ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಲಿಮರ ಪ್ರವೇಶ ವಿರೋಧಿಸಿ ಹೋರಾಟ ಸಮಿತಿ ಸ್ಥಾಪನೆ

ಜಮ್ಮು – ಜಮ್ಮುವಿನ ಹಲವಾರು ಪ್ರಮುಖ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು, ವ್ಯಾಪಾರಿ ಸಂಘಟನೆಗಳ ಜೊತೆಗೆ ಸ್ಥಳೀಯ ಪ್ರಭಾವಿ ಗುಂಪುಗಳ ಸಹಯೋಗದೊಂದಿಗೆ ‘ಶ್ರೀ ಮಾತಾ ವೈಷ್ಣೋದೇವಿ ಸಂಘರ್ಷ ಸಮಿತಿ’ಯನ್ನು ಸ್ಥಾಪಿಸಿವೆ. ಕಾರ್ಗಿಲ್ ಯುದ್ಧದ ವೀರ ಕರ್ನಲ್ ಸುಖಬೀರ್ ಸಿಂಗ್ ಮಾನ್ಕೋಟಿಯಾ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ. ಸನಾತನ ಧರ್ಮ ಸಭಾ, ಜಮ್ಮು-ಕಾಶ್ಮೀರದ ಮುಖ್ಯಸ್ಥರಾದ ಪ್ರಶ್ನೋತಮ್ ದಾದಿಚಿ ಅವರು ಸಮಿತಿಯ ಸ್ಥಾಪನೆಯ ಅಧಿಕೃತ ಘೋಷಣೆ ಮಾಡಿದರು. ‘ಶ್ರೀ ಮಾತಾ ವೈಷ್ಣೋದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್’ಗೆ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡಿರುವ ಪ್ರವೇಶವನ್ನು ರದ್ದುಗೊಳಿಸಲು ಸಂಘಟಿತ ಆಂದೋಲನವನ್ನು ಪ್ರಾರಂಭಿಸುವುದಾಗಿ ಸಮಿತಿಯು ಘೋಷಿಸಿದೆ.

೧. ಸಮಿತಿಯ ಸದಸ್ಯರ ಅಭಿಪ್ರಾಯದಂತೆ : ಈ ವೈದ್ಯಕೀಯ ಸಂಸ್ಥೆಯು ಹಿಂದೂ ಭಕ್ತರ ಕೊಡುಗೆಯಿಂದ ನಿರ್ಮಾಣಗೊಂಡಿದ್ದು, ಅದರ ನಿರ್ವಹಣೆಯೂ ಅದೇ ನಿಧಿಯಿಂದ ನಡೆಯುತ್ತಿದೆ. ಆದ್ದರಿಂದ, ಈ ಸಂಸ್ಥೆಯಲ್ಲಿನ ಸೀಟುಗಳನ್ನು ಕೇವಲ ಹಿಂದೂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಹಿಂದೂ ಭಕ್ತರ ಅರ್ಪಣೆಯಿಂದ ಸಂಸ್ಥೆಯ ನಿರ್ಮಾಣವಾಗಿರುವಾಗ, ಅದರ ಲಾಭ ಕೂಡ ಹಿಂದೂ ಸಮಾಜಕ್ಕೇ ಸಿಗಬೇಕು.

೨. ಶ್ರೀ ಮಾತಾ ವೈಷ್ಣೋದೇವಿ ಸಂಘರ್ಷ ಸಮಿತಿಯು ಆದಷ್ಟು ಬೇಗನೆ ಒಂದು ಮುಖ್ಯ ಸಮಿತಿಯ ರಚನೆ ಮಾಡುವುದಾಗಿ ಘೋಷಿಸಿದೆ. ಈ ನೂತನ ಸಮಿತಿಯ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಈ ಆಂದೋಲನಕ್ಕಾಗಿ ‘ ಹಿಂದೂ ಮನೆ ಫಾರ್ ಹಿಂದೂ ಕಾಸ್ ‘ (‘ಹಿಂದೂಗಳಿಗಾಗಿ ಹಿಂದೂಗಳ ಹಣ’) ಎಂಬ ಘೋಷವಾಕ್ಯವನ್ನು ಕೂಡ ಸಿದ್ಧಪಡಿಸಲಾಗಿದೆ.