ನ್ಯಾಯಾಲಯಕ್ಕೆ ಕರೆತಂದಿದ್ದ ಆರೋಪಿಯ ವಿರುದ್ಧ ಪ್ರತಿಭಟನಕಾರರ ಆಕ್ರೋಶ; ಪೊಲೀಸರಿಂದ ಸೌಮ್ಯ ಲಾಠಿ ಪ್ರಹಾರ

ನಾಶಿಕ – ಮಾಲೆಗಾಂವ್ ನಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಜಯ ಖೈರನಾರ್ (ವಯಸ್ಸು24 ವರ್ಷ) ಎಂಬ ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆಯೆಂದು ತಿಳಿದ ಕೂಡಲೇ ಪ್ರತಿಭಟನಕಾರರು ನೇರವಾಗಿ ಪ್ರವೇಶ ದ್ವಾರವನ್ನು ಮುರಿದು ನ್ಯಾಯಾಲಯದೊಳಗೆ ನುಗ್ಗಲು ಪ್ರಯತ್ನಿಸಿದರು. ಇದರಿಂದ ಪೊಲೀಸರು ಸೌಮ್ಯ ಲಾಠಿ ಪ್ರಹಾರ ಮಾಡಬೇಕಾಯಿತು. ಈ ಪ್ರತಿಭಟನಾಕಾರರ ಗುಂಪಿನಲ್ಲಿ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
TENSION IN MALEGAON: Angry protesters attempted to storm the court during the hearing of Vijay Khairnar (24), accused of the brutal assault and murder of a 3-year-old girl.
Police resorted to a mild lathi-charge and shifted the hearing to video conferencing to control the… pic.twitter.com/cYa6TcK5YE
— Sanatan Prabhat (@SanatanPrabhat) November 22, 2025
ಪೊಲೀಸರು ಹೆಚ್ಚುತ್ತಿರುವ ಜನಸಮೂಹವನ್ನು ಮನಗಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಕರೆತರುವ ಕ್ರಮದಿಂದ ಹಿಂದೆ ಸರಿದರು ಮತ್ತು ವಿಚಾರಣೆಗಾಗಿ ‘ವೀಡಿಯೋ ಸಂವಾದ’ ವಿಧಾನವನ್ನು ಬಳಸಿಕೊಂಡರು. ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮಾಲೆಗಾಂವ್ ನ ಘಟನೆ ಅತ್ಯಂತ ದುರದೃಷ್ಟಕರವಾಗಿದೆ. ಈ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಇದರಿಂದ ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರಲ್ಲಿ ಎಷ್ಟು ಆಕ್ರೋಶವಿದೆ ಎಂಬುದು ಸ್ಪಷ್ಟವಾಗುತ್ತದೆ |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್