ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ ಫೇಲ್ ಮಾಡುವ ಬೆದರಿಕೆ ಒಡ್ಡಿ ಒಬ್ಬಂಟಿಯಾಗಿ ಭೇಟಿಯಾಗುವಂತೆ ಒತ್ತಾಯ!

ಭೋಪಾಳ (ಮಧ್ಯಪ್ರದೇಶ) – ಮಧ್ಯಪ್ರದೇಶ ರಾಜ್ಯದ ದಿಂಡೋರಿ ಎಂಬಲ್ಲಿ 12ನೇ ತರಗತಿಯ ಕೆಲವು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಓರ್ವ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಬೆದರಿಸಿ ಈ ಶಿಕ್ಷಕ ವಿದ್ಯಾರ್ಥಿನಿಯರನ್ನು ಒಬ್ಬಂಟಿಯಾಗಿ ಭೇಟಿಯಾಗುವಂತೆ ಕರೆಯುತ್ತಿದ್ದನು. ಆತ ಅನೇಕ ವಿದ್ಯಾರ್ಥಿನಿಯರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಸಹ ಕಳುಹಿಸುತ್ತಿದ್ದನು. ಆತನ ಹೆಸರು ಪ್ರಶಾಂತ್ ಸಾಹು ಎಂದಾಗಿದೆ. ಆತ, ‘ನನ್ನನ್ನು ಏಕಾಂತದಲ್ಲಿ ಭೇಟಿಯಾಗು, ಇಲ್ಲದಿದ್ದರೆ ಅನುತ್ತೀರ್ಣ ಮಾಡುತ್ತೇನೆ’ ಎಂದು ಹೇಳುತ್ತಿದ್ದನು. ಒಬ್ಬ ವಿದ್ಯಾರ್ಥಿನಿಯನ್ನು ಏಕಾಂತದಲ್ಲಿ ಭೇಟಿಯಾಗುವಂತೆ ಆತ ಒತ್ತಾಯಿಸಿದ್ದನು. ಒಬ್ಬ ವಿದ್ಯಾರ್ಥಿನಿಗೆ ಆತ ವಾಟ್ಸಾಪ್‌ನಲ್ಲಿ ‘ಐ ಲವ್ ಯೂ’ ಎಂದು ಬರೆದು ಕಳುಹಿಸಿದ್ದನು. ಈ ಘಟನೆ ದಿಂಡೋರಿ ಜಿಲ್ಲೆಯ ಅಮರ್‌ಪುರದ ಸಂದೀಪನಿ ಶಾಲೆಯಲ್ಲಿ ನಡೆದಿದೆ.
ಶಿಕ್ಷಕ ಪ್ರಶಾಂತ್ ಸಾಹು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಅನೇಕ ವಿದ್ಯಾರ್ಥಿನಿಯರು ಆತನ ‘ವಾಟ್ಸಾಪ್ ಚಾಟ್’ ಅನ್ನು ಪುರಾವೆಯಾಗಿ ತೋರಿಸಿದರು. ವಿದ್ಯಾರ್ಥಿನಿಯರು ಉಪಸರಪಂಚರೊಂದಿಗೆ, ಹಾಗೂ ಒಬ್ಬ ಮಹಿಳಾ ಶಿಕ್ಷಕಿಯೊಂದಿಗೆ ಪೊಲೀಸ್ ವರಿಷ್ಠಾಧಿಕಾರಿ ವಾಹಿನಿ ಸಿಂಹ ಅವರ ಕಚೇರಿಗೆ ತಲುಪಿದರು. ಉಪಸರಪಂಚ ಸೆನ್ಸಿ ಚಂಡೋಲ್ ಅವರು ಮಾತನಾಡಿ, ಶಿಕ್ಷಕನು ವಿದ್ಯಾರ್ಥಿನಿಯರಿಗೆ, ‘ತನ್ನ ಮಾತು ಕೇಳದಿದ್ದರೆ ಇಂಗ್ಲಿಷ್ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ನೀಡುವುದಾಗಿ’ ಸಹ ಹೇಳಿದ್ದನು ಎಂದು ತಿಳಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶಿಕ್ಷಕನ ವಿರುದ್ಧ ‘ಪೋಕ್ಸೋ’ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸಂಪಾದಕೀಯ ನಿಲುವುಇಂದಿನ ಶಿಕ್ಷಕರಲ್ಲಿ ಆಗಿರುವ ನೈತಿಕ ಅಧಃಪತನವನ್ನು ತೋರಿಸುವ ಘಟನೆ ಇದು! ಇಂತಹ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಯಾವ ಪಾಠ ಕಲಿಸುತ್ತಿರಬಹುದು ಎಂದು ಯೋಚಿಸದಿರುವುದೇ ಉತ್ತಮ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!