|

ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನವೆಂಬರ್ 25 ರಂದು ಧ್ವಜಾರೋಹಣ ಸಮಾರಂಭವನ್ನು ಆಯೋಜಿಸಲಾಗಿದೆ. ಶ್ರೀರಾಮ ಮಂದಿರದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ನಡೆಯುತ್ತಿರುವುದರಿಂದ ಈ ಕಾರ್ಯಕ್ರಮವು ವಿಶೇಷವೆನಿಸಲಿದೆ. ಈ ಸಮಾರಂಭವು ಅವಿಸ್ಮರಣೀಯವಾಗಬೇಕೆಂದು ಶ್ರೀರಾಮಜನ್ಮಭೂಮಿ ಟ್ರಸ್ಟ್ ಮತ್ತು ಜಿಲ್ಲಾಡಳಿತವು ಶ್ರಮಿಸುತ್ತಿವೆ. ಈ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ. ದೇಶ-ವಿದೇಶಗಳ ಹೆಸರಾಂತ ಗಣ್ಯರಿಗೆ ಈ ಸಮಾರಂಭಕ್ಕೆ ಆಮಂತ್ರಣವನ್ನು ನೀಡಲಾಗಿದೆ. ಇದರ ಜೊತೆಗೆ, ಸಂಪೂರ್ಣ ಉತ್ತರ ಪ್ರದೇಶದಿಂದ 10 ಸಾವಿರ ಜನರಿಗೆ ವಿಶೇಷ ಆಮಂತ್ರಣವನ್ನು ನೀಡಲಾಗಿದೆ.
ಧ್ವಜಾರೋಹಣದ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳಿರಿ!
ಹಿಂದೂ ಧರ್ಮದಲ್ಲಿ ಧ್ವಜಾರೋಹಣವು ಅಧಿಕ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಗರುಡ ಪುರಾಣದ ಉಲ್ಲೇಖದ ಪ್ರಕಾರ, ಮಂದಿರದ ಮೇಲೆ ಹಾರಾಡುವ ಧ್ವಜವು ಅಲ್ಲಿ ದೇವತೆಯ ಉಪಸ್ಥಿತಿಯನ್ನು ಸೂಚಿಸುತ್ತದೆ. ಶಾಸ್ತ್ರಗಳಲ್ಲಿ, ದೇವಸ್ಥಾನದ ಗೋಪುರದ ಮೇಲಿರುವ ಧ್ವಜವನ್ನು ದೇವತೆಯ ಮಹಿಮೆ, ಶಕ್ತಿ ಮತ್ತು ಸಂರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ.
ಸರಯೂ ನದಿಯಿಂದ ಕಲಶಗಳೊಂದಿಗೆ ಶೋಭಾಯಾತ್ರೆ !
ಧ್ವಜಾರೋಹಣ ಸಮಾರಂಭದ ಮೊದಲು ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿವೆ. ಸರಯೂ ನದಿಯ ಸಂತ ತುಳಸಿದಾಸ ಘಾಟದಿಂದ 501 ಕಲಶಗಳೊಂದಿಗೆ ಭವ್ಯ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಈ ಯಾತ್ರೆಯಲ್ಲಿ ಮಹರ್ಷಿ ವಸಿಷ್ಠ ವೇದ ವಿದ್ಯಾಲಯ, ಕಾರಸೇವಕಪುರಂ ಮತ್ತು ವಿವಿಧ ಗುರುಕುಲಗಳ ವಟುಗಳು ಭಾಗವಹಿಸಿದ್ದರು.
ಭವ್ಯತೆಯ ಪ್ರತೀಕವಾದ ಧ್ವಜಾರೋಹಣ ಸಮಾರಂಭ ಹೀಗಿರಲಿದೆ
ನವೆಂಬರ್ 25 ರಂದು ಮಧ್ಯಾಹ್ನ 11.55 ರಿಂದ 12.10 ರವರೆಗಿನ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು ಧರ್ಮಧ್ವಜವನ್ನು ಸ್ಥಾಪಿಸಲಿದ್ದಾರೆ. ಧ್ವಜವನ್ನು ಏರಿಸಲು ‘ರಿಮೋಟ್ ಕಂಟ್ರೋಲ್’ ಮೂಲಕ ಗುಂಡಿಯನ್ನು ಒತ್ತಿದ ಕೇವಲ 10 ಸೆಕೆಂಡುಗಳಲ್ಲಿ ಧ್ವಜವು ಗಾಳಿಯಲ್ಲಿ ಹಾರಾಡಲು ಪ್ರಾರಂಭಿಸಲಿದೆ.
ಈ ದೈವೀ ಧರ್ಮಧ್ವಜವು ಹೇಗಿರಲಿದೆ ?
ಧರ್ಮಧ್ವಜದ ಬಣ್ಣವು ಕೇಸರಿ-ಭಗವಾ ಆಗಿದೆ. ಅದರ ಮೇಲೆ ಸೂರ್ಯವಂಶದ ಪ್ರತೀಕ ಚಿಹ್ನೆಗಳಿವೆ. ಧ್ವಜವು ಹಾರಾಡುತ್ತಿದ್ದಂತೆ, ದೇಶದಾದ್ಯಂತದ ಅನೇಕ ಮಠಗಳು, ದೇವಾಲಯಗಳು ಮತ್ತು ಸನಾತನ ಮನೆಗಳಲ್ಲಿ ಗಂಟಾನಾದ ಮೊಳಗಲಿದೆ.ಶ್ರೀರಾಮ ಮಂದಿರದ 161 ಅಡಿ ಎತ್ತರದ ಶಿಖರದ ಮೇಲೆ 42 ಅಡಿ ಕಂಬವನ್ನು ಅಳವಡಿಸಲಾಗಿದೆ. ಈ ಕಂಬದ ಮೇಲೆ 22 ಅಡಿ ಉದ್ದ ಮತ್ತು 11 ಅಡಿ ಅಗಲದ ಧ್ವಜವನ್ನು ಸ್ಥಾಪಿಸಲಾಗುತ್ತದೆ. ಈ ಧ್ವಜವು 4 ಕಿಲೋಮೀಟರ್ ದೂರದಿಂದಲೂ ಕಾಣಿಸಲಿದೆ. ಇದಕ್ಕಾಗಿ ‘ಆಟೋಮ್ಯಾಟಿಕ್ ಫ್ಲಾಗ್ ಹೋಸ್ಟಿಂಗ್ ಸಿಸ್ಟಮ್’ ಅಂದರೆ ಸ್ವಯಂಚಾಲಿತ ಧ್ವಜಾರೋಹಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಭವಿಷ್ಯದಲ್ಲಿಯೂ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಗಾಳಿ ಜೋರಾಗಿ ಬೀಸಿದರೆ ಧ್ವಜವು 360 ಕೋನಗಳಲ್ಲಿ ತಿರುಗುವ ವ್ಯವಸ್ಥೆ ಮಾಡಲಾಗಿದೆ. ದೇಶ-ವಿದೇಶಗಳ ಶ್ರೀರಾಮ ಭಕ್ತರು ದೂರದರ್ಶನದ ಮೂಲಕ ಮನೆಯಲ್ಲೇ ಕುಳಿತು ಈ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ