ಮತಾಂತರದಿಂದ ಸಂಸ್ಕೃತಿ ನಾಶವಾಗುತ್ತಿದೆ ಎಂಬ ಗ್ರಾಮಸ್ಥರ ಅಳಲು

ಸೂರತ್ (ಗುಜರಾತ್) – ಉಮರಪಾಡಾ ಸಮೀಪದ ‘ಬಹಾರ್’ ಗ್ರಾಮದ ಆದಿವಾಸಿಗಳ ಜಮೀನಿನಲ್ಲಿ ಒಂದು ಅನಧಿಕೃತ ಚರ್ಚ್‌ನ ಕಟ್ಟಡ ಕಾಮಗಾರಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಬಹಾರ್ ಗ್ರಾಮದ ಸ್ಥಳೀಯ ಹಿಂದೂಗಳು ಈ ಚರ್ಚು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಮಾಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
೧. ಆದಿವಾಸಿ ಸಮುದಾಯದ ಜನರ ಪ್ರಕಾರ, ಈ ಚರ್ಚ್‌ದಿಂದ ಆ ಪ್ರದೇಶದಲ್ಲಿ ಮತಾಂತರ ಚಟುವಟಿಕೆಗಳಿಗೆ ಚಾಲನೆ ಸಿಗುತ್ತಿದೆ. ಜನರಿಗೆ ಮತಾಂತರಕ್ಕೆ ಆಮಿಷ ತೋರಿಸಲಾಗುತ್ತಿದ್ದು, ಇದು ಸ್ಥಳೀಯರ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ನಾಶಪಡಿಸುವ ಒಂದು ಷಡ್ಯಂತ್ರದ ಭಾಗವಾಗಿದೆ.
೨. ಆದಿವಾಸಿ ಸಮುದಾಯದ ಓರ್ವ ಸದಸ್ಯರು, ‘ಆದಿವಾಸಿ ಸಮುದಾಯವು ಹಿಂದಿನಿಂದಲೂ ನಾಗದೇವ, ಗೋವಳದೇವ, ವಾಘದೇವ ಮತ್ತು ಇತರ ದೇವತೆಗಳನ್ನು ಪೂಜಿಸುತ್ತಿದೆ. ಈ ಆಚಾರ ಮತ್ತು ಸಂಪ್ರದಾಯವು ಅನಾದಿ ಕಾಲದಿಂದಲೂ ನಡೆದುಬಂದಿದೆ; ಆದರೆ ಈತ್ತಿಚಿನ ದಿನಗಳಲ್ಲಿ ಆದಿವಾಸಿ ಪ್ರದೇಶಗಳಲ್ಲಿ ದೊಡ್ಡ ಚರ್ಚ್‌ಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಪರವಾನಿಗೆ ಇಲ್ಲದೆ ಸಭೆಗಳನ್ನು ಏರ್ಪಡಿಸಲಾಗುತ್ತಿದೆ. ಮುಗ್ಧ ಆದಿವಾಸಿ ಜನರಿಗೆ ಆಮಿಷ ತೋರಿಸಿ ಮತಾಂತರ ಮಾಡಲಾಗುತ್ತಿದೆ. ಇದು ಆದಿವಾಸಿ ಸಂಸ್ಕೃತಿಯನ್ನು ನಾಶಪಡಿಸುವ ಉದ್ದೇಶದಿಂದ ಮಾಡಿರುವ ಪಿತೂರಿ ಆಗಿದೆ,’ ಎಂದು ಹೇಳಿದರು.
ಜವಾಬ್ದಾರ ಪಾದ್ರಿಯ ವಿರುದ್ಧ ಕ್ರಮ ಕೈಗೊಳ್ಳಲಿ! – ಗ್ರಾಮಸ್ಥರು
ಈ ಅನಧಿಕೃತ ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವ ಕ್ರೈಸ್ತ ಸಂಘಟನೆಯ ಪಾದ್ರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ ಮತ್ತು ಈ ಕುರಿತು ಉಮರ್‌ಪಾಡಾದ ಸ್ಥಳೀಯ ಆಡಳಿತಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಅನಧಿಕೃತ ಚರ್ಚುಗಳನ್ನು ಕಟ್ಟಿ ಹಿಂದೂಗಳನ್ನು ಮತಾಂತರಿಸಲು ಯತ್ನಿಸುತ್ತಿರುವ ಕಟ್ಟರವಾದಿ ಕ್ರೈಸ್ತರಿಗೆ ತಕ್ಕ ಪಾಠ ಕಲಿಸುವುದು ಅನಿವಾರ್ಯ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !