ಭಾಜಪದಿಂದ ವಿರೋಧ!

ನವ ದೆಹಲಿ – ಸಂವಿಧಾನದ ಕಲಂ ೨೫ ಮತ್ತು ೨೬ ರದ್ದುಗೊಳಿಸಲಾಗಿದೆ. ದೇಶದಲ್ಲಿ ಮುಸಲ್ಮಾನರ ಜೀವನವು ಹೆಚ್ಚು ಹೆಚ್ಚು ಕಠಿಣವಾಗುತ್ತಿದೆ. ಸುಮಾರು ೭೦ ಪ್ರತಿಶತ ವಕ್ಫ್ ಆಸ್ತಿ ಇನ್ನೂ ನೋಂದಣಿಯಾಗಿಲ್ಲ, ಇದರಿಂದಾಗಿ ಮುಸಲ್ಮಾನರಲ್ಲಿ ಅಭದ್ರತೆಯ ಭಾವನೆ ಹೆಚ್ಚುತ್ತಿದೆ. (ಭಾರತದಲ್ಲಿ ಮುಸಲ್ಮಾನರಲ್ಲಿ ಅಲ್ಲ, ಬದಲಾಗಿ ಅವರ ಜಿಹಾದಿ ಕೃತ್ಯಗಳಿಂದಾಗಿ ಹಿಂದುಗಳಲ್ಲಿ ಅಭದ್ರತೆಯ ಭಾವನೆ ನಿರ್ಮಾಣವಾಗಿದೆ. ತಮ್ಮನ್ನು ತಾವು ಸಂತ್ರಸ್ತರೆಂದು ಬಿಂಬಿಸಿ ಜಿಹಾದ್‌ನ ಭಾಷೆ ಮಾತನಾಡುವ ಇಂತಹ ಕಟ್ಟರವಾದಿ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವುದು ಅವಶ್ಯಕ! – ಸಂಪಾದಕರು) ಮುಸಲ್ಮಾನ ಸಮುದಾಯಕ್ಕೆ ಅದರ ಹಕ್ಕುಗಳಿಗಾಗಿ ಹೊಸ ಹೋರಾಟವನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಮತ್ತೆ ಹೋರಾಡಬೇಕಾಗುತ್ತದೆ ಮತ್ತು ಜಿಹಾದ್ ಮಾಡಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾಹ್ ನದ್ವಿ ಅವರು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಹೇಳಿಕೆ ನೀಡಿದರು. ಸಮಾಜವಾದಿ ಪಕ್ಷದ ಸಂಸದ ನದ್ವಿ ಅವರು ಲೋಕಸಭೆಯಲ್ಲಿ ವಕ್ಫ್ ಆಸ್ತಿಯ ಕುರಿತು ಮಾತನಾಡುತ್ತಿದ್ದಾಗ ಈ ಹೇಳಿಕೆಯನ್ನು ನೀಡಿದರು. ಅವರ ಈ ಹೇಳಿಕೆಗೆ ಸದನದಲ್ಲಿ ಆಡಳಿತ ಪಕ್ಷದ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅವರ ಹೇಳಿಕೆಯು ಪ್ರಚೋದನಕಾರಿ ಮತ್ತು ಬೇಜವಾಬ್ದಾರಿಯುತವಾಗಿದೆ ಎಂದು ಹೇಳಿದರು. ‘ಸಂಸತ್ತಿನಲ್ಲಿ ‘ಜಿಹಾದ್’ನಂತಹ ಪದಗಳನ್ನು ಬಳಸುವುದರಿಂದ ಸಮಾಜದಲ್ಲಿ ತಪ್ಪಾದ ಸಂದೇಶ ಹೋಗುತ್ತದೆ ಮತ್ತು ಉದ್ವಿಗ್ನತೆ ಹೆಚ್ಚುತ್ತದೆ’ ಎಂದು ಆಡಳಿತ ಪಕ್ಷದ ಸಂಸದರು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”