೧೯ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಸಲಾಮ್‌ನ ಬಂಧನ : Sukhanand Shetty Murder

  • ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪ ನಾಯಕ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣ

  • ಅನೇಕ ವರ್ಷ ವಿದೇಶದಲ್ಲಿ ನೆಲೆಸಿ ಭಾರತಕ್ಕೆ ಮರಳಿದ ನಂತರ ಬಂಧನ

ಎಡದಿಂದ: ಸುಖಾನಂದ ಶೆಟ್ಟಿ ಮತ್ತು ಆರೋಪಿ ಅಬ್ದುಲ್ ಸಲಾಂ ಅಡ್ಡೂರ್

ಮಂಗಳೂರು – ಭಾಜಪ ನಾಯಕ ಹಾಗೂ ಪ್ರಖರ ಹಿಂದುತ್ವನಿಷ್ಠ ಸುಖಾನಂದ ಶೆಟ್ಟಿ ಅವರ ಹತ್ಯೆ ಪ್ರಕರಣದಲ್ಲಿ ೧೯ ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ಅಬ್ದುಲ್ ಸಲಾಮ್ ಅದ್ದೂರು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈ ಮೊದಲು ೧೬ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ೧೧ ಆರೋಪಿಗಳು ಪರಾರಿಯಾಗಿದ್ದಾರೆ.

ಡಿಸೆಂಬರ್ ೧, ೨೦೦೬ ರಂದು ಹೊಸಬೆಟ್ಟು ಬಳಿ ಕಬೀರ್ ಮತ್ತು ಆತನ ಸಹಚರರು ಸುಖಾನಂದ ಶೆಟ್ಟಿ ಅವರನ್ನು ಹತ್ಯೆ ಮಾಡಿದ್ದರು. ಆರೋಪಿಗಳಿಗೆ ಕಬೀರ್‌ನ ಸಹೋದರರಾದ ಲತೀಫ್ ಅಲಿಯಾಸ್ ಅದ್ದೂರು ಲತೀಫ್ ಮತ್ತು ಅಬ್ದುಲ್ ಸಲಾಮ್ ಅದ್ದೂರು ಅವರು ಅದ್ದೂರು ಟಿಬೆಟ್ ಕಾಲೋನಿಯ ತಮ್ಮ ಮನೆಯಲ್ಲಿ ೨ ದಿನ ಆಶ್ರಯ ನೀಡಿದ್ದರು. ಹತ್ಯೆ ಮಾಡಿದ ನಂತರ ಅಬ್ದುಲ್ ಸಲಾಮ್ ಅದ್ದೂರು ೩ ತಿಂಗಳ ನಂತರ ದೇಶದಿಂದ ಪಲಾಯನ ಮಾಡಿದ್ದನು. ಇತ್ತೀಚೆಗೆ ಅವನು ಈ ಪ್ರದೇಶಕ್ಕೆ ಮರಳಿ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನ ಸಹೋದರ ಲತೀಫ್ ಇನ್ನೂ ವಿದೇಶದಲ್ಲಿದ್ದಾನೆ.

ಸಂಪಾದಕೀಯ ನಿಲುವು

ಇಂದು ಹಿಂದುತ್ವನಿಷ್ಠರ ರಕ್ತ ಹರಿಸುವ ಮತಾಂಧರು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿಕೊಂಡಿದ್ದರೂ, ಅವರನ್ನು ಬಂಧಿಸಿ ಶಿಕ್ಷೆ ನೀಡುವಂತಹ ಪೊಲೀಸರ ಅವಶ್ಯಕತೆ ಭಾರತಕ್ಕಿದೆ!