ದೆಹಲಿಯಲ್ಲಿ 6 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿಯ ಮಾರಣಾಂತಿಕ ದಾಳಿ Delhi Pitbull Attack

ನವದೆಹಲಿ – ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ವಿದೇಶಿ ಪಿಟ್‌ಬುಲ್ ಜಾತಿಯ ನಾಯಿಯೊಂದು 6 ವರ್ಷದ ಬಾಲಕನ ಮೇಲೆ ಮಾಡಿದ ಮಾರಣಾಂತಿಕ ದಾಳಿಯಲ್ಲಿ ಆ ಬಾಲಕ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ದಾಳಿಯಲ್ಲಿ ಬಾಲಕ ತನ್ನ ಬಲ ಕಿವಿಯನ್ನು ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಪಿಟ್‌ಬುಲ್ ನಾಯಿಯ ಮಾಲೀಕ ರಾಜೇಶ ಪಾಲ್ ನನ್ನು ಬಂಧಿಸಿದ್ದಾರೆ.

ನವೆಂಬರ್ 23 ರ ಸಂಜೆ, ಆ ಬಾಲಕ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ನೆರೆಮನೆಯಿಂದ ಪಿಟ್‌ಬುಲ್ ಹೊರಗೆ ಬಂದು ಬಾಲಕನ ಮೇಲೆ ದಾಳಿ ಮಾಡಿದೆ. ನೆರೆಹೊರೆಯವರ ಸಹಾಯದಿಂದ ಪೋಷಕರು ಪೀಡಿತ ಬಾಲಕನನ್ನು ಪಿಟ್‌ಬುಲ್‌ನ ಹಿಡಿತದಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದರು. ನಂತರ  ಅವನನ್ನು ಸಫದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಪ್ರಸ್ತುತ ಚಿಕಿತ್ಸೆ ಮುಂದುವರಿಸಲಾಗಿದೆ.

ಸಂಪಾದಕೀಯ ನಿಲುವು

ಬೀದಿ ನಾಯಿಗಳಷ್ಟೇ ಅಲ್ಲ, ಸಾಕಿದ ವಿದೇಶಿ ನಾಯಿಗಳೂ ಸಹ ದಾಳಿ ಮಾಡುತ್ತಿರುವುದರಿಂದ, ಈಗ  ದೇಶದಲ್ಲಿ ನಾಯಿಗಳನ್ನು ಸಾಕುವುದೇ ಅಪರಾಧ ಎಂದು ಕಾನೂನು ಮಾಡುವಂತೆ ಯಾರಾದರೂ ಬೇಡಿಕೆ ಇಟ್ಟರೆ ಆಶ್ಚರ್ಯ ಪಡಬೇಕಾಗಿಲ್ಲ!