
ನವದೆಹಲಿ – ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರರಾದ ರಾಗಿಣಿ ನಾಯಕ್ ಅವರು ‘ಎಕ್ಸ್’ (X) ಎಂಬ ಸಾಮಾಜಿಕ ಮಾಧ್ಯಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಎಐ (AI) ನಿರ್ಮಿತ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ (ಎಐ ನಿರ್ಮಿತ ವಿಡಿಯೋ ಎಂದರೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ತಯಾರಿಸಿದ ವಿಡಿಯೋ). ಈ ವಿಡಿಯೋದಲ್ಲಿ ಅಂತರರಾಷ್ಟ್ರೀಯ ಶೃಂಗಸಭೆ ಕಾಣುತ್ತಿದೆ. ಅಲ್ಲಿನ ಕೆಂಪು ಹಾಸಿಗೆಯ ಮೇಲೆ ಸೂಟ್‌ನಲ್ಲಿರುವ ಪ್ರಧಾನಿ ಮೋದಿ ಒಂದು ಕೈಯಲ್ಲಿ ಚಹಾ ಕೆಟಲಿ, ಇನ್ನೊಂದು ಕೈಯಲ್ಲಿ ಚಹಾ ಗ್ಲಾಸ್ ಹಿಡಿದು ಓಡಾಡುತ್ತಿರುವುದು ಕಾಣುತ್ತಿದೆ. ಆ ವೇಳೆ ಅವರು ‘ಚಹಾ ತೆಗೆದುಕೊಳ್ಳಿ ಚಹಾ’ ಎಂದು ಕೂಗುತ್ತಾ ಚಹಾ ಮಾರುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೋ ಕೆಳಗೆ ನಾಯಕ್ ಅವರು ‘ಇದನ್ನು ಈಗ ಯಾರು ಮಾಡಿದರು?’ ಎಂದು ಬರೆದಿದ್ದಾರೆ.
🛑 New Low in Congress Politics!
Congress spreads an AI-made video of PM Modi “selling tea” in a suit – pure hatred on display! 🤯
Insulting a chaiwala is an insult to every poor citizen of Bharat. 💔🇮🇳
The political existence of such a Congress, driven by this mindset, must… pic.twitter.com/mTwZt7wEX1
— Sanatan Prabhat (@SanatanPrabhat) December 3, 2025
೧. ಪ್ರಧಾನಿ ಮೋದಿ ಅವರು ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ನಂತರ ‘ಚಿಕ್ಕಂದಿನಲ್ಲಿ ನಾನು ಚಹಾ ಮಾರಿ ದಿನ ಕಳೆದಿದ್ದೇನೆ. ಆದ್ದರಿಂದ ಬಡತನ ಎಂದರೇನು ಎಂಬುದು ನನಗೆ ತಿಳಿದಿದೆ’ ಎಂದು ನೆನಪಿಸಿಕೊಂಡಿದ್ದರು. ಅಂದಿನಿಂದ ದೇಶದಲ್ಲಿ ‘ಮೋದಿ ಮತ್ತು ಚಹಾ’ ಎಂಬ ಒಂದು ಸಮೀಕರಣ ಸೃಷ್ಟಿಯಾಗಿದೆ.
೨. ಕಾಂಗ್ರೆಸ್‌ನ ಈ ಕೃತ್ಯವನ್ನು ಭಾಜಪ ಟೀಕಿಸಿದೆ. ‘ದೇಶಕ್ಕಾಗಿ ಕೆಲಸ ಮಾಡುವ, ಹಾಗೆಯೇ ಇತರ ಹಿಂದುಳಿದ ವರ್ಗ ಮತ್ತು ಬಡತನದಿಂದ ಮೇಲೆ ಬಂದ ಪ್ರಧಾನಿ ಮೋದಿ ಅವರ ಎದುರು ಕೆಲಸಕ್ಕೆ ಬಾರದ ಕಾಂಗ್ರೆಸ್ ನಿಲ್ಲಲು ಸಾಧ್ಯವಿಲ್ಲ’ ಎಂದು ಭಾಜಪ ವಕ್ತಾರ ಶಹಜಾದ್ ಪೂನಾವಾಲಾ ಟೀಕಿಸಿದ್ದಾರೆ.
೩. ಬಿಹಾರ ಚುನಾವಣೆಯ ಸಮಯದಲ್ಲಿಯೂ ಕಾಂಗ್ರೆಸ್‌ನ ಒಬ್ಬ ನಾಯಕ ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಇದೇ ರೀತಿ ಅಶ್ಲೀಲ ಟೀಕೆ ಮಾಡಿದ್ದರು. ಆ ಸಮಯದಲ್ಲಿ ಕಾಂಗ್ರೆಸ್ ಮೇಲೆ ಟೀಕೆಯ ಸುರಿಮಳೆಯಾಗಿತ್ತು.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”