ. ಅದೇ ರೀತಿ ೩೦ ಲಕ್ಷಕ್ಕೂ ಹೆಚ್ಚು ಮತದಾರರು ಗುಜರಾತ್‌ನಿಂದ ಶಾಶ್ವತವಾಗಿ ಬೇರೆಡೆ ವಲಸೆ ಹೋಗಿದ್ದಾರೆ. ‘ಬೂತ್ ಲೆವೆಲ್ ಆಫೀಸರ್’ಗಳಿಗೆ (‘ಬಿ.ಎಲ್.ಒ.’ಗಳಿಗೆ) ೩ ಲಕ್ಷದ ೨೫ ಸಾವಿರಕ್ಕೂ ಹೆಚ್ಚು ಮತದಾರರ ಪುನರಾವರ್ತನೆಯಾಗಿರುವುದು ಕಂಡುಬಂದಿದೆ, ಅಂದರೆ ಅವರ ಹೆಸರುಗಳು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿದ್ದವು.

ಮೃತ ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಹಿಂದೂಗಳಿದ್ದಾರೆ: ಧಾರ್ಮಿಕ ರಾಜಕೀಯಕ್ಕೆ ಪ್ರಯತ್ನಿಸಿದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಯ ಪರಿಶೀಲನಾ ಪ್ರಕ್ರಿಯೆಯನ್ನು ಪದೇ-ಪದೇ ವಿರೋಧಿಸುತ್ತಿರುವ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ, ಗುಜರಾತಿನಲ್ಲಿ ಮೃತಪಟ್ಟಿರುವ ಮತದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಹಿಂದೂಗಳು ಎಂದು ಹೇಳಿದರು. ಬಿಜೆಪಿ ೨೦೨೬ ರ ವಿಧಾನಸಭಾ ಚುನಾವಣೆಗಳ ಮೊದಲು ಧಾರ್ಮಿಕ ರಾಜಕೀಯ ಮಾಡುತ್ತಿದೆ. ಅದು ಯಾವ ಕೊಂಬೆಯ ಮೇಲೆ ಕುಳಿತಿದೆಯೋ, ಅದೇ ಕೊಂಬೆಯನ್ನು ಕಡಿಯುತ್ತಿದೆ. (ಅಕ್ರಮ ವಲಸೆ ಮುಸಲ್ಮಾನರ ದೊಡ್ಡ ಸಂಖ್ಯೆಯನ್ನು ಮರೆಮಾಚಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ! – ಸಂಪಾದಕರು)

‘ಬಂಗಾಳದಲ್ಲಿ ಬಂಧನ ಕೇಂದ್ರಗಳನ್ನು ನಿರ್ಮಿಸಲು ಬಿಡುವುದಿಲ್ಲ!’ – ಮಮತಾ ಬ್ಯಾನರ್ಜಿ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಡಿ ಭದ್ರತೆಯ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ ಎಂದು ಹೇಳಿದರು. ಅದೇ ರೀತಿ ‘ವಿಶೇಷ ಆಳವಾದ ಪರಿಶೀಲನಾ ಅರ್ಜಿಯನ್ನು ಭರ್ತಿ ಮಾಡದಿರುವುದು ಜನರ ಒಗ್ಗಟ್ಟು’ ಎಂದು ಕೂಡ ಅವರು ಹೇಳಿದರು. ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಅಥವಾ ಬಂಧನ ಕೇಂದ್ರಗಳಿಗೆ ಅನುಮತಿ ನೀಡುವುದಿಲ್ಲ ಎಂದು ಅವರು ತಿಳಿಸಿದರು. ವಕ್ಫ್ ಆಸ್ತಿಗಳ ಮೇಲೆ ಅತಿಕ್ರಮಣ ಮಾಡಲು ಬಿಡುವುದಿಲ್ಲ. (ರಾಷ್ಟ್ರೀಯ ಭದ್ರತೆ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಅಗತ್ಯವಿರುವ ಪ್ರಕ್ರಿಯೆಗಳನ್ನು ವಿರೋಧಿಸಿ ಅದಕ್ಕೆ ಅಡ್ಡಿಪಡಿಸುತ್ತಿರುವ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವನ್ನು ಕಿತ್ತೊಗೆದು ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು, ಇದೇ ದೇಶಪ್ರೇಮಿಗಳ ನಿರೀಕ್ಷೆಯಾಗಿದೆ! – ಸಂಪಾದಕರು).