|

ಆಗ್ರಾ (ಉತ್ತರಪ್ರದೇಶ) – ರಾಜ್ಯದ ಕೈಗಾರಿಕಾ ರಾಜಧಾನಿಯಾದ ಆಗ್ರಾ ನಗರದಲ್ಲಿ ಮತಾಂತರದ ಪ್ರಯತ್ನಗಳು ನಿರಂತರವಾಗಿವೆ. ನಗರದ ಜಗದೀಶ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆವಾಸ್ ವಿಕಾಸ್ ಕಾಲೋನಿ (ಸೆಕ್ಟರ್ ೭) ಯಲ್ಲಿ ಮತಾಂತರದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ನವೆಂಬರ್ ೨೩ ರ ಬೆಳಿಗ್ಗೆ, ಇಲ್ಲಿನ ಒಂದು ಮನೆಯಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರಿಗೆ ಸಿಕ್ಕಿತು, ತಕ್ಷಣವೇ ಕಾರ್ಯಕ್ರತರು ಸ್ಥಳಕ್ಕೆ ತಲುಪಿದರು. ಅಲ್ಲಿ ಪ್ರಾರ್ಥನಾ ಸಭೆ ನಡೆಸಲಾಗುತ್ತಿತ್ತು ಮತ್ತು ತಪಾಸಣೆ ನಡೆಸಿದಾಗ ಅನೇಕ ಬೈಬಲ್ ಪುಸ್ತಕಗಳು ಸಹ ಕಂಡುಬಂದವು. ವಾಗ್ವಾದ ಹೆಚ್ಚಾದ ಕೂಡಲೇ, ಪೊಲೀಸ್ ಅಧೀಕ್ಷಕ ಗೌರವ್ ಸಿಂಹ ಅವರು ಹೆಚ್ಚಿನ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ತಲುಪಿದರು. ಪೊಲೀಸರು ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತ ದಂಪತಿ ಸೇರಿದಂತೆ ೮ ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಜರಂಗ ದಳದ ಸ್ಥಳೀಯ ಪದಾಧಿಕಾರಿಗಳು, ವಿಶ್ವನಾಥ್ ಸಿಂಹ ಚೌಹಾಣ್ ಅವರ ಮನೆಯಲ್ಲಿ ಪ್ರತಿ ಭಾನುವಾರ ಸಭೆ ನಡೆಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಜನರಿಗೆ ಆಮಿಷವೊಡ್ಡಿ ಈ ಸಭೆಗಳಿಗೆ ಕರೆತರಲಾಗುತ್ತಿತ್ತು. ‘ಮಕ್ಕಳಿಗೆ ಮಿಷನರಿ ಶಾಲೆಗಳಲ್ಲಿ ಪ್ರವೇಶ ನೀಡಲಾಗುವುದು’, ‘ಉದ್ಯೋಗ ನೀಡಲಾಗುವುದು’ ಮತ್ತು ‘ತಿಂಗಳಿಗೆ ಆರ್ಥಿಕ ನೆರವು ನೀಡಲಾಗುವುದು’ ಎಂಬ ‘ಭರವಸೆ’ ನೀಡಲಾಗುತ್ತಿತ್ತು.
ಸ್ಥಳೀಯರ ಪ್ರಕಾರ, ಆ ಮನೆಯಲ್ಲಿ ಪ್ರಾರ್ಥನೆಯ ನೆಪದಲ್ಲಿ ಯಾವಾಗಲೂ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಿದ್ದರು. ಈ ಪ್ರಕರಣದ ಆಳವಾದ ತನಿಖೆ ನಡೆಸುವುದು ಆವಶ್ಯಕವಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !