14 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಹೊರಹಾಕಿದ ಸೌದಿ ಅರೇಬಿಯಾ ! : Saudi Arabia Deportation

ರಿಯಾದ (ಸೌದಿ ಅರೇಬಿಯಾ) – ಸೌದಿ ಅರೇಬಿಯಾ 14 ಸಾವಿರಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ದೇಶದಿಂದ ಹೊರಹಾಕಿದೆ. ಗೃಹ ಸಚಿವಾಲಯವು, ವಸತಿ ಕಾನೂನು, ಕಾರ್ಮಿಕ ನಿಯಮಗಳು ಮತ್ತು ಗಡಿ ಭದ್ರತಾ ಕಾನೂನನ್ನು ಉಲ್ಲಂಘಿಸಿದ ವಿದೇಶಿ ಪ್ರಜೆಗಳ ವಿರುದ್ಧ ದೇಶಾದ್ಯಂತ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ತಿಳಿಸಿದೆ. ಇದರ ಅಡಿಯಲ್ಲಿ, ಒಂದು ವಾರದಲ್ಲಿ 14 ಸಾವಿರದ 206 ಜನರನ್ನು ಅವರ ದೇಶಗಳಿಗೆ ಮರಳಿ ಕಳುಹಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯೆಮೆನ್ ಮತ್ತು ಇಥಿಯೋಪಿಯಾ ದೇಶಗಳ ನಾಗರಿಕರಿದ್ದರು.

‘ಗಲ್ಫ್ ನ್ಯೂಸ್’ ವರದಿಯ ಪ್ರಕಾರ, ನವೆಂಬರ್ 13 ರಿಂದ 19 ರ ಅವಧಿಯಲ್ಲಿ ಭದ್ರತಾ ಪಡೆಗಳು ಇತರೆ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದವು. ಇದರಲ್ಲಿ ಒಟ್ಟು 22 ಸಾವಿರದ 094 ಜನರನ್ನು ಬಂಧಿಸಲಾಗಿದೆ. ಸೌದಿ ಅರೇಬಿಯಾದ ಅಧಿಕಾರಿಗಳು 21 ಸಾವಿರದ 856 ಜನರನ್ನು ಪ್ರಯಾಣ ದಾಖಲೆಗಳ ಪೂರ್ಣಗೊಳಿಸುವಿಕೆಗಾಗಿ ಅವರ ರಾಯಭಾರ ಕಚೇರಿಗಳಿಗೆ ಕಳುಹಿಸಿದ್ದಾರೆ. ಇವರಲ್ಲಿ 4 ಸಾವಿರದ 555 ಜನರು ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದರು. ದೇಶಕ್ಕೆ ಅನಧಿಕೃತವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ 1 ಸಾವಿರದ 867 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಶೇ. 34 ರಷ್ಟು ಜನರು ಯೆಮೆನ್ ಮತ್ತು ಶೇ. 65 ರಷ್ಟು ಜನರು ಇಥಿಯೋಪಿಯಾದ ನಾಗರಿಕರಾಗಿದ್ದರು. ಸೌದಿ ಅರೇಬಿಯಾದಿಂದ ಕಾನೂನುಬಾಹಿರವಾಗಿ ಹೊರಹೋಗಲು ಪ್ರಯತ್ನಿಸುತ್ತಿದ್ದ 29 ಜನರನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಮಾತ್ರ ಕಳೆದ ಹಲವು ದಶಕಗಳಿಂದ ಬಾಂಗ್ಲಾದೇಶದ ನುಸುಳುಕೋರರು ಸುಖವಾಗಿ ವಾಸಿಸುತ್ತಿದ್ದಾರೆ! ಇದು ಸ್ವಾತಂತ್ರ್ಯದ ನಂತರದ ಇಂದಿನವರೆಗಿನ ಎಲ್ಲ ಸರಕಾರಗಳನ್ನು ನಡೆಸಿದವರ ದೊಡ್ಡ ವೈಫಲ್ಯವಾಗಿದೆ !

 

ನಿಯಮ ಉಲ್ಲಂಘಿಸಿದ ಜನರಿಗೆ ಸಹಾಯ ಮಾಡಿದವರ ಬಂಧನ!

ನಿಯಮಗಳನ್ನು ಉಲ್ಲಂಘಿಸಿದವರಿಗೆ ಆಶ್ರಯ ನೀಡುವುದು, ಅವರಿಗೆ ವಾಹನ ಒದಗಿಸುವುದು ಅಥವಾ ಅವರನ್ನು ಕಾನೂನುಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಳ್ಳುವುದು, ಈ ಆರೋಪಗಳ ಅಡಿಯಲ್ಲಿ 32 ಜನರನ್ನು ಬಂಧಿಸಲಾಗಿದೆ. ಸೌದಿ ಆಡಳಿತವು ನಿಯಮ ಉಲ್ಲಂಘಿಸಿದವರಿಗೆ ಸಹಾಯ ಮಾಡುವವರಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ಎಲ್ಲಾ ನಾಗರಿಕರು ಕಾನೂನಿನ ಪ್ರಕ್ರಿಯೆಗಳನ್ನು ಅನುಸರಿಸುವುದು ಅಗತ್ಯವಾಗಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಭಯೋತ್ಪಾದಕರು ಮತ್ತು ನುಸುಳುಕೋರರಿಗೆ ಸ್ಥಳೀಯರಿಂದ ರಾಜಾರೋಷವಾಗಿ ಸಹಾಯ ಮಾಡಲಾಗುತ್ತದೆ. ಇಷ್ಟೇ ಅಲ್ಲ, ಅನೇಕ ನುಸುಳುಕೋರರು ಭಾರತದ ಗುರುತಿನ ಚೀಟಿಗಳನ್ನು ಸಹ ಹೊಂದಿದ್ದಾರೆ. ಭಯೋತ್ಪಾದಕರು ಮತ್ತು ನುಸುಳುಕೋರರಿಗೆ ಸಹಾಯ ಮಾಡುವವರಿಗೆ ದೇಶದಲ್ಲಿ ಇದುವರೆಗೆ ಎಂದಾದರೂ ಕಠಿಣ ಶಿಕ್ಷೆ ವಿಧಿಸಲಾಗಿದೆಯೇ?