ಉಡುಪಿ: ಪ್ರಾಚೀನ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆ

ಉಡುಪಿ – ಶ್ರೀಕೃಷ್ಣನು ಯುದ್ಧ ಭೂಮಿಯಲ್ಲಿ ಗೀತೆಯ ಸಂದೇಶವನ್ನು ನೀಡಿದ್ದನು. ಶಾಂತಿ ಮತ್ತು ಸತ್ಯವನ್ನು ಸ್ಥಾಪಿಸಲು ದೌರ್ಜನ್ಯ ಮಾಡುವವರನ್ನು ಅಂತ್ಯ ಮಾಡುವುದು ಸಹ ಅವಶ್ಯಕ ಎಂದು ಭಗವದ್ಗೀತೆ ಹೇಳುತ್ತದೆ. ನಾನು ಕೆಂಪುಕೋಟೆಯಿಂದ ಶ್ರೀಕೃಷ್ಣನ ಕರುಣೆಯ ಸಂದೇಶವನ್ನು ನೀಡುತ್ತೇನೆ ಮತ್ತು ಅದೇ ಸ್ಥಳದಿಂದ ‘ಮಿಷನ್ ಸುದರ್ಶನ ಚಕ್ರ’ವನ್ನೂ ಘೋಷಿಸುತ್ತೇನೆ. ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ದೇಶದ ಸಂಕಲ್ಪವನ್ನು ನೀವು ನೋಡಿದ್ದೀರಿ. ನಮಗೆ ಶಾಂತಿಯನ್ನು ಸ್ಥಾಪಿಸುವುದು ಮತ್ತು ಶಾಂತಿ ರಕ್ಷಿಸುವುದು ಕೂಡ ತಿಳಿದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಶ್ರೀಕೃಷ್ಣ ಮಠದ ಜಗದ್ಗುರು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆಯೋಜಿಸಿದ್ದ ವಿಶ್ವ ಗೀತಾ ಪರ್ಯಾಯ ಕಾರ್ಯಕ್ರಮದಲ್ಲಿ ‘ಲಕ್ಷ್ಯ ಕಂಠ ಗೀತಾ ಪಾಠ’ ನಿಮಿತ್ತ ಪ್ರಧಾನಿ ಅವರು ಮಾತನಾಡುತ್ತಿದ್ದರು. ಶ್ರೀ ಕೃಷ್ಣ ಮಠವನ್ನು ಸುಮಾರು 800 ವರ್ಷಗಳ ಹಿಂದೆ ದ್ವೈತ ವೇದಾಂತ ಪರಂಪರೆಯ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದರು.
Addressing the Laksha Kantha Gita Parayana programme at Sri Krishna Matha in Udupi. Deeply honoured for the opportunity to be in the presence of the revered sages.
https://t.co/4E53zyQF7B— Narendra Modi (@narendramodi) November 28, 2025
ಪ್ರಧಾನಿ ಮೋದಿ ಮಾತು ಮುಂದುವರೆಸಿ,
1. ಶತಮಾನಗಳಿಂದ ಮಂತ್ರೋಚ್ಚಾರ ಮತ್ತು ಗೀತಾ ಪಠಣ ನಡೆದುಕೊಂಡು ಬಂದಿದೆ; ಆದರೆ ಒಂದೇ ಸ್ವರದಲ್ಲಿ ಅಸಂಖ್ಯಾತ ಕಂಠಗಳಿಂದ ಶ್ಲೋಕಗಳನ್ನು ಉಚ್ಚರಿಸಿದಾಗ, ಮನಸ್ಸು ಮತ್ತು ಬುದ್ಧಿಗೆ ಹೊಸ ಚೈತನ್ಯ ಮತ್ತು ಶಕ್ತಿ ದೊರೆಯುತ್ತದೆ. ಇದು ಆಧ್ಯಾತ್ಮಿಕ ಶಕ್ತಿಯ ಸ್ವರೂಪವಾಗಿದೆ. ಜೊತೆಗೆ ಸಾಮಾಜಿಕ ಏಕತೆಯ ಬಲವೂ ಆಗಿದೆ. ‘ಲಕ್ಷ್ಯ ಕಂಠ ಗೀತಾ ಪಾಠ’ ಎಂಬ ಈ ಕಾರ್ಯಕ್ರಮವು ಶಕ್ತಿಯ ಸ್ಪಂದನದ ಅನುಭವವನ್ನು ನೀಡುವುದಾಗಿದೆ ಎಂದು ಪ್ರಧಾನಿ ನುಡಿದರು.
2. ಸಕಲ ಜನರ ಸಹಕಾರ ಮತ್ತು ಉನ್ನತಿಗಾಗಿರುವ ನೀತಿಗಳಿಗೆ ಶ್ರೀಕೃಷ್ಣನ ಬೋಧನೆಯೇ ಪ್ರೇರಣೆಯಾಗಿದೆ. ಬಡವರಿಗೆ ಸಹಾಯ, ನಾಗರಿಕರ ಆರೋಗ್ಯ ಮತ್ತು ವಸತಿ ಯೋಜನೆಗಳು, ಮಹಿಳೆಯರ ಸುರಕ್ಷತೆಯನ್ನು ಒತ್ತಿಹೇಳುವ ನೀತಿಗಳು – ಇವೆಲ್ಲದಕ್ಕೂ ಗೀತೆಯ ಸಂದೇಶವೇ ಆಧಾರವಾಗಿದೆ.
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ