|

ನವದೆಹಲಿ – ದೆಹಲಿಯಲ್ಲಿ ವಾಯುಮಾಲಿನ್ಯ ವಿರೋಧದ ಹೆಸರಿನಲ್ಲಿ ನವೆಂಬರ್ ೨೩ ರಂದು ಸಂಜೆ ಇಂಡಿಯಾ ಗೇಟ್ ಪ್ರದೇಶದಲ್ಲಿ ಕೆಲವು ಯುವಕರು ಕುಖ್ಯಾತ ನಕ್ಸಲವಾದಿ ಹಿಡ್ಮಾ ಪರವಾಗಿ ಪ್ರತಿಭಟನೆ ನಡೆಸಿದರು. ‘ಮಾಡ್ವಿ ಹಿಡ್ಮಾ ಅಮರ್ ರಹೇ’, ‘ಜಿತ್ನೆ ಹಿಡ್ಮಾ ಮಾರೋಗೇ, ಹರ್ ಘರ್ ಮೇ ಹಿಡ್ಮಾ ಪೈದಾ ಹೋಂಗೆ’, ‘ಮಾಡ್ವಿ ಹಿಡ್ಮಾ ಜಿಂದಾಬಾದ್’, ‘ಮಾಡ್ವಿ ಹಿಡ್ಮಾಗೆ ಲಾಲ್ ಸಲಾಂ’ ಇಂತಹ ಘೋಷಣೆಗಳನ್ನು ಯುವಕರು ಕೂಗಿದರು. ಈ ಯುವಕರ ಕೈಯಲ್ಲಿ ನಕ್ಸಲವಾದಿ ಹಿಡ್ಮಾನನ್ನು ಬೆಂಬಲಿಸುವ ಫಲಕಗಳು, ಭಾವಚಿತ್ರಗಳಿದ್ದವು. ಹಿಡ್ಮಾನನ್ನು ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರಿಗೆ ಹೋಲಿಸುವ ಫಲಕ ಪ್ರದರ್ಶಿಸಲಾಯಿತು. ಹಿಡ್ಮಾನನ್ನು ‘ಜಲ, ಜಂಗಲ್ ಮತ್ತು ಭೂಮಿಯ ರಕ್ಷಕ’ ಎಂದು ಬಣ್ಣಿಸಲಾಗಿತ್ತು. ಪೊಲೀಸರು ಈ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ, ಈ ನಗರ ನಕ್ಸಲವಾದಿ ಯುವಕರು ಪೊಲೀಸರ ಮೇಲೆ ‘ಮೆಣಸಿನಕಾಯಿ ಸ್ಪ್ರೇ’ಯನ್ನು (ಆತ್ಮರಕ್ಷಣೆಗಾಗಿ ಬಳಸುವ, ಕಣ್ಣು ಮತ್ತು ಉಸಿರಾಟದ ಮಾರ್ಗದಲ್ಲಿ ತೀವ್ರ ಉರಿಯೂತವನ್ನು ಉಂಟುಮಾಡುವ ಖಾರದ ದ್ರವ) ಸಿಂಪಡಿಸಿದರು. ಇದರಲ್ಲಿ ಕೆಲವು ಪೊಲೀಸರು ಗಾಯಗೊಂಡರು. ಈ ಘಟನೆ ಬಳಿಕ ಪೊಲೀಸರು ೨೩ ಜನರನ್ನು ಬಂಧಿಸಿದ್ದಾರೆ. (ಮಾಲಿನ್ಯದ ವಿರೋಧದ ಹೆಸರಿನಲ್ಲಿ ನಕ್ಸಲವಾದಿಗಳನ್ನು ಬೆಂಬಲಿಸುವುದು, ನಗರ ನಕ್ಸಲವಾದಿಗಳ ಹೊಸ ಕಥಾನಕವಾಗಿದೆ. ಸಾಮಾಜಿಕ ಕಾರ್ಯಕರ್ತರ ನೆಪದಲ್ಲಿ ನಕ್ಸಲವಾದಿಗಳ ವೈಭವೀಕರಣವನ್ನು ಸಮಯಕ್ಕೆ ಸರಿಯಾಗಿ ತಡೆಯುವುದು ಅವಶ್ಯಕ! – ಸಂಪಾದಕರು)
🔥 Delhi ‘Air Pollution’ Protest Unmasks Urban Naxal Nexus
Protesting youth rallied openly glorifying Naxalite Hidma, shouting slogans like “Hidma Amar Rahe”, “Har Ghar Mein Hidma Paida Hoga”, “Lal Salam Hidma” 🚩
They even carried placards & photos of the terrorist.
— Sanatan Prabhat (@SanatanPrabhat) November 24, 2025
೧. ಪೊಲೀಸರು ಈ ನಗರ ನಕ್ಸಲವಾದಿಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ, ಯುವಕರು ಪೊಲೀಸರು ಹಾಕಿದ್ದ ‘ಬ್ಯಾರಿಕೇಡ್’ಗಳನ್ನು ತೆಗೆದು ಮುಂದೆ ಹೋಗಲು ಪ್ರಯತ್ನಿಸಿ ರಸ್ತೆಯನ್ನು ತಡೆದರು. ಪೊಲೀಸ್ ಅಧಿಕಾರಿಗಳು ಅನೇಕ ಆಂಬ್ಯುಲೆನ್ಸ್‌ಗಳು ಮತ್ತು ವೈದ್ಯರು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರು; ಆದ್ದರಿಂದ ಪ್ರತಿಭಟನಾಕಾರರನ್ನು ಹಿಂದೆ ಸರಿಯುವಂತೆ ವಿನಂತಿಸಲಾಯಿತು; ಆದರೆ ಅವರು ಜಾಗ ಖಾಲಿ ಮಾಡಲಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆಯನ್ನು ಅರಿತ ಪೊಲೀಸರು ಅವರನ್ನು ದೂರ ಸರಿಸಲು ಪ್ರಯತ್ನಿಸಿದಾಗ, ಕೆಲವರು ಪೊಲೀಸರ ಮೇಲೆ ಮೆಣಸಿನಕಾಯಿ ಸ್ಪ್ರೇ ಸಿಂಪಡಿಸಿದರು. ಈ ವೇಳೆ ಕೆಲವು ಪೊಲೀಸರು ಗಾಯಗೊಂಡು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಪೊಲೀಸರು ನಗರ ನಕ್ಸಲವಾದಿಗಳನ್ನು ತೆರವುಗೊಳಿಸಿ ಪ್ರದೇಶವನ್ನು ಮುಕ್ತಗೊಳಿಸಿದರು.
೨. ನವದೆಹಲಿಯ ಉಪ ಪೊಲೀಸ್ ಆಯುಕ್ತರಾದ ದೇವೇಷ ಕುಮಾರ್ ಅವರು ಈ ಕುರಿತು ಮಾತನಾಡಿ, ಇಂತಹ ಘಟನೆ ಮೊದಲ ಬಾರಿಗೆ ಅನುಭವವಾಗಿದೆ. ನೇರವಾಗಿ ಪೊಲೀಸರ ಮೇಲೆ ಆಕ್ರಮಣ ಮಾಡಲಾಗಿದೆ. ಸಂಬಂಧಿತರ ವಿರುದ್ಧ ಕಾನೂನು ಕ್ರಮ ಮುಂದುವರೆದಿದೆ ಎಂದು ವಿವರಿಸಿದರು.
ಯಾರು ಈ ಹಿಡ್ಮಾ?
೧ ಕೋಟಿ ರೂಪಾಯಿ ತಲೆದಂಡವಿರುವ ನಕ್ಸಲವಾದಿ ಮಾಡ್ವಿ ಹಿಡ್ಮಾ ನವೆಂಬರ್ ೧೮ ರಂದು ಆಂಧ್ರಪ್ರದೇಶದ ಎಲೂರು ಸೀತಾರಾಮ ರಾಜು ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟನು. ಈತ ೨೫ ವರ್ಷಗಳಿಂದ ಛತ್ತೀಸ್‌ಗಢದ ಬಸ್ತರ್ ನಲ್ಲಿ ಸಕ್ರಿಯವಾಗಿದ್ದನು. ಈತ ೨೫ ಪ್ರಮುಖ ಆಕ್ರಮಣಗಳ ರೂವಾರಿ ಆಗಿದ್ದನು.
ಸಂಪಾದಕೀಯ ನಿಲುವು
|
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ