ಅರುಣಾಚಲ ಪ್ರದೇಶವು ನಿಸ್ಸಂದೇಹವಾಗಿ ಭಾರತದ ಅವಿಭಾಜ್ಯ ಅಂಗ! – ಭಾರತ

ಶಾಂಘೈ (ಚೀನಾ) – ಭಾರತದ ಅರುಣಾಚಲ ಪ್ರದೇಶದ ನಿವಾಸಿಗಳಾದ ಪೆಮಾ ವಾಂಗ್ ಥೋಂಗಡೋಕ್ ಅವರಿಗೆ ಇಲ್ಲಿನ ಪಾಸ್ಪೋರ್ಟ್ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ‘ಅರುಣಾಚಲ ಪ್ರದೇಶದ ವಿಳಾಸವಿದ್ದರೂ ಭಾರತದ ಪಾಸ್ಪೋರ್ಟ್ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿ, ಅವರ ಪಾಸ್ಪೋರ್ಟ್ ಅನ್ನು ಅಸಿಂಧುಗೊಳಿಸಲು ಪ್ರಯತ್ನಿಸಿದರು. ಇದಕ್ಕಾಗಿ ಪೆಮಾ ಅವರನ್ನು 18 ಗಂಟೆಗಳ ಕಾಲ ಬಂಧಿಸಿ ಇಡಲಾಗಿತ್ತು. ಈ ಕುರಿತು ಪೆಮಾ, ‘ಎಕ್ಸ್’ ವೇದಿಕೆಯಲ್ಲಿ ಈ ಮಾಹಿತಿ ಹಂಚಿಕೊಂಡು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ಪಾಸ್ಪೋರ್ಟನಲ್ಲಿ ತಮ್ಮ ಜನ್ಮಸ್ಥಳ ಅರುಣಾಚಲ ಪ್ರದೇಶ ಎಂದು ನಮೂದಿಸಿರುವುದರಿಂದ ‘ಅರುಣಾಚಲ ಪ್ರದೇಶವು ಚೀನಾದ ಭಾಗವಾಗಿದೆ’ ಎಂದು ಹೇಳಿ ತಮ್ಮ ಪಾಸ್ಪೋರ್ಟ್ ಅಸಿಂಧುವಾಗಿದೆ ಎಂದು ಅವರು ತಿಳಿಸಿದರು. ನಂತರ ಅವರು ನನ್ನನ್ನು 18 ಗಂಟೆಗಳ ಕಾಲ ಕೂಡಿ ಹಾಕಿದರು ಎಂದು ಅವರು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಭಾರತವು ಚೀನಾವನ್ನು, ‘ಯಾವುದೇ ಭ್ರಮೆಯಲ್ಲಿ ಇರಬೇಡಿ. ಅರುಣಾಚಲ ಪ್ರದೇಶ ನಮ್ಮದೇ ಭೂಭಾಗವಾಗಿದೆ’ ಎಂಬ ಕಠಿಣ ಮಾತುಗಳಲ್ಲಿ ಎಚ್ಚರಿಸಿದೆ. ಇದರ ಜೊತೆಗೆ, ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ‘ಶಿಕಾಗೋ ಒಪ್ಪಂದ 1944’ ಮತ್ತು ‘ಮಾಂಟ್ರಿಯಲ್ ಒಪ್ಪಂದ 1999’ಗಳನ್ನು ನೆನಪಿಸಿ, ಚೀನಾದ ಈ ಕೃತ್ಯವು ಈ ಒಪ್ಪಂದಗಳ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಪೆಮಾ ಅವರು ಸದ್ಯಕ್ಕೆ ಲಂಡನ್ ನಲ್ಲಿ ವಾಸವಾಗಿದ್ದಾರೆ. ಅವರು ಲಂಡನ್ ನಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಅವರ ವಿಮಾನವು ಕೆಲವೇ ಗಂಟೆಗಳ ಕಾಲ ಶಾಂಘೈನಲ್ಲಿ ತಂಗಿತ್ತು . ಆಗ ಈ ಘಟನೆ ನಡೆದಿದೆ.
ಸಂಪಾದಕೀಯ ನಿಲುವುಭಾರತ ಈಗ ಕೇವಲ ಚೀನಾವನ್ನು ಹೀಗೆ ಬೆದರಿಸಿ ಸುಮ್ಮನಾಗಬಾರದು. ಬದಲಿಗೆ, ಅರುಣಾಚಲ ಪ್ರದೇಶದ ವಾಸ್ತವ ಸ್ಥಿತಿಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಲು, ವಿದೇಶಿ ರಾಷ್ಟ್ರಾಧ್ಯಕ್ಷರ ಭಾರತ ಪ್ರವಾಸಗಳನ್ನು ಅರುಣಾಚಲ ಪ್ರದೇಶದಲ್ಲಿ ಆಯೋಜಿಸಬೇಕು. ಜಾಗತಿಕ ವೇದಿಕೆಗಳಲ್ಲಿ ‘ಅರುಣಾಚಲ ಪ್ರದೇಶದ ಭೂಮಿ ಭಾರತದ್ದೇ ಆಗಿದೆ’ ಎಂದು ಪುನಃ ಪುನಃ ಪ್ರತಿಪಾದಿಸಬೇಕು. ಹಾಗೆಯೇ, ಮಾಧ್ಯಮಗಳ ಮೂಲಕವೂ ರಾಜ್ಯದ ನಿಜವಾದ ಪರಿಸ್ಥಿತಿಯನ್ನು ಜಗತ್ತಿನ ಮುಂದೆ ಇರಿಸಿ ಚೀನಾವನ್ನು ಬಯಲು ಮಾಡಬೇಕು. |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !