ಭಾರತದಿಂದ ವಿರೋಧ

ಕಠ್ಮಂಡು (ನೇಪಾಳ) – ನೇಪಾಳವು ತನ್ನ ಹೊಸ ೧೦೦ ರೂಪಾಯಿ ನೋಟಿನ ಮೇಲೆ ದೇಶದ ನಕ್ಷೆಯನ್ನು ಮುದ್ರಿಸಿದೆ. ಆ ನಕ್ಷೆಯಲ್ಲಿ, ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ನೇಪಾಳಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಈ ಮೂರೂ ಪ್ರದೇಶಗಳು ಭಾರತದ ಗಡಿಯೊಳಗೆ ಬರುತ್ತವೆ.
ಭಾರತದ ವಿದೇಶಾಂಗ ಸಚಿವಾಲಯವು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ‘ಈ ರೀತಿಯ ಹೇಳಿಕೆಗಳಿಂದ ಸತ್ಯ ಬದಲಾಗುವುದಿಲ್ಲ. ನೇಪಾಳವು ಭಾರತದ ಸಾರ್ವಭೌಮತ್ವದ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಇಂತಹ ಹಕ್ಕುಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸುತ್ತವೆ. ನೇಪಾಳವು ಐತಿಹಾಸಿಕ ಸಂಗತಿಗಳನ್ನು ನಿರ್ಲಕ್ಷಿಸಿದೆ’ ಎಂದು ಹೇಳಿದೆ.
ನೇಪಾಳದ ಬ್ಯಾಂಕ್‌ನ ಹೇಳಿಕೆಯ ಪ್ರಕಾರ, ಹಳೆಯ ೧೦೦ ರೂಪಾಯಿ ನೋಟಿನ ಮೇಲೆಯೂ ನಕ್ಷೆ ಇತ್ತು, ಈಗ ಅದನ್ನು ಕೇವಲ ಸರಕಾರದ ನಿರ್ಧಾರದಂತೆ ‘ಪರಿಷ್ಕರಿಸಿ’ ಮುದ್ರಿಸಲಾಗಿದೆ ಎಂದಿದೆ.
ಸಂಪಾದಕೀಯ ನಿಲುವುಗಾತ್ರದಲ್ಲಿ ಚಿಕ್ಕ ದೇಶವಾದ ನೇಪಾಳ ಈ ರೀತಿ ಭಾರತವಿರೋಧಿ ಕೃತ್ಯ ಮಾಡುತ್ತಿದ್ದರೆ, ಅದಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅಗತ್ಯ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation