|

ನಂದೂರಬಾರ – ಇಲ್ಲಿನ ಅಕ್ಕಲಕುವಾ ಪ್ರದೇಶದಲ್ಲಿರುವ ಜಾಮಿಯಾ ಇಸ್ಲಾಮಿಯಾ ಇಶಾತುಲ್ ಉಲೂಂ ವಿಶ್ವವಿದ್ಯಾಲಯದ ವಿರುದ್ಧ ಆರ್ಥಿಕ ಮತ್ತು ನಿಯಂತ್ರಕ ಅಕ್ರಮಗಳು, ವಿದೇಶಿ ನಿಧಿ, ಮತಾಂತರ ಮತ್ತು ಅಕ್ರಮ ವಿದೇಶಿ ಪ್ರಜೆಗಳಿರುವ ಆರೋಪಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಸರಕಾರವು ‘ಎಫ್.ಸಿ.ಆರ್.ಎ.’ (FCRA) ನೋಂದಣಿಯನ್ನು ರದ್ದುಗೊಳಿಸಿದ ನಂತರ, ವಿಶ್ವವಿದ್ಯಾಲಯದ 110 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ. ವಿಶ್ವವಿದ್ಯಾಲಯದ ಆಡಳಿತ ನೋಡಿಕೊಳ್ಳಲು ಹಿರಿಯ ಐ.ಎ.ಎಸ್. ಅಧಿಕಾರಿಯನ್ನು ನೇಮಿಸಲಾಗಿದೆ. ಭಾಜಪ ಮುಖಂಡ ಕಿರಿಟ್ ಸೋಮಯ್ಯ ಅವರು ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮೇಲೆ ದೇಶವಿರೋಧಿ ಚಟುವಟಿಕೆಗಳ ಆರೋಪ ಮಾಡಿದ್ದರು. ಭಾಜಪ ಪ್ರಧಾನ ಕಾರ್ಯದರ್ಶಿ ವಿಜಯ ಚೌಧರಿ ಕೂಡ ಇದೇ ರೀತಿಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
Maharashtra braces for biggest FCRA action as Union Govt moves to seize Rs 110 crore assets of Jamia Ishaatul Uloomhttps://t.co/GHbHfvtDgf
— Kirit Somaiya (@KiritSomaiya) November 20, 2025
1. ವಿಶ್ವವಿದ್ಯಾಲಯವು ಎಫ್.ಸಿ.ಆರ್.ಎ. ಕಾಯಿದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ, ಜೊತೆಗೆ ಮಸೀದಿಯ ವಿದೇಶಿ ನಿಧಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ.
2. ವಿಶ್ವವಿದ್ಯಾಲಯದಲ್ಲಿ ಬಾಂಗ್ಲಾದೇಶ ಮತ್ತು ಯಮನ್ ದೇಶದ ಹೆಚ್ಚಿನ ವಿದ್ಯಾರ್ಥಿಗಳು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂಬ ಆರೋಪವಿದೆ. ವಿಶ್ವವಿದ್ಯಾಲಯವು ಆದಿವಾಸಿಗಳ ಭೂಮಿಯನ್ನು ಕಬಳಿಸಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
‘ಎಫ್.ಸಿ.ಆರ್.ಎ.’ ಕಾಯಿದೆ ಎಂದರೇನು?‘ಎಫ್.ಸಿ.ಆರ್.ಎ.’ ಎಂದರೆ ‘ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ’ ಇದನ್ನು ಭಾರತ ಸರಕಾರವು 1976ರಲ್ಲಿ ಪ್ರಾರಂಭಿಸಿತು. ವಿದೇಶಿ ನಿಧಿ ಪಡೆಯುವ ಸಂಸ್ಥೆಗಳು ಅಥವಾ ವ್ಯಕ್ತಿಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ. ವಿದೇಶಿ ನಿಧಿ ಪಡೆಯಲು ಬಯಸುವವರು ಭಾರತ ಸರಕಾರದಿಂದ ಸಂಬಂಧಿತ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸರಕಾರವು ಈ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ನಿಗಾ ಇಡುತ್ತದೆ. |
ಸಂಪಾದಕೀಯ ನಿಲುವುಆಸ್ತಿಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ, ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!