‘ವಂದೇ ಮಾತರಂ’ ಕುರಿತು ಸಂಸತ್ತಿನಲ್ಲಿ ೧೦ ಗಂಟೆಗಳ ಚರ್ಚೆ ನಡೆಯಲಿದೆ Vande Mataram Parliament Discussion

ನವದೆಹಲಿ – ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ೧೫೦ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆಯನ್ನು ಆಯೋಜಿಸಲಾಗಿದೆ. ಲೋಕಸಭೆಯಲ್ಲಿ ಡಿಸೆಂಬರ್ ೪ ಅಥವಾ ೫ ರಂದು ‘ವಂದೇ ಮಾತರಂ’ ಕುರಿತು ಚರ್ಚೆ ನಡೆಯಲಿದ್ದು, ಇದಕ್ಕಾಗಿ ೧೦ ಗಂಟೆಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ. ಈ ಚರ್ಚೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಭಾಗವಹಿಸಲಿದ್ದಾರೆ.