ವಿಮಾನ ಸಿಬ್ಬಂದಿಯ ಕೊರತೆಯೇ ಕಾರಣ ಎಂದು ಹೇಳಲಾಗಿದೆ
ನವ ದೆಹಲಿ – ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ‘ಇಂಡಿಗೋ ಏರ್‌ಲೈನ್ಸ್’ನ ಸುಮಾರು ೨೦೦ ವಿಮಾನಗಳ ಹಾರಾಟವು ಡಿಸೆಂಬರ್ ೩ ಮತ್ತು ೪ ರಂದು ರದ್ದುಗೊಂಡಿದೆ. ಇದರಿಂದ ಸಾವಿರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಕೆಲವು ತಾಂತ್ರಿಕ ಕಾರಣಗಳೊಂದಿಗೆ ವಿಮಾನ ಸಿಬ್ಬಂದಿಯ ಕೊರತೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಈ ಸಂಸ್ಥೆಯು ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ‘ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ’ವು (‘ಡಿಜಿಸಿಎ’ಯು) ‘ಇಂಡಿಗೋ ಏರ್‌ಲೈನ್ಸ್’ನಿಂದ ಉತ್ತರವನ್ನು ಕೇಳಿದೆ.
ಡಿಸೆಂಬರ್ ೩ ರಂದು ಬೆಂಗಳೂರಿನ ೪೨, ದೆಹಲಿಯ ೩೮, ಮುಂಬಯಿಯ ೩೩, ಭಾಗ್ಯನಗರದ ೧೯, ಕರ್ಣಾವತಿಯ ೨೫, ಇಂದೋರ್‌ನ ೧, ಕೋಲಕಾತಾದ ೧೦ ಮತ್ತು ಸೂರತ್‌ನ ೮ ವಿಮಾನಗಳ ಹಾರಾಟಗಳು ರದ್ದಾಗಿವೆ. ಕಳೆದ ೨ ದಿನಗಳಲ್ಲಿ ಇಂಡಿಗೋದ ೨೦೦ಕ್ಕೂ ಹೆಚ್ಚು ವಿಮಾನಗಳ ಹಾರಾಟಗಳು ರದ್ದಾಗಿವೆ. ನೂರಾರು ವಿಮಾನಗಳ ಹಾರಾಟಗಳಿಗೆ ಹಲವು ಗಂಟೆಗಳ ಕಾಲ ವಿಳಂಬವಾಗುತ್ತಿದೆ. ಡಿಸೆಂಬರ್ ೪ ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಉದ್ದನೆಯ ಸಾಲುಗಳು ಕಂಡುಬಂದಿವೆ. ಜನರು ತಮ್ಮ ವಿಮಾನಗಳಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರವಾಗಿವೆ.
ತಾಂತ್ರಿಕ ದೋಷದಿಂದ ವೇಳಾಪಟ್ಟಿಯಲ್ಲಿ ಬದಲಾವಣೆ! – ಇಂಡಿಗೋ ಏರ್‌ಲೈನ್ಸ್
ಈ ಬಗ್ಗೆ ‘ಇಂಡಿಗೋ ಏರ್‌ಲೈನ್ಸ್’ನವರು ಪ್ರಕಟಣೆಯಲ್ಲಿ ನೀಡಿದ ಹೇಳಿಕೆಯಲ್ಲಿ, ‘ಸಣ್ಣ ಮತ್ತು ದೊಡ್ಡ ತಾಂತ್ರಿಕ ದೋಷಗಳಿಂದ, ಹಾಗೆಯೇ ಚಳಿಗಾಲದಿಂದಾಗಿ ವೇಳಾಪಟ್ಟಿಯಲ್ಲಿ ಆದ ಬದಲಾವಣೆ, ಕೆಟ್ಟ ಹವಾಮಾನ, ವಿಮಾನ ಚಾಲನಾ ವ್ಯವಸ್ಥೆಯ ವೇಗದಲ್ಲಿನ ಕೊರತೆ, ಸಿಬ್ಬಂದಿಯ ಕೆಲಸದ ಸಮಯಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಇತ್ಯಾದಿಗಳಿಂದಾಗಿ ನಮ್ಮ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಇದು ನಮಗೆ ಮೊದಲೇ ತಿಳಿದಿರುವುದು ಸಾಧ್ಯವಿರಲಿಲ್ಲ,’ ಎಂದು ಸ್ಪಷ್ಟ ಪಡಿಸಿದೆ.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!