|

ನವದೆಹಲಿ – ಲಂಡನ್ ಅಥವಾ ನ್ಯೂಯಾರ್ಕ್‌ನಂತಹ ನಗರಗಳಲ್ಲಿ ಮುಸಲ್ಮಾನರು ಮೇಯರ್ ಆಗಬಹುದು; ಆದರೆ ಭಾರತದಲ್ಲಿ ಒಬ್ಬ ಮುಸಲ್ಮಾನನಿಗೆ ವಿಶ್ವವಿದ್ಯಾಲಯದ ಕುಲಪತಿ ಆಗುವ ಅವಕಾಶವೂ ಸಿಗುವುದಿಲ್ಲ. ಒಂದು ವೇಳೆ ಯಾರಾದರೂ ಮುಸಲ್ಮಾನರು ಆ ಹುದ್ದೆಗೆ ತಲುಪಿದರೆ, ಅವರ ಭವಿಷ್ಯವು ಜೈಲಿಗೆ ಹೋಗಬೇಕಾದ ಆಜಂ ಖಾನ್ ಅವರಂತಾಗುತ್ತದೆ. (ಸಮಾಜವಾದಿ ಪಕ್ಷದ ಆಜಂ ಖಾನ್ ಅವರಿಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು.) ಅಲ್-ಫಲಾಹ್ ವಿಶ್ವವಿದ್ಯಾಲಯದ ಜಾವೇದ್ ಅಹ್ಮದ್ ಅವರನ್ನು ಸಹ ಕಾರಾಗೃಹಕ್ಕೆ ಹಾಕಲಾಯಿತು. ಸ್ವಾತಂತ್ರ್ಯದ ನಂತರ ದೇಶದ ಸರಕಾರವು ಮುಸಲ್ಮಾನರು ತಲೆ ಎತ್ತದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿದೆ. ಅಲ್ಲದೆ ದೇಶವನ್ನು ಅನಾವಶ್ಯಕವಾಗಿ ಧಾರ್ಮಿಕ ಆಧಾರದ ಮೇಲೆ ವಿಭಜಿಸಲಾಗುತ್ತಿದೆ ಎಂದು ‘ಜಮೀಯತ್ ಉಲೇಮಾ-ಎ-ಹಿಂದ್’ ಎಂಬ ಇಸ್ಲಾಮಿಕ್ ಸಂಸ್ಥೆಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಈ ಹೇಳಿಕೆಯ ಕುರಿತು ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
🔥 Victimhood Politics EXPOSED 🚨
Maulana Arshad Madani claims “Muslims can become Mayors abroad but not even Vice-Chancellors in India!” 🤦♂️
And he even defends the President of Al-Falah University – accused of Jihadi terror plotting against the nation😡
These so-called… https://t.co/Sc7pRGleYj pic.twitter.com/Z6ncpYv35o
— Sanatan Prabhat (@SanatanPrabhat) November 23, 2025
‘ಮುಸಲ್ಮಾನರಿಗೆ ಮಾತ್ರವಲ್ಲ, ದಲಿತರು ಮತ್ತು ಇತರ ಹಿಂದುಳಿದ ವರ್ಗದವರಿಗೂ ಅನ್ಯಾಯ!’ – ಕಾಂಗ್ರೆಸ್ ನಾಯಕ ಉದಿತ ರಾಜ ಅವರಿಂದ ಮದನಿಗೆ ಬೆಂಬಲ

ಕಾಂಗ್ರೆಸ್ ನಾಯಕ ಉದಿತ ರಾಜ ಅವರು, ಕೇವಲ ಮುಸಲ್ಮಾನರಿಗೆ ಮಾತ್ರವಲ್ಲದೆ, ದಲಿತರು ಮತ್ತು ಇತರ ಹಿಂದುಳಿದ ವರ್ಗದವರಿಗೂ ವಿವಿಧ ಹುದ್ದೆಗಳಿಗೆ ನೇಮಕಾತಿ ನೀಡುತ್ತಿಲ್ಲ, ಎಂದು ಹೇಳಿದರು. (ಭಾರತದ ರಾಷ್ಟ್ರಪತಿಯವರು ಬುಡಕಟ್ಟು ಸಮುದಾಯದವರಾಗಿರುವಾಗ ಇಂತಹ ಹೇಳಿಕೆ ನೀಡುವುದು ಸುಳ್ಳಿನ ಪರಮಾವಧಿಯಾಗಿದೆ ! – ಸಂಪಾದಕರು) ಕೇಂದ್ರ ಸರಕಾರವು ಒಂದು ನಿರ್ದಿಷ್ಟ ಸಮುದಾಯವನ್ನು ಮಾತ್ರ ಬೆಂಬಲಿಸುತ್ತದೆ. ದೇಶದ 48 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಬ್ಬರೂ ಮುಸಲ್ಮಾನ, ದಲಿತ ಅಥವಾ ಹಿಂದುಳಿದ ವರ್ಗದ ಕುಲಪತಿಯಿಲ್ಲ. (ಒಂದೆಡೆ ದೇಶದಲ್ಲಿ ಜಾತಿ-ಭೇದವನ್ನು ತೊಡೆದುಹಾಕಬೇಕು ಎಂದು ಕೂಗಾಡುವುದು, ಇನ್ನೊಂದೆಡೆ ಇಂತಹ ಬೇಡಿಕೆಗಳನ್ನು ಮಾಡುವುದು ಸಮಾಜದ್ರೋಹವಾಗಿದೆ ! – ಸಂಪಾದಕರು) ಅನೇಕ ಪ್ರಮುಖ ಸಂಸ್ಥೆಗಳಲ್ಲಿಯೂ ಇವರು ಕಾಣಿಸುವುದಿಲ್ಲ. ಸಂಘ ಮತ್ತು ಭಾಜಪ ಸಿದ್ಧಾಂತಕ್ಕೆ ಸಂಬಂಧಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆದಿದ್ದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಇಡೀ ವಿಶ್ವವಿದ್ಯಾಲಯವನ್ನು ದೂಷಿಸುವುದು ತಪ್ಪು. ಇತ್ತೀಚಿನ ಭಾರತೀಯ ಆಡಳಿತ ಸೇವೆಯ ನೇಮಕಾತಿಯಲ್ಲಿ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಒಬ್ಬ ಅಭ್ಯರ್ಥಿಯೂ ಇರಲಿಲ್ಲ. ಸರಕಾರವು ಈ ಸಮುದಾಯಗಳನ್ನು ದೂರವಿಡುತ್ತಿದೆ, ಎಂದು ಅವರು ಆರೋಪಿಸಿದರು.
ಮುಸಲ್ಮಾನರಿಗೆ ಭಾರತದಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಯಾವ ದೇಶದಲ್ಲಿಯೂ ಇಲ್ಲ! – ಸಂತ ರಾಮವಿಲಾಸ ವೇದಾಂತಿ

ಅಯೋಧ್ಯೆಯ ಸಂತ ರಾಮವಿಲಾಸ ವೇದಾಂತಿ ಅವರು ಮಾತನಾಡುತ್ತಾ, ಹೆಚ್ಚಿನ ರಾಜ್ಯಗಳಲ್ಲಿ ಮುಸಲ್ಮಾನ ಶಾಸಕರು ಮತ್ತು ಸಂಸದರಿದ್ದಾರೆ. ಅವರನ್ನು ದಮನ ಮಾಡಿದ್ದರೆ, ಅವರು ಚುನಾಯಿತರಾಗುತ್ತಿರಲಿಲ್ಲ. ಭಾರತದಲ್ಲಿ ಜನಪ್ರತಿನಿಧಿಗಳಿಗೆ ನೀಡಿರುವ ಸ್ವಾತಂತ್ರ್ಯದ ಭಾವನೆಯು ಬೇರೆ ಯಾವುದೇ ಧರ್ಮದವರಿಗೆ ಸಿಗುವುದಿಲ್ಲ. ಮುಸಲ್ಮಾನರಿಗೆ ದೇಶದಲ್ಲಿ ಮದರಸಾಗಳನ್ನು ತೆರೆಯಲು ಮುಕ್ತ ಅವಕಾಶವಿದೆ ಮತ್ತು ಅದಕ್ಕೆ ಯಾವುದೇ ಮಿತಿಯಿಲ್ಲ. ಮದನಿ ಅವರು ತಪ್ಪು ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಸಾಮಾಜಿಕ ಸೌಹಾರ್ದಕ್ಕಾಗಿ ಮಾಡಿರುವ ಕೆಲಸವನ್ನು ಹಿಂದೆ ಯಾವ ಪ್ರಧಾನಿಯೂ ಮಾಡಿಲ್ಲ.
ಅವರು ಚೀನಾದಲ್ಲಿ ಮುಸಲ್ಮಾನರ ಪರಿಸ್ಥಿತಿಯನ್ನು ನೋಡಬೇಕು. ಅಲ್ಲಿ ಮಸೀದಿಗಳನ್ನು ಕೆಡವಲಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಶುಕ್ರವಾರದಂದು ರಸ್ತೆಯ ಮೇಲೆ ನಮಾಜ್ ಮಾಡುವುದಿಲ್ಲ. ಆದರೆ ಭಾರತದಲ್ಲಿ ಮುಸಲ್ಮಾನರಿಗೆ ರಸ್ತೆಯ ಮೇಲೆ ನಮಾಜ್ ಮಾಡಲು ಅವಕಾಶವಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಮುಸಲ್ಮಾನರಿಗೆ ಭಾರತದಲ್ಲಿರುವಂತಹ ಸ್ವಾತಂತ್ರ್ಯವಿಲ್ಲ ಎಂದು ಅವರು ಹೇಳಿದರು.
ಭಾರತದ ಮುಸಲ್ಮಾನರು ಸುಖವಾಗಿ ಬದುಕುತ್ತಿದ್ದಾರೆ!

ಅಯೋಧ್ಯೆಯ ಸೀತಾರಾಮ್ ದಾಸ್ ಮಹಾರಾಜ್ ಅವರು ಮಾತನಾಡುತ್ತಾ, ಮದನಿ ಅವರ ಹೇಳಿಕೆ ಖಂಡನೀಯವಾಗಿದೆ. ಭಾರತದಲ್ಲಿ ಮುಸಲ್ಮಾನರು ಶಾಂತಿಯಿಂದ ನೆಲೆಸಿದ್ದಾರೆ. ಅನೇಕ ದೇಶಗಳಲ್ಲಿ ಮಸೀದಿಗಳನ್ನು ಕೆಡವಲಾಗುತ್ತಿದೆ. ಚೀನಾ ಮತ್ತು ಅಮೆರಿಕಾದಲ್ಲಿ ಇದೇ ಪರಿಸ್ಥಿತಿಯಿದೆ. ಅದರ ಬಗ್ಗೆ ಅವರು ಏನೂ ಮಾತನಾಡುವುದಿಲ್ಲ. ಭಾರತದಲ್ಲಿ ಅನೇಕ ಮುಸಲ್ಮಾನರು ಮಂತ್ರಿಗಳಾಗಿದ್ದಾರೆ ಮತ್ತು ಆರಿಫ್ ಖಾನ್ ಅವರು ಬಿಹಾರದ ರಾಜ್ಯಪಾಲರಾಗಿದ್ದಾರೆ. ಇದು ಅವರಿಗೆ ಕಾಣುತ್ತಿಲ್ಲ, ಎಂದು ಟೀಕಿಸಿದರು.
ಹಿಂದೂಗಳಿಗಿಂತ ದೊಡ್ಡ ಸ್ನೇಹಿತ ಮುಸಲ್ಮಾನರಿಗೆ ಯಾರೂ ಇಲ್ಲ! – ಭಾಜಪ ವಕ್ತಾರ ಶಾಹನವಾಜ್ ಹುಸೇನ್

ಭಾಜಪ ವಕ್ತಾರ ಮತ್ತು ಮಾಜಿ ಕೇಂದ್ರ ಸಚಿವ ಶಾಹನವಾಜ್ ಹುಸೇನ್ ಅವರು, ಅರ್ಷದ್ ಮದನಿ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯ ಮತ್ತು ತಪ್ಪು ಎಂದು ಹೇಳಿದರು. ಭಾರತೀಯ ಅಲ್ಪಸಂಖ್ಯಾತರಿಗೆ ಸಿಗುವಷ್ಟು ಹಕ್ಕುಗಳು ಇತರ ದೇಶಗಳಲ್ಲಿ ಸಿಗುವುದಿಲ್ಲ. ಭಾರತದ ಮುಸಲ್ಮಾನರಿಗೆ ಭಾರತಕ್ಕಿಂತ ಉತ್ತಮವಾದ ಸ್ಥಳವಿಲ್ಲ, ಹಿಂದೂಗಳಿಗಿಂತ ಉತ್ತಮವಾದ ಸ್ನೇಹಿತರಿಲ್ಲ, ಮತ್ತು ಪ್ರಧಾನಿ ಮೋದಿ ಅವರಿಗಿಂತ ಸೂಕ್ತವಾದ ನಾಯಕತ್ವವಿಲ್ಲ. ದೇಶವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಎಂಬ ಧ್ಯೇಯದ ಮೇಲೆ ನಡೆಯುತ್ತದೆ. ಅನೇಕ ನಗರಗಳಲ್ಲಿ ಮುಸಲ್ಮಾನರು ಮೇಯರ್ ಆಗಿದ್ದಾರೆ. ದೊಡ್ಡ ಸಾಂವಿಧಾನಿಕ ಹುದ್ದೆಗಳಲ್ಲಿಯೂ ಅವರು ಕಾಣುತ್ತಾರೆ. ಭಾರತದ ಒಬ್ಬ ಮುಸಲ್ಮಾನನು ರಾಷ್ಟ್ರಪತಿಯಾಗಬಹುದು, ಮುಖ್ಯ ನ್ಯಾಯಮೂರ್ತಿಯಾಗಬಹುದು, ಕ್ರಿಕೆಟ್ ಅಥವಾ ಹಾಕಿ ತಂಡದ ನಾಯಕನಾಗಬಹುದು, ವಾಯುಪಡೆಯ ಮುಖ್ಯಸ್ಥನಾಗಬಹುದು. ಭಾರತದಲ್ಲಿ ಮುಸಲ್ಮಾನರಿಗೆ ರಾಷ್ಟ್ರಪತಿ ಸ್ಥಾನ ಸಿಕ್ಕಿದೆ. ಆದರೂ ಮದನಿ ಅವರು ಇಂತಹ ಹೇಳಿಕೆ ನೀಡುತ್ತಾರೆ.
ಮದನಿ ಕ್ಷಮೆಯಾಚಿಸಬೇಕು!
ಒಂದು ಕಾಲದಲ್ಲಿ ಈ ಸಂಸ್ಥೆಯು (‘ಜಮೀಯತ್ ಉಲೇಮಾ-ಎ-ಹಿಂದ್’) ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ ವಹಿಸಿತ್ತು; ಆದರೆ ಈಗ ಅದು ಕುಟುಂಬ ರಾಜಕಾರಣದ ಪ್ರಭಾವಕ್ಕೆ ಒಳಗಾಗಿದೆ ಎಲ್ಲರಿಗೂ ಬಾಗಿಲು ತೆರೆದಿಲ್ಲ ಎಂದು ಶಾಹನವಾಜ್ ಹುಸೇನ್ ಆರೋಪಿಸಿದರು. ಭಾರತದಲ್ಲಿ ಮುಸಲ್ಮಾನರನ್ನು ದಮನ ಮಾಡಲಾಗುತ್ತದೆ ಎಂಬ ವಾದ ಸಂಪೂರ್ಣವಾಗಿ ತಪ್ಪಾಗಿದೆ. ಮದನಿ ಅವರು ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಭಾರತದ ಪ್ರಜಾಪ್ರಭುತ್ವ ಬಲಿಷ್ಠ! – ಜನತಾ ದಳ (ಯುನೈಟೆಡ್)

ಜನತಾ ದಳ (ಯುನೈಟೆಡ್) ಪಕ್ಷದ ನಾಯಕ ನೀರಜ ಕುಮಾರ ಅವರು ಮಾತನಾಡುತ್ತಾ, ಭಾರತದ ಪ್ರಜಾಪ್ರಭುತ್ವ ಸುರಕ್ಷಿತ ಮತ್ತು ಬಲಿಷ್ಠವಾಗಿದೆ. ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ. ಪ್ರತಿಯೊಂದು ಧರ್ಮ ಮತ್ತು ಜಾತಿಯ ಜನರಿಗೂ ಪ್ರಗತಿಯ ಅವಕಾಶವಿದೆ. ಹಾಗಾದರೆ ಭಾರತದ ಬಗ್ಗೆ ಏಕೆ ಪ್ರಶ್ನೆ? ಎಂದು ಪ್ರಶ್ನಿಸಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!