ಅಂಬರನಾಥ್: ಪ್ರಚಾರದ ವಿವಾದ; ಭಾಜಪ ಕಾರ್ಯಕರ್ತನ ಮೇಲೆ ಮಚ್ಚಿನಿಂದ ದಾಳಿ

ಠಾಣೆ, ನವೆಂಬರ್ ೨೭ (ವರದಿ) – ಅಂಬರನಾಥ್‌ನ ಸರ್ವೋದಯನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವಿವಾದದಿಂದಾಗಿ ಭಾಜಪದ ಕಾರ್ಯಕರ್ತ ಸತ್ಯಮ್ ತೆಲಂಗೆ ಅವರ ಮೇಲೆ ಮಚ್ಚಿನಿಂದ ದಾಳಿ ಮಾಡಲಾಗಿದೆ.

‘ಭಾಜಪದ ಅಭ್ಯರ್ಥಿಗಾಗಿ ಪ್ರಚಾರ ಮಾಡಬೇಡಿ’, ಎಂದು ಎಚ್ಚರಿಕೆ ನೀಡಿದ ನಂತರ ಈ ದಾಳಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಸಾಹಿಲ್ ವಡ್ನೆರೆ ಎಂಬಾತನ ಹೆಸರು ಮುಂಚೂಣಿಗೆ ಬಂದಿದ್ದರೂ, ಆತ ಶಿವಸೇನೆಯ ಕಾರ್ಯಕರ್ತನಲ್ಲ ಎಂದು ಸ್ಥಳೀಯ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ದಾಳಿಯಲ್ಲಿ ತೆಲಂಗೆ ಅವರ ಕೈಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಅಂಬರನಾಥ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಅಸುರಕ್ಷಿತ ಅಂಬರನಾಥ್ ನಗರ!