ರಾಜ್ಯ ಧಾರ್ಮಿಕ ಟ್ರಸ್ಟ್ ಮಂಡಳಿಯಿಂದ ಎಲ್ಲಾ 38 ಜಿಲ್ಲೆಗಳಲ್ಲಿ ಸಂಯೋಜಕರ ನೇಮಕಾತಿ

ಪಾಟ್ಲಿಪುತ್ರ (ಬಿಹಾರ) – ಬಿಹಾರ ಸರಕಾರದ ರಾಜ್ಯ ಧಾರ್ಮಿಕ ಟ್ರಸ್ಟ್ ಮಂಡಳಿಯು ರಾಜ್ಯಾದ್ಯಂತ ಸನಾತನ ಧರ್ಮದ ಪ್ರಚಾರಕ್ಕಾಗಿ ರಾಜ್ಯದ ಎಲ್ಲಾ 38 ಜಿಲ್ಲೆಗಳಲ್ಲಿ ಸಂಯೋಜಕರನ್ನು ನೇಮಿಸಲಿದೆ. ಈ ಮಂಡಳಿಯಲ್ಲಿ 2,499 ದೇವಸ್ಥಾನಗಳು ಮತ್ತು ಮಠಗಳು ನೋಂದಣಿಯಾಗಿವೆ. ಈ ಮಂಡಳಿಯು ರಾಜ್ಯದಲ್ಲಿ ನೋಂದಾಯಿತ ದೇವಸ್ಥಾನಗಳು, ಮಠಗಳು ಮತ್ತು ಟ್ರಸ್ಟ್‌ಗಳ ಆಸ್ತಿಗಳನ್ನು ದಾಖಲಿಸುವುದರ ಜೊತೆಗೆ ಅವುಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಮುಖ್ಯ ಅರ್ಚಕರೊಂದಿಗೆ ಸಮನ್ವಯ ಮಾಡಿಕೊಂಡು ಈ ಸಂಯೋಜಕರನ್ನು ನೇಮಿಸಲಾಗುವುದು. ಈ ಮಂಡಳಿಯು ಬಿಹಾರ ಸರಕಾರದ ಕಾನೂನು ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಮಂಡಳಿಯ ಅಧ್ಯಕ್ಷರಾದ ರಣಬೀರ್ ನಂದನ್ ಅವರು ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಒಬ್ಬ ಸಂಯೋಜಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಮುಂದಿನ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಮಹಂತರು (ಮುಖ್ಯ ಅರ್ಚಕರು) ಮಾತ್ರ ಈ ಸಂಯೋಜಕರನ್ನು ಆಯ್ಕೆ ಮಾಡುವರು ಎಂದು ತಿಳಿಸಿದರು.
“ನಮ್ಮ ಹಬ್ಬಗಳು ದೇಶದ ಸಂಸ್ಕೃತಿಯನ್ನು ಜೀವಂತವಾಗಿರಿಸುತ್ತವೆ. ಅಲ್ಲದೆ, ಅವು ಪರಿಸರ ಸೌಹಾರ್ದತೆ, ಭಕ್ತಿ ಮತ್ತು ಸಮುದಾಯ ಭಾಗವಹಿಸುವಿಕೆಯ ಜೀವಂತ ಅಭಿವ್ಯಕ್ತಿಗಳಾಗಿವೆ. ಹಬ್ಬಗಳು, ಪೂಜೆಗಳು, ಅವುಗಳ ಮೌಲ್ಯಗಳು ಮತ್ತು ಸನಾತನ ಧರ್ಮದ ಮಹತ್ವವನ್ನು ಪ್ರಸಾರ ಮಾಡಬೇಕಾಗಿದೆ” ಎಂದು ನಂದನ್ ಒತ್ತಿ ಹೇಳಿದರು.
ಅಂತರಾಷ್ಟ್ರೀಯ ಸಮ್ಮೇಳನ ಆಯೋಜನೆ !
“ಸನಾತನ ಧರ್ಮದ ಪ್ರಚಾರಕ್ಕಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ರಾಜ್ಯದ ಪ್ರಾಚೀನ ನಗರವಾದ ರಾಜಗೀರ್‌ನಲ್ಲಿ (ಜಿ.ನಳಂದ) ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ಸನಾತನ ಧರ್ಮದ ಎಲ್ಲಾ ಹಬ್ಬಗಳು, ಪೂಜೆಗಳು ಮತ್ತು ಇತರ ಧಾರ್ಮಿಕ ಚಟುವಟಿಕೆಗಳನ್ನು ಎತ್ತಿ ತೋರಿಸುವ ಧಾರ್ಮಿಕ ಕ್ಯಾಲೆಂಡರ್ ಅನ್ನು ಪ್ರಕಟಿಸಲು ನಾವು ನಿರ್ಧರಿಸಿದ್ದೇವೆ,” ಎಂದು ರಣಬೀರ್ ನಂದನ್ ಅವರು ತಿಳಿಸಿದರು.
ಸಂಯೋಜಕರ ಕಾರ್ಯಗಳೇನು ?
1.ಸಂಬಂಧಪಟ್ಟ ಜಿಲ್ಲೆಯ ಎಲ್ಲಾ ನೋಂದಾಯಿತ ದೇವಸ್ಥಾನಗಳು ಮತ್ತು ಮಠಗಳು ಪ್ರತಿ ತಿಂಗಳು ಕ್ರಮವಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನದಂದು ‘ಸತ್ಯನಾರಾಯಣ ಕಥೆ’ ಮತ್ತು ‘ಭಗವತಿ ಪೂಜೆ’ ಯನ್ನು ನಡೆಸುತ್ತಿವೆಯೇ ಎಂದು ಖಚಿತಪಡಿಸುವುದು.
2.ಎಲ್ಲಾ ನೋಂದಾಯಿತ ದೇವಸ್ಥಾನಗಳು ಮತ್ತು ಮಠಗಳು ಈ ಎರಡೂ ಪೂಜೆಗಳ ಮಹತ್ವವನ್ನು ಜನರಿಗೆ ಮನವರಿಕೆ ಮಾಡುತ್ತಿವೆಯೇ ಎಂದು ಖಚಿತಪಡಿಸುವುದು, ಜೊತೆಗೆ ಪ್ರತಿ ತಿಂಗಳು ತಮ್ಮ ಮನೆಗಳಲ್ಲಿ ಅಂತಹ ಪೂಜೆಗಳನ್ನು ಆಯೋಜಿಸಲು ಜನರನ್ನು ಪ್ರೋತ್ಸಾಹಿಸುವುದು.
3.ದೇವಸ್ಥಾನಗಳು ಮತ್ತು ಮಠಗಳು ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುವುದು.
ಸಂಪಾದಕೀಯ ನಿಲುವುಬಿಜೆಪಿ-ಜೆಡಿಯು ಸರಕಾರದ ಈ ನಿರ್ಧಾರ ಪ್ರಶಂಸನೀಯವಾಗಿದೆ. ಇದನ್ನು ಮಾದರಿಯಾಗಿಟ್ಟುಕೊಂಡು ದೇಶದ ಪ್ರತಿಯೊಂದು ರಾಜ್ಯವೂ ಇಂತಹ ಪ್ರಯತ್ನ ಮಾಡಬೇಕೆಂದು ಹಿಂದೂಗಳು ಬಯಸುತ್ತಾರೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!